ಹಾಲು, ಮೊಸರು, ಬೆಣ್ಣೆ ಸೇರಿದಂತೆ ಹಾಲಿನ ಉತ್ಪನ್ನಗಳ ಪ್ಯಾಕೆಟ್ ಮೇಲೆ ಹೊಸ ಲೋಗೋ ಇರಲೇಬೇಕು. ಈ ಲೋಗೋ ಇದ್ದರೆ ಮಾತ್ರ ಉತ್ಪನ್ನ ಹಾಲು ಅಥವಾ ಹಾಲಿನ ಉತ್ಪನ್ನ ಅನ್ನೋ ಖಚಿತವಾಗಲಿದೆ. ಗ್ರಾಹಕರು ಇನ್ಮುಂದೆ ಖರೀದಿ ಮಾಡುವಾಗ ಲೋಗೋ ಪರಿಶೀಲಿಸಿ.

ನವದೆಹಲಿ (ನ.16) ಹಾಲು, ಮೊಸರು, ಚೀಸ್ ಸೇರಿದಂತೆ ಹಾಲಿನ ಉತ್ಪನ್ನಗಳು ಪ್ರತಿ ದಿನ ಬಹುತೇಕರ ಬಳಸುವ ಆಹಾರಗಳು. ಇತ್ತೀಚೆಗೆ ಕರ್ನಾಟಕದಲ್ಲಿ ಹಾಲಿನ ಬೆಲೆ ಏರಿಕೆ ಗ್ರಾಹಕರ ತಲೆನೋವು ಹೆಚ್ಚಿಸಿದೆ. ಮತ್ತೊಂದೆಡೆ ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಯಾವುದು ಅಸಲಿ , ಯಾವುದು ನಕಲಿ ಅನ್ನೋದು ಮೇಲ್ನೋಟಕ್ಕೆ ಪತ್ತೆ ಹಚ್ಚುವುದೇ ಕಷ್ಟವಾಗಿದೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೊಸ ನಿಮಯ ತಂದಿದೆ. ಹಾಲು ಸೇರಿ ಹಾಲಿನ ಉತ್ಪನ್ನಗಳಲ್ಲಿ ಹಾಲಿನ ಡ್ರಾಪ್ ಲೋಗೋ ಇರಲೇಬೇಕು. ಇದು ಕಡ್ಡಾಯವಾಗಿದೆ.

ಬಿಳಿ ಹಾಲಿನ ಹನಿಯ ಚಿಹ್ನೆ

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಬಿಳಿ ಹನಿ ಇರುವ ಹಾಲಿನ ಚಿಹ್ನೆ ಕಡ್ಡಾಯವಾಗಿದೆ. ನೀಲಿ ಚೌಕದ ಫ್ರೇಮ್ ಒಳಗೆ ಬಿಳಿ ಹಾಲಿನ ಹನಿ ಇರುವ ಲೋಗೋ ಪ್ರತಿ ಹಾಲು ಹಾಗೂ ಹಾಲಿನ ಉತ್ಪನ್ನದಲ್ಲಿ ಕಡ್ಡಾಯವಾಗಿದೆ. ಇದು ಉತ್ಪನ್ನಗಳ ಪ್ಯಾಕೆಟ್ ಮೇಲಿನ ಗಾತ್ರಕ್ಕೆ ಅನುಗುಣವಾಗಿ ಬದಲಾಗಲಿದೆ.

ಹೊಸ ಲೋಗೋ ನೀತಿಗೆ ಕಾರಣವೇನು?

ಹಾಲಿನ ಹನಿ ಇರುವ ಚಿಹ್ನೆ ಲೋಗೋ ಹಾಲು ಹಾಗೂ ಹಾಲಿನ ಉತ್ಪನ್ನಗಳ ಪ್ರಾಡಕ್ಟ್ ಮೇಲೆ ಕಡ್ಡಾಯವಾಗಿದೆ. ಪ್ರಮುಖವಾಗಿ ಗ್ರಾಹಕರಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. ಹೀಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದು ಏಕರೂಪದ ಲೋಗೋ. ಭಾರತದ ಎಲ್ಲಾ ಹಾಲು ಹಾಲಿನ ಉತ್ಪನ್ನಗಳ ಪ್ಯಾಕೆಟ್ ಮೇಲೆ ಕಡ್ಡಾಯವಾಗಿ ಲೋಗೋ ಇರಬೇಕುಯ

ಯಾವಾಗಿನಿಂದ ಹೊಸ ನೀತಿ ಜಾರಿ

2026ರ ಆಹರಾ ಸುರಕ್ಷತಾ ಗುಣಮಟ್ಟ ಎರಡನೇ ತಿದ್ದುಪತಿ ನಿಯಮ ( ಲೇಬಲಿಂಗ್ ಹಾಗೂ ಪ್ರದರ್ಶನ) ಅಡಿಯಲ್ಲಿ ಹೊಸ ನೀತಿ ತರಲಾಗಿದೆ. ಹೊಸ ನಿಯಮ ಜುಲೈ 1, 2028ರಿಂದ ಜಾರಿಗೆ ಬರಲಿದೆ. ಡೈರಿ ಉತ್ಪಾದಕರು ತಮ್ಮ ಪ್ಯಾಕೆಟ್ ಮೇಲೆ ಹೊಸ ಲೋಗೋ ಬಳಸಿಕೊಳ್ಳಲು ಸಮಯ ನೀಡಲಾಗಿದೆ. ಸರಿಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಇರುವ ಕಾರಣ ಸ್ಟಾಕ್ ಪ್ಯಾಕೆಟ್ ಬಳಿಕ ಹೊಸ ಪ್ಯಾಕೆಟ್‌ನಲ್ಲಿ ಲೋಗೋ ಮುದ್ರಿಸಲು ಸಾಕಷ್ಟು ಸಮಯದ ಅವಕಾಶ ನೀಡಲಾಗಿದೆ.

ಗ್ರಾಹಕರು ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಖರೀದಿಸುವಾಗ ಹಾಲಿನ ಡ್ರಾಪ್ ಇರುವ ಚಿಹ್ನೆ ಸುಲಭವಾಗಿ ಹಾಲಿನ ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಪ್ರತಿ ಉತ್ಪನ್ನ ಹಾಲು ಅಥವಾ ಹಾಲಿನ ಉಪ ಉತ್ಪನ್ನವಾಗಿದ್ದರೆ ಮಾತ್ರ ಈ ಲೋಗೋ ಬಳಕೆ ಮಾಡಬೇಕು. ಹೀಗಾಗಿ ನಿಯಮ ಉಲ್ಲಂಘಿಸಿದರೂ ದುಬಾರಿ ದಂಡ ಬೀಳುವುದು ಮಾತ್ರವಲ್ಲ ಲೈಸೆನ್ಸ್ ಕೂಡ ರದ್ದಾಗಲಿದೆ.