ಪುಣೆ/ ನವದೆಹಲಿ(ಸೆ 08)  ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ಡಾ.ಗೋವಿಂದ್ ಸ್ವರೂಪ್(91)  ಪುಣೆಯಲ್ಲಿ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದ  ಕಾರಣ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಹಲವು ವಲಯಗಳಲ್ಲಿ ಮಹತ್ವದ ಸಂಶೋಧನೆಗಳ ಕೊಡುಗೆ ನೀಡಿರುವ ಡಾ. ಸ್ವರೂಪ್, ರೇಡಿಯೊ ಖಗೋಳ ವಿಜ್ಞಾನ ಮುಂಚೂಣಿಯ ವಿಜ್ಞಾನಿ. 

ಹಿಂದೂಸ್ತಾನಿ ಸಂಗೀತ ದಿಗ್ಗಜ ಜಸ್‌ರಾಜ್ ಜೀವನ-ಸಾಧನೆ

ವಿಜ್ಞಾನಿ ಡಾ. ಡಾ.ಗೋವಿಂದ್ ಸ್ವರೂಪ್ ಅವರ ಕೊಡುಗೆಯನ್ನು ಸ್ಮರಿಸಿರುವ ಪ್ರಧಾನಿ  ನರೇಂದ್ರ ಮೋದಿ ಅವರ ಹತ್ತಿರದವರಿಗೆ ಧೈರ್ಯ ತುಂಬಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಸಹ ಅಗಲಿದ ವಿಜ್ಞಾನಿಯನ್ನು ಸ್ಮರಿಸಿದ್ದಾರೆ.

ಪದ್ಮಶ್ರೀ, ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಎಚ್.ಕೆ. ಫಿರೋಡಿಯಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಸ್ವರೂಪ್ ಭಾಜನರಾಗಿದ್ದಾರೆ.