ಬಾಯ್ಕಾಟ್ ಹೋರಾಟಕ್ಕೆ ಬೆದರಿಂದ ಬುಕ್‌ಮೈಶೋ, ಕೆನಡಾ ಗಾಯಕ ಶುಭನೀತ್ ಭಾರತ ಕಾರ್ಯಕ್ರಮ ರದ್ದು!
ಖಲಿಸ್ತಾನ ಹೋರಾಟ ಬೆಂಬಲಿಸಿದ ಕೆನಡಾ ಮೂಲದ ಪಂಜಾಬಿ ಸಿಂಗ್ ಶುಭನೀತ್ ಸಿಂಗ್ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶುಭ್ ಭಾರತದಲ್ಲಿನ ಕಾರ್ಯಕ್ರಮಕ್ಕಾಗಿ ಬುಕ್‌ಮೈಶೋ ಬಹಿಷ್ಕರಿಸಲು ಅಭಿಯಾನವೂ ಆರಂಭಗೊಂಡಿತ್ತು. ಈ ಹೋರಾಟಕ್ಕೆ ಬೆದರಿದ ಬುಕ್‌ಮೈಶೋ ಶುಭನೀತ್ ಕಾನ್ಸರ್ಟ್ ರದ್ದು ಮಾಡಿದೆ. ಇಷ್ಟೇ ಅಲ್ಲ ಟಿಕೆಟ್ ಬುಕ್ ಮಾಡಿದ ಸಂಗೀತ ಆಸಕ್ತರಿಗೆ ಹಣ ವಾಪಸ್ ನೀಡುವುದಾಗಿ ಪ್ರಕಟಿಸಿದೆ.
ಭಾರತ ಹಾಗೂ ಕನಡಾ ನಡುವಿನ ಸಂಬಂಧ ಹಳಸಿರಿವುದು ಒಂದೆಡೆಯಾದರೆ, ಮತ್ತೊಂದೆಡೆ ಖಲಿಸ್ತಾನ ಹೋರಾಟ ಬೆಂಬಲಿಸಿ ಭಾರತದ ವಿವಾದಾತ್ಮಕ ನಕ್ಷೆ ಪೋಸ್ಟ್ ಮಾಡಿದ ಕೆನಡಾ ಮೂಲದ ಪಂಜಾಬಿ ಗಾಯಕ ಶುಭನೀತ್ ಸಿಂಗ್ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಸೆಪ್ಟೆಂಬರ್ 23 ರಿಂದ ಸಂಗೀತ ಕಾರ್ಯಕ್ರಮಕ್ಕಾಗಿ ಭಾರತ ಪ್ರವಾಸ ಕೈಗೊಳ್ಳಬೇಕಿದ್ದ ಶುಭನೀತ್ ಸಿಂಗ್ ವಿರುದ್ಧ ತೀವ್ರ ಪ್ರತಿಭಟನೆಗಳು ಆರಂಭಗೊಂಡಿದೆ. ಖಲಿಸ್ತಾನ ಬೆಂಬಲಿಸಿದ ಕಾರಣ, ಈ ಕಾರ್ಯಕ್ರಮ ಆಯೋಜಿಸಿ ಟಿಕೆಟ್ ವಿತರಿಸುತ್ತಿದ್ದ ಬುಕ್‌ಮೈಶೋ ವಿರುದ್ಧವೂ ಪ್ರತಿಭಟನೆ ವ್ಯಕ್ತವಾಗಿತ್ತು.
ದೇಶದ ಸೌರ್ವಭೌಮತ್ವಕ್ಕೆ ಧಕ್ಕೆ ತಂದಿರುವ ಶುಭ್ ಕಾರ್ಯಕ್ರಮದ ಟಿಕೆಟ್ ವಿತರಣೆ ಮಾಡುತ್ತಿರುವ ಬುಕ್‌ಮೈಶೋ ಬಹಿಷ್ಕರಿಸಲು ಆಂದೋಲನ ಆರಂಭಗೊಂಡಿತ್ತು. ಈ ಹೋರಾಟಕ್ಕೆ ಬೆದರಿದ ಬುಕ್‌ಮೈಶೋ ಶುಭನೀತ್ ಸಿಂಗ್ ಕಾರ್ಯಕ್ರಮ ರದ್ದು ಮಾಡಿದೆ.
ಶುಭನೀತ್ ಸಿಂಗ್ ಕಾರ್ಯಕ್ರಮ ರದ್ದುಪಡಿಸಿರುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಬುಕ್‌ಮೈಶೋ, ಶುಭನೀತ್ ಸಂಗೀತ ಕಾರ್ಯಕ್ರಮ ರದ್ದು ಮಾಡಲಾಗಿದೆ. ಕಾರ್ಯಕ್ರಮದ ಟಿಕೆಟ್ ಖರೀದಿಸ ಆಸಕ್ತರಿಗೆ 7 ರಿಂದ 8 ದಿನದ ಒಳಗೆ ಹಣ ಮರುಪಾವತಿ ಮಾಡುವುದಾಗಿ ಹೇಳಿದೆ.
ಶುಭ್‌ನೀತ್ ಖಲಿಸ್ತಾನ ಬೆಂಬಲಿಸಿದ ಕಾರಣ ಪ್ರತಿಭಟನೆ ಆರಂಭಗೊಂಡರೂ ಬುಕ್‌ಮೈಶೋ ಟಿಕೆಟ್ ವಿತರಣೆ ಸ್ಥಗಿತಗೊಳಿಸದಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ #UninstallBookMyShow ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿತ್ತು.
ಈ ಆಂದೋಲನಕ್ಕೆ ಬೆದರಿಗ ಬುಕ್‌ಮೈಶೋ ಕಾರ್ಯಕ್ರಮ ರದ್ದು ಮಾಡಿದೆ. ಇದೀಗ ಕೆನಡಾದ ಸಿಂಗರ್ ಶುಭ್ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ. ಸೆಪ್ಟೆಂಬರ್ 23 ರಿಂದ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಶುಭ್ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ವಿವಾದ ಆರಂಭಗೊಳ್ಳುತ್ತಿದ್ದಂತೆ ಗಾಯಕ ಶುಭ್ ಭಾರತ ಪ್ರವಾಸದ ಸಂಪೂರ್ಣ ಪ್ರಾಯೋಜಕತ್ವ ನೀಡಿದ್ದ ಬೋಟ್ ಕಂಪನಿ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಈ ಮೂಲಕ ಭಾರತ ವಿರೋಧಿ ಚಟುವಟಿಕೆಗೆ ತಮ್ಮ ಬೆಂಬಲ ಇಲ್ಲ ಎಂದು ಪ್ರಕಟಿಸಿತ್ತು.
ಇದಕ್ಕೂ ಮೊದಲು ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ನೆಚ್ಚಿನ ಗಾಯಕನಾಗಿದ್ದ ಶುಭ್‌ರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು.