ಏರ್‌ಟೆಲ್ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಬರೋಬ್ಬರಿ 30,000 ರೂಪಾಯಿಗೂ ಹೆಚ್ಚು ಮೌಲ್ಯದ ಇನ್‌ಸೈಡರ್ ರಿವಾರ್ಡ್ ಘೋಷಿಸಿದೆ. ಏರ್‌ಟೆಲ್ ಹೊಸ ರಿವಾರ್ಡ್ ಪಡೆಯುವುದು ಹೇಗೆ? ಏನು ಮಾಡಬೇಕು?

ನವದೆಹಲಿ (ನ.16) ಗ್ರಾಹಕರಿಗೆ ಈಗ ಕೇವಲ ಫೋನ್ ಕಾಲ್, ಡೇಟಾ, ಮನರಂಜನೆ ಮಾತ್ರವಲ್ಲ ಭರ್ಜರಿ ಕೊಡುಗೆ ಮೂಲಕ ಏರ್‌ಟೆಲ್ ವಿಸ್ತಾರಗೊಂಡಿದೆ. ಇದೀಗ ಪ್ರೀಮಿಯಂ ಸಬ್‌ಸ್ಕ್ರಿಪ್ಸನ್, ಶಾಪಿಂಗ್ ಡೀಲ್ ಸೇರಿದಂತೆ ಪ್ರಯಾಣ, ಊಟ, ಎಂಟರ್ಟೈನ್ಮೆಂಟ್ ವರಗೆ ಏರ್‌ಟೆಲ್ ಇನ್‌ಸೈಡರ್ ಪ್ರಮುಖ ಬ್ರ್ಯಾಂಡ್‌ಗಳ ಆಫರ್ ಒಂದೇ ಸ್ಥಳದಲ್ಲಿ ನೀಡುತ್ತದೆ. ಹೀಗಾಗಿ ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಲಾಭದಾಯಕ ಯೋಜನೆ ಇದಾಗಿದೆ. ಏರ್‌ಟೆಲ್ ಇನ್‌ಸೈಡರ್ ಮೂಲಕ ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಬಳಸಬಹುದಾದ ಮತ್ತು ಆನಂದಿಸಬಹುದಾದ ವಿವಿಧ ಬ್ರ್ಯಾಂಡ್‌ಗಳು ಹಾಗೂ ಅನುಭವಗಳ ಮೇಲೆ 30,000 ರೂಪಾಯಿಗೂ ಅಧಿಕ ಮೌಲ್ಯದ ರಿವಾರ್ಡ್‌ಗಳು ಹಾಗೂ ಆಫರ್‌ಗಳನ್ನು ಪಡೆಯಬಹುದು.

ಸಿನಿಮಾ ವೀಕ್ಷಣೆ, ಫೋನ್ ಸೇರಿ ಗ್ಯಾಜೆಟ್ ಖರೀದಿ

ಏರ್‌ಟೆಲ್ ಇನ್‌ಸೈಡರ್ ಪರಿಕಲ್ಪನೆಯ ಹಿಂದಿನ ಉದ್ದೇಶ ಸಿಂಪಲ್. ಏರ್‌ಟೆಲ್ ಗ್ರಾಹಕರಾಗಿರುವುದರಿಂದ ಕೇವಲ ಸಂಪರ್ಕದಲ್ಲಿರುವುದಕ್ಕಿಂತ ಹೆಚ್ಚಿನ ಮೌಲ್ಯಯುತ ಪ್ರಯೋಜನಗಳು ಸಿಗಬೇಕು ಎಂಬುದೇ ಇದರ ಆಶಯ. ಡ್ಯುಯೆಲ್ ಲಿಂಗೋ ಮೂಲಕ ಹೊಸ ಭಾಷೆ ಕಲಿಯುವುದಾಗಲಿ, ಕ್ರೋಮಾ ಮಳಿಗೆಯಲ್ಲಿ ಗ್ಯಾಜೆಟ್‌ಗಳನ್ನು ಖರೀದಿಸುವುದಾಗಲಿ, ಸಿನೆಪೊಲಿಸ್‌ನಲ್ಲಿ ಸಿನಿಮಾ ವೀಕ್ಷಿಸುವುದಾಗಲಿ ಅಥವಾ ಪಾಕೆಟ್ ಎಫ್‌ಎಂನಲ್ಲಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಲಿಸುವುದಾಗಲಿ ಗ್ರಾಹಕರು ತಮ್ಮ ಆಸಕ್ತಿ ಮತ್ತು ಅಗತ್ಯಗಳಿಗೆ ತಕ್ಕಂತಹ ಪ್ರಯೋಜನಗಳನ್ನು ಇಲ್ಲಿ ಕಂಡುಕೊಳ್ಳಬಹುದು.

ಏರ್‌ಟೆಲ್ ಇನ್‌ಸೈಡರ್‌ನಲ್ಲಿ ಏನೆಲ್ಲಾ ಇದೆ?

  • ಡ್ಯುಯೆಲ್ ಲಿಂಗೋ: 12 ತಿಂಗಳ ಸೂಪರ್ ಡ್ಯುಯೆಲ್ ಲಿಂಗ್ (ರೂ. 3,120 ಮೌಲ್ಯದ್ದು)
  • ಶಾಪಿಂಗ್ ಮತ್ತು ಗ್ಯಾಜೆಟ್‌ಗಳು: ಕ್ರೋಮಾ/ಆಪಲ್ ಮೂಲಕ ಐಫೋನ್ 15/ 16/ 17 ಆವೃತ್ತಿಗಳ ಮೇಲೆ ರೂ. 23,000 ವರೆಗಿನ ಉಳಿತಾಯ (ಕ್ರೋಮಾ ಆಫರ್ ಆಯ್ದ ಐಫೋನ್ ಮಾಡೆಲ್‌ಗಳ ಮೇಲೆ ಮಾತ್ರ ಲಭ್ಯವಿದೆ. ಎಲ್ಲಾ ಆಫರ್‌ಗಳು ಆಯಾ ನಿಯಮಗಳು ಮತ್ತು ಅರ್ಹತೆಗೆ ಒಳಪಟ್ಟಿರುತ್ತವೆ)
  • ಮನರಂಜನೆ: ಪಾಕೆಟ್ ಎಫ್‌ಎಂ 3 ತಿಂಗಳ ಪಾಕೆಟ್ ಎಫ್‌ಎಂ ಪ್ರೀಮಿಯಂ
  • ಸಿನೆಪೊಲಿಸ್ ಟಿಕೆಟ್ ಆಫರ್: 2 ಸಿನಿಮಾ ಟಿಕೆಟ್‌ಗಳನ್ನು ಖರೀದಿಸಿ, 1 ಉಚಿತವಾಗಿ ಪಡೆಯಿರಿ (ರೂ. 150 ವರೆಗೆ ರಿಯಾಯಿತಿ)
  • ಆಹಾರ ಮತ್ತು ಪಾನೀಯಗಳ ಆಫರ್: ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಮಾತ್ರ ರೂ. 1,500 ಅಥವಾ ಅದಕ್ಕಿಂತ ಹೆಚ್ಚಿನ ಆಹಾರ ಮತ್ತು ಪಾನೀಯ ಆರ್ಡರ್‌ಗಳ ಮೇಲೆ ರೂ. 300 ರಿಯಾಯಿತಿ
  • ಆರೋಗ್ಯ ಮತ್ತು ಕ್ಷೇಮ: ಅಪೋಲೋ 24X7 6 ತಿಂಗಳ ಅಪೋಲೋ ಸರ್ಕಲ್ ಸದಸ್ಯತ್ವ

ರಿವಾರ್ಡ್ ಅನ್‌ಲಾಕ್

ಪ್ರಸ್ತುತ ಲಭ್ಯವಿರುವ ಎಲ್ಲಾ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು 30,000 ರೂಪಾಯಿಗೂ ಅಧಿಕ ಮೌಲ್ಯದ ರಿವಾರ್ಡ್‌ಗಳನ್ನು ಅನ್‌ಲಾಕ್ ಮಾಡಬಹುದು. ಹೊಸದನ್ನು ಕಲಿಯುವುದರಿಂದ ಮತ್ತು ತಮ್ಮ ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದರಿಂದ ಹಿಡಿದು ತಮ್ಮ ಮುಂದಿನ ಪ್ರವಾಸವನ್ನು ಯೋಜಿಸುವ ಅಥವಾ ಹೊರಗೆ ಊಟವನ್ನು ಆನಂದಿಸುವವರೆಗೆ, ಏರ್‌ಟೆಲ್ ಇನ್‌ಸೈಡರ್ ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚಿನಿಂದ ಗರಿಷ್ಠ ಪ್ರಯೋಜನ ಪಡೆಯಲು ಹೆಚ್ಚಿನ ಹಲವು ದಾರಿಗಳನ್ನು ನೀಡುತ್ತದೆ.

ರಿವಾರ್ಡ್ ಬಳಕೆ ಹೇಗೆ?

ಇದನ್ನು ಬಳಸಲು ಆರಂಭಿಸುವುದು ತುಂಬಾ ಸುಲಭ. ಅರ್ಹ ಏರ್‌ಟೆಲ್ ಮೊಬೈಲ್ ಮತ್ತು ಏರ್‌ಟೆಲ್ ಹೋಮ್ ಗ್ರಾಹಕರು ಏರ್‌ಟೆಲ್ ಆ್ಯಪ್ ತೆರೆದು, ಏರ್‌ಟೆಲ್ ಇನ್‌ಸೈಡರ್ ವಿಭಾಗಕ್ಕೆ ಭೇಟಿ ನೀಡಿ ಲಭ್ಯವಿರುವ ಆಫರ್‌ಗಳನ್ನು ವೀಕ್ಷಿಸಬಹುದು. ಅವರು ತಮಗೆ ಆಸಕ್ತಿಯಿರುವ ಪ್ರಯೋಜನಗಳನ್ನು ಆಯ್ಕೆ ಮಾಡಿ, ಆಫರ್ ನಿಯಮಗಳ ಪ್ರಕಾರ ಅವುಗಳನ್ನು ಪಡೆಯಬಹುದು.

ಏರ್‌ಟೆಲ್ ಇನ್‌ಸೈಡರ್ ಈ ಹಿಂದೆಯೂ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಗ್ರಾಹಕರಿಗೆ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ, ಈಸಿಡೈನರ್ ಮತ್ತು ಮೇಕ್‌ಮೈಟ್ರಿಪ್ ಸದಸ್ಯತ್ವದಂತಹ ಹಲವು ಸೌಲಭ್ಯಗಳನ್ನು ಒದಗಿಸಿದೆ. ಏರ್‌ಟೆಲ್ ಇನ್‌ಸೈಡರ್ ಮುಂದೆಯೂ ಈ ವೇದಿಕೆಗೆ ಹೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಆಫರ್‌ಗಳನ್ನು ತರುವುದನ್ನು ಮುಂದುವರಿಸಲಿದೆ ಎಂದಿದೆ. ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಒದಗಿಸಲಿದೆ. ಗ್ರಾಹಕರೊಂದಿಗಿನ ಸಂಬಂಧಕ್ಕೆ ಮೌಲ್ಯವನ್ನು ಸೇರಿಸುವ ಮತ್ತು ಏರ್‌ಟೆಲ್ ಸಂಪರ್ಕವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಲಾಭದಾಯಕವಾಗಿಸುವ ಏರ್‌ಟೆಲ್‌ನ ಮತ್ತೊಂದು ಪ್ರಯತ್ನ ಇದಾಗಿದೆ.