ಖಲಿಸ್ತಾನ ಉಗ್ರರ ಎಚ್ಚರಿಕೆ ಬೆನ್ನಲ್ಲೇ ಕೆನಾಡ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!
ಖಲಿಸ್ತಾನಿ ಉಗ್ರರ ಕಪಿಮುಷ್ಠಯಲ್ಲಿರುವ ಕೆನಡಾ ಸರ್ಕಾರ ಇದೀಗ ಭಾರತದ ವಿರುದ್ದ ಗಂಭೀರ ಆರೋಪ ಮಾಡಿ ಸಂಬಂಧವನ್ನೇ ಹದಗೆಡಿಸಿದೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರರು ಕೆನಾದಲ್ಲಿನ ಹಿಂದೂಗಳು ತಕ್ಷಣ ದೇಶ ತೊರೆಯುವಂತೆ ಸೂಚಿಸಿದ್ದರೆ. ಈ ಎಲ್ಲಾ ಬೆವಣಿಗೆ ಬೆನ್ನಲ್ಲೇ ಕೇಂದ್ರ ಸರ್ಕಾರ ಕೆನಾದಲ್ಲಿನ ಭಾರತೀಯರಿಗೆ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.

ನವದೆಹಲಿ(ಸೆ.20) ಭಾರತ ಹಾಗೂ ಕೆನಾಡಾ ಸಂಬಂಧ ಹಳಸಿದೆ. ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸಂಸತ್ತಿನಲ್ಲಿ ನೀಡಿದ ಹೇಳಿಕೆ ಕೋಲಾಹಲ ಸಷ್ಟಿಸಿದೆ. ಖಲಿಸ್ತಾನ ಉಗ್ರರ ಪರ ನಿಂತಿರುವ ಕೆನಡಾ ಸರ್ಕಾರ ಇದೀಗ ಭಾರತದ ವಿರುದ್ದ ಹರಿಹಾಯುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೆನಾಡದಲ್ಲಿ ಖಲಿಸ್ತಾನಿ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಕೆನಾಡದಲ್ಲಿ ಹಿಂದೂಗಳಿಗೆ ಎಚ್ಚರಿಕೆ ನೀಡಿದೆ. ತಕ್ಷಣವೇ ಕೆನಡಾ ತೊರೆಯುವಂತೆ ಸೂಚನೆ ನೀಡಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಭಾರತ ಸರ್ಕಾರ ಕೆನಾಡದಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಕೆನಾಡದಲ್ಲಿನ ರಾಜಕೀಯ ಬೆಳವಣಿಗೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಖಲಿಸ್ತಾನ ವಿರುದ್ಧ ಭಾರತ ಕ್ರಮಕ್ಕೆ ಆಗ್ರಹಿಸಿರುವುದು ಕೆನಡಾ ರಾಜಕೀಯವಾಗಿ ಬಳಕೆ ಮಾಡಿ ದ್ವೇಷ ಸಾಧಿಸುತ್ತಿದೆ. ಭಾರತ ವಿರೋಧಿ ಚಟುವಟಿಕೆಯನ್ನು ವಿರೋಧಿಸುತ್ತಿರುವ ಭಾರತೀಯರು, ಕೆನಾಡದಲ್ಲಿ ನೆಲೆಸಿರುವ ಭಾರತೀಯರ ಮೇಲೆ ಆಕ್ರಮಣದ ಸೂಚನೆಗಳು ಹರಿದಾಡುತ್ತಿದೆ. ಹೀಗಾಗಿ ಭಾರತೀಯರು ಅನಗತ್ಯವಾಗಿ ಕೆನಡಾದ ಬೇರೆ ಬೇರೆ ಪ್ರಾಂತ್ಯಗಳಿಗೆ ಪ್ರಯಾಣ ಮಾಡಬೇಡಿ. ಅನಗತ್ಯವಾಗಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುವುದನ್ನು ತಪ್ಪಿಸಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಬಾಯ್ಕಾಟ್ ಹೋರಾಟಕ್ಕೆ ಬೆದರಿಂದ ಬುಕ್‌ಮೈಶೋ, ಕೆನಡಾ ಗಾಯಕ ಶುಭನೀತ್ ಭಾರತ ಕಾರ್ಯಕ್ರಮ ರದ್ದು!
ಭಾರತೀಯ ವಿದೇಶಾಂಗ ಸಚಿವಾಲ ಈಗಾಗಲೇ ಕೆನಾಡ ಅಧಿಕಾರಿಗಳನ್ನು ಸಂಪರ್ಕಿಸಿ ಭಾರತೀಯರ ರಕ್ಷಣೆಗೆ ಸೂಚಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಭಾರತೀಯರ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದಿದೆ. ಕೆನಡಾದಲ್ಲಿ 2.3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇನ್ನು 7 ಲಕ್ಷ ಭಾರತೀಯರು ಕೆನಾಡದಲ್ಲಿ ವಾಸವಿದ್ದಾರೆ. ಕೆನಾಡದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಸಮುದಾಯವಿದೆ.
ಕಳೆದ 1-2 ವರ್ಷದಲ್ಲಿ ಕೆನಡಾದಲ್ಲಿ ಭಾರತದ ದೇವಾಲಯಗಳ ಮೇಲೆ ಖಲಿಸ್ತಾನಿಗಳ ದಾಳಿ ಹೆಚ್ಚಿತ್ತು. ಈ ಬಗ್ಗೆ ಕೆನಡಾ ಸರ್ಕಾರಕ್ಕೆ ಭಾರತ ಪ್ರತಿಭಟನೆ ಸಲ್ಲಿಸಿದ್ದರೂ, ಕೆನಡಾ ಸುಮ್ಮನಿತ್ತು. ಇತ್ತೀಚೆಗೆ ಭಾರತ-ಕೆನಡಾ ವ್ಯಾಪಾರ ಮಾತುಕತೆಗಳನ್ನು ಕೆನಡಾ ನಿಲ್ಲಿಸಿತ್ತು. ಇನ್ನು ಜಿ-20 ಶೃಂಗದ ವೇಳೆ ದಿಲ್ಲಿಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋರನ್ನು ಯಾರೂ ಹೆಚ್ಚು ಮಾತಾಡಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಜತೆಗಿನ ದ್ವಿಪಕ್ಷೀಯ ಚರ್ಚೆ ವೇಳೆ ಖಲಿಸ್ತಾನಿ ವಿಚಾರವಾಗೇ ಜಟಾಪಟಿ ನಡೆಸಿ, ಖಲಿಸ್ತಾನಿ ಹೋರಾಟ ಸಮರ್ಥಿಸಿದ್ದರು. ಅವರ ವಿಮಾನ ದಿಲ್ಲಿಯಲ್ಲಿ ಕೆಟ್ಟು ಸ್ವದೇಶಕ್ಕೆ ಹೋಗಲು 2 ದಿನ ವಿಳಂಬವಾಗಿತ್ತು. ಆಗ ಭಾರತ ಕೋರಿದರೂ ಏರ್ ಇಂಡಿಯಾ ವಿಮಾನ ಬಳಸಿ ಸ್ವದೇಶಕ್ಕೆ ಹೋಗಲು ಟ್ರುಡೋ ನಿರಾಕರಿಸಿದ್ದರು. ಇದು ಎರಡೂ ದೇಶಗಳ ಸಂಬಂಧ ಹಳಸಿದ್ದ ದ್ಯೋತಕವಾಗಿತ್ತು.
ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮಕ ಭೂಪಟ ಹಂಚಿದ ಗಾಯಕನ ಅನ್‌ಫಾಲೋ ಮಾಡಿದ ಕೊಹ್ಲಿ!