Asianet Suvarna News Asianet Suvarna News

ನರೇಂದ್ರ ಮೋದಿ ಜನರ ನಾಡಿ ಮಿಡಿತ ಅರಿತ ಪ್ರಧಾನಿ, ದಿ.ಪ್ರಣಬ್ ಮುಖರ್ಜಿ ಅಭಿಪ್ರಾಯ ಹಂಚಿಕೊಂಡ ಪುತ್ರಿ!

ಭಾರತದ ಜನರ ನಾಡಿ ಮಿಡಿತವನ್ನು ನಿಖರವಾಗಿ ಅಷ್ಟೇ ತೀವ್ರವಾಗಿ ಅರಿತ ನಾಯಕ ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರೀಯತೆ ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಂಡಿರುವ ಧೀಮಂತ ನಾಯಕ ಮೋದಿ ಎಂದು ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಹೇಳಿದ್ದರು. ಇದೀಗ ಈ ಕುತೂಹಲ ಮಾಹಿತಿಯನ್ನು ಪ್ರಣಬ್ ಪುತ್ರಿ ಶರ್ಮಿಷ್ಠಾ ಪುಸ್ತಕ ರೂಪದಲ್ಲಿ ಬಹಿರಂಗಗೊಳಿಸಿದ್ದಾರೆ.

PM Modi feels people pulse Accurately after Indira Gandhi Late Pranab Mukherjee dairy reveals insights ckm
Author
First Published Dec 6, 2023, 6:20 PM IST

ನವದೆಹಲಿ(ಡಿ.06) ಮಾಜಿ ರಾಷ್ಟ್ರಪತಿ, ದಿವಂಗತ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಹಲವು ಸ್ಫೋಟಕ ಅಭಿಪ್ರಾಯ, ಮಾತುಗಳು, ಚರ್ಚೆಗಳನ್ನು ಅವರ ಪುತ್ರಿ ಇದೀಗ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕುರಿತು ಮಾತಾಡಿದ ಪುತ್ರಿ ಶರ್ಮಿಷ್ಠಾ, ಪ್ರಧಾನಿ ಮೋದಿ ಕುರಿತು ಪ್ರಣಬ್ ಮುಖರ್ಜಗಿದಿದ್ದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಆಲೋಚನೆಯಲ್ಲಿ ಸ್ಪಷ್ಟಕ್ಕೆ ಹೊಂದಿದ್ದರು. ಆರ್‌ಎಸ್‌ಎಸ್‌ನಿಂದ ಬಂದಿರುವ ನರೇಂದ್ರ ಮೋದಿ, ರಾಷ್ಟ್ರೀಯತೆ ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದರು. ಇಂದಿರಾ ಗಾಂಧಿ ಬಳಿಕ ಜನರ ನಾಡಿಮಿಡಿತವನ್ನು ನಿಖರವಾಗಿ ಅರಿತುಕೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು. ಇದೀಗ ಪುಸ್ತಕ ಬಿಡುಗಡೆಗೂ ಮುನ್ನ ಪ್ರಣಬ್ ಆಡಿದ ಕೆಲ ಕುತೂಹಲ ಮಾತುಗಳು, ಅವರ ಅಭಿಪ್ರಾಯಗಳನ್ನು ಪುತ್ರಿ ಶರ್ಮಿಷ್ಠಾ ಮುಖರ್ಜಿ ಹಂಚಿಕೊಂಡಿದ್ದಾರೆ.

ಪ್ರಣಬ್ ಮೈ ಫಾದರ್, ಎ ಡಾಟರ್ ರಿಮೆಂಬರ್ಸ್ ಅನ್ನೋ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿಯ ಕುರಿತು ಹಲವು ರೋಚಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಗೆ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಜ್ಞಾವಿಧಿ ಬೋಧಿಸಿದ್ದರು. ರಾಷ್ಟ್ರಪತಿಯಾಗಿ ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡಿದ್ದ ಪ್ರಣಬ್ ಮುಖರ್ಜಿ ತಮ್ಮ ಡೈರಿಯಲ್ಲಿ ಮೋದಿ ಕುರಿತು ಹಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. 

ಪ್ರಣಬ್‌ರನ್ನು ಪ್ರಧಾನಿ ಮಾಡುವುದು ಸೋನಿಯಾಗೆ ಇಷ್ಟವಿರಲಿಲ್ಲ, ಆತ್ಮಕಥೆಯಲ್ಲಿ ಸತ್ಯ ಬಯಲು

2014ರ ಅಕ್ಟೋಬರ್ 24ರಂದು ಪ್ರಣಬ್ ಮುಖರ್ಜಿ ಬರೆದಿರುವ ಡೈರಿಯಲ್ಲಿ, 2014ರಲ್ಲಿ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ಸಿಯಾಚಿನ್ ಯೋಧರ ಜೊತೆ ಆಚರಿಸುವ, ಪ್ರವಾಹ ಪೀಡಿತ ಶ್ರೀನಗರ ಜನರ ಜೊತೆ ಬೆರೆತು ಅವರ ಸಂಕಷ್ಟ ಆಲಿಸುವ ವ್ಯಕ್ತಿತ್ವ ಹಾಗೂ ಗುಣ ಇಂದಿರಾ ಗಾಂಧಿ ಬಳಿಕ ನರೇಂದ್ರ ಮೋದಿಯಲ್ಲಿ ಮಾತ್ರ ಕಂಡಿದ್ದೇನೆ ಎಂದು ಪ್ರಣಬ್ ಬರೆದುಕೊಂಡಿದ್ದಾರೆ.

'ಪಿಎಂ ಪಟ್ಟ: ಪರಿಶ್ರಮದಿಂದ ಪಡೆದ ಮೋದಿ, ಸಿಂಗ್‌ಗೆ ಸೋನಿಯಾ ಕೊಟ್ಟ ಉಡುಗೊರೆ'!

ಪ್ರಧಾನಿ ಮೋದಿ ರಾಷ್ಟ್ರಪತಿ ಭವನದಲ್ಲಿ ಅಧಿಕೃತ ಚರ್ಚೆ, ಮಾತುಕತೆ ನಡೆದಿದೆ. ರಾಷ್ಟ್ರಪತಿಯಾಗಿ ಸರ್ಕಾರಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಪ್ರಣಬ್ ಮುಖರ್ಜಿ ಅಂದು ಮೋದಿಗೆ ಭರವಸೆ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಮೋದಿ ಕುರಿತು ಕೆಲ ಸಾಲುಗಳನ್ನು ಬರೆದಿದ್ದಾರೆ. ಮೋದಿ ತಮ್ಮ ನಿರ್ಧಾರ, ಆಲೋಚನೆಯಲ್ಲಿ ಸ್ಪಷ್ಟತೆ ಹೊಂದಿದ್ದರು. ಹೀಗಾಗಿ ವೃತ್ತಿಪರವಾಗಿ ಎಲ್ಲಾ ಸಂದರ್ಭವನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಪ್ರಧಾನಿ ಮೋದಿ, ಜನರ ನಾಡಿ ಮಿಡಿತ, ಜನರ ತುಡಿತಗಳನ್ನು ಅಷ್ಟೇ ಪ್ರಬಲವಾಗಿ ಗ್ರಹಿಸುತ್ತಿದ್ದರು. ಪ್ರತಿ ವಿಚಾರವನ್ನೂ ಅಷ್ಟೇ ಗಮನವಿಟ್ಟು ಕೇಳುತ್ತಿದ್ದರು. ಯಾವುದೇ ಸಂದರ್ಭದಲ್ಲಿ ತನಗೆ ಎಲ್ಲಾ ಗೊತ್ತಿದೆ ಎಂದು ಯಾವತ್ತೂ ತೋರಿಸಿಕೊಂಡಿಲ್ಲ. ಯಾರು ಏನೇ ಹೇಳಿದರೂ ಮೊದಲು ಸಂಪೂರ್ಣವಾಗಿ ಕೇಳಿಸಿಕೊಳ್ಳುತ್ತಿದ್ದರು. ಹೊಸ ವಿಚಾರಗಳನ್ನು ಕಲಿಯುತ್ತಿದ್ದರು, ತಿಳಿದುಕೊಳ್ಳುತ್ತಿದ್ದರು. ಮೋದಿ ಓರ್ವ ಆರ್‌ಎಸ್‌ಎಸ್ ಸಂಘಟನೆಯಿಂದ ಬಂದ ವ್ಯಕ್ತಿ. ಹೀಗಾಗಿ ರಾಷ್ಟ್ರೀಯತೆ, ದೇಶಪ್ರೇಮ ಮೈಗೂಡಿಸಿಕೊಂಡಿದ್ದರು ಎಂದು ಪ್ರಣಬ್ ಮುಖರ್ಜಿ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ.
 

Follow Us:
Download App:
  • android
  • ios