ನವದೆಹಲಿ(ಆ. 17)  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ಅಮೆರಿಕಾದ ನ್ಯೂ ಜರ್ಸಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ಪುರಸ್ಕಾರಕ್ಕೆ ಪಾತ್ರವಾಗಿದ್ದ ಗಾಯಕ ನಿಧನರಾಗಿದ್ದಾರೆ. ಹಿಂದೂಸ್ತಾನಿ ಸಂಗೀತದ ಶಕ್ತಿಯನ್ನು ಇಡೀ ಪ್ರಪಂಚಕ್ಕೆ ಮತ್ತೆ ಮತ್ತೆ ಸಾರಿದ ಗಾಯಕ ಇನ್ನು ನೆನಪು ಮಾತ್ರ. 

ಸಣ್ಣ ವಯಸ್ಸಿಗೆ ಹೃದಯಾಘಾತ; ಕಾರಣಗಳು ಹಲವು

80 ವರ್ಷಗಳ  ಸಂಗೀತ ಜೀವನದಲ್ಲಿ ಜಸ್ ರಾಜ್ ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ.  ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಜಸ್ ರಾಜ್ 1930 ರಲ್ಲಿ ಹರ್ಯಾಣ ರಾಜ್ಯದ ಹಿಸ್ಸಾರ್ ನಲ್ಲಿ ಜನಿಸಿದರು.ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತಮ್ಮ ಸಹೋದರ ಪಂಡಿತ್ ಮಣಿರಾಮ್ ರವರಿಂದ ಪಡೆದರು. ಹಲವಾರು ಪ್ರಶಸ್ತಿಗಳನ್ನು ಪಡೆದ ಜಸ್ ರಾಜ್ ಭಾರತದ ಉದ್ದಗಲ ಜನಪ್ರಿಯತೆ ಗಳಿಸಿಕೊಂಡರು.  ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಜಸ್ ರಾಜ್ ಬಳಿ ಶಿಷ್ಯರಾಗಿ ಅಧ್ಯಯನ ಮಾಡಿದ್ದಾರೆ. ಪ್ರಧಾನಿ ನರೇಂಧ್ರ ಮೋದಿ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಜಸ್‌ ರಾಜ್ ಅವರಿಗೆ ನಮನ ಸಲ್ಲಿಸಿ ಸ್ಮರಣೆ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಮಾನ್ಯತೆ: ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಜಸ್ ರಾಜ್ ಅವರಿಗೆ ವಿಶೇಷ ಗೌರವ ಒಂದನ್ನು ಸಲ್ಲಿಕೆ ಮಾಡಲಾಗಿತ್ತು. ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಗ್ರಹವೊಂದಕ್ಕೆ ಜಸ್ ರಾಜ್ ಹೆಸರನ್ನು ನಾಮಕರಣ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ನವೆಂಬರ್  11, 2006 ಶೋಧನೆಗೊಳಗಾಗಿದ್ದ ಗ್ರಹ ಮಂಗಳ ಮತ್ತು ಗುರು ನಡುವಿನ ಕಕ್ಷೆಯಲ್ಲಿ ಸಂಚಾರ ಮಾಡುತ್ತದೆ ಎಂಬುದನ್ನು ತಿಳಿಸಿತ್ತು.

 

 

“ಓಂ ನಮೋ ಭಗವತೇ ವಾಸುದೇವಾಯ”...... ಈ ಮಹಾಮಂತ್ರವನ್ನು ಜಸ್‌ರಾಜ್ ಕಂಠದಲ್ಲಿ ಒಮ್ಮೆ ಕೇಳಿದವರು ಬೇರೆಯವರ ಕಂಠದಲ್ಲಿ  ಕೇಳಲು ಒಪ್ಪಲಾರರು........ ಹೋಗಿ ಬನ್ನಿ ಗಂಧರ್ವರೇ!!!....  ಸ್ವರ್ಗದಲ್ಲಿ ದೇವತೆಗಳಿಗೆ ನಿಮ್ಮ ಸಂಗೀತ ಸುಧೆ ಬೇಕಾಗಿರಬಹುದು!..... ಸದ್ಗತಿ