ಮುಂದಿನ ತಿಂಗಳು ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿ, ಅಧ್ಯಕ್ಷ ಟ್ರಂಪ್ ಜೊತೆ ವೈಟ್ ಹೌಸ್‌ನಲ್ಲಿ ಭೇಟಿಯಾಗಲಿದ್ದಾರೆ. ಇಬ್ಬರೂ ದ್ವಿಪಕ್ಷೀಯ ವ್ಯಾಪಾರ, ಇಂಡೋ-ಪೆಸಿಫಿಕ್ ಸಹಕಾರ, ಕ್ವಾಡ್ ಪಾಲುದಾರಿಕೆ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮೋದಿ, ಟ್ರಂಪ್‌ರ ಎರಡನೇ ಅವಧಿಗೆ ಅಭಿನಂದಿಸಿದ್ದಾರೆ. ಭಾರತದಿಂದ ಅಮೆರಿಕದ ಶಸ್ತ್ರಾಸ್ತ್ರ ಖರೀದಿ ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ. ವೈಟ್ ಹೌಸ್‌ನಲ್ಲಿ ಇಬ್ಬರು ನಾಯಕರ ನಡುವೆ ಸಭೆ ನಡೆಯಲಿದೆ. ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಫೋನ್‌ನಲ್ಲಿ ಮಾತುಕತೆ ನಡೆದಿದೆ. ಪ್ರಧಾನಿ, ಟ್ರಂಪ್ ಅವರ ಎರಡನೇ ಅವಧಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟ್ರಂಪ್ ಈ ಫೋನ್ ಕರೆಯನ್ನು "ಸಕಾರಾತ್ಮಕ" ಎಂದು ಬಣ್ಣಿಸಿದ್ದಾರೆ. ನ್ಯಾಯಯುತ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಕಡೆಗೆ ಸಾಗುವ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಫ್ಲೋರಿಡಾದಿಂದ ಜಂಟಿ ಬೇಸ್ ಆಂಡ್ರ್ಯೂಸ್‌ಗೆ ವಾಪಸ್ ಬರುವಾಗ ಏರ್ ಫೋರ್ಸ್ ಒನ್‌ನಲ್ಲಿ ಪತ್ರಕರ್ತರಿಗೆ ಟ್ರಂಪ್ ಹೇಳಿದರು, “ನಾನು ಇಂದು ಬೆಳಿಗ್ಗೆ (ಸೋಮವಾರ) ಅವರೊಂದಿಗೆ (ನರೇಂದ್ರ ಮೋದಿ) ದೀರ್ಘಕಾಲ ಮಾತನಾಡಿದ್ದೇನೆ. ಅವರು ಮುಂದಿನ ತಿಂಗಳು, ಬಹುಶಃ ಫೆಬ್ರವರಿಯಲ್ಲಿ, ವೈಟ್ ಹೌಸ್‌ಗೆ ಬರುತ್ತಾರೆ. ಭಾರತದೊಂದಿಗೆ ನಮಗೆ ಉತ್ತಮ ಸಂಬಂಧವಿದೆ.”

ಕೈಗೆ ಕೋಳ ಹಾಕಿ ನೀರನ್ನು ಕೊಡದೇ ಬ್ರೆಜಿಲ್ ಅಕ್ರಮ ವಲಸಿಗರ ವಿಮಾನವೇರಿಸಿದ ಡೊನಾಲ್ಡ್ ಟ್ರಂಪ್‌

ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚಲಿದೆ ಸಹಕಾರ: ವೈಟ್ ಹೌಸ್ ಹೇಳಿಕೆಯಲ್ಲಿ, ಟ್ರಂಪ್ ಮತ್ತು ಪ್ರಧಾನಿ ಮೋದಿ ಅಮೆರಿಕ ಮತ್ತು ಭಾರತದ ನಡುವಿನ ಸಹಕಾರವನ್ನು ಹೆಚ್ಚಿಸುವ ಮತ್ತು ಆಳಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದೆ. ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್ ಸೇರಿದಂತೆ ವಿವಿಧ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ. ಅಧ್ಯಕ್ಷ ಟ್ರಂಪ್ , ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಯನ್ನು ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಕಡೆಗೆ ಸಾಗುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಇಂಡೋ-ಪೆಸಿಫಿಕ್ ಕ್ವಾಡ್ ಪಾಲುದಾರಿಕೆ ಹೆಚ್ಚಿಸಲು ಒತ್ತು: ಪ್ರಧಾನಿ ಮೋದಿ ಅವರ ವೈಟ್ ಹೌಸ್ ಭೇಟಿಯ ಯೋಜನೆಯ ಬಗ್ಗೆ ಮಾತುಕತೆ ನಡೆದಿದೆ ಎಂದು ವೈಟ್ ಹೌಸ್ ತಿಳಿಸಿದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವುದರ ಮೇಲೆ ಒತ್ತು ನೀಡಿದ್ದಾರೆ. ಭಾರತ ಈ ವರ್ಷದ ಕೊನೆಯಲ್ಲಿ ಮೊದಲ ಬಾರಿಗೆ ಕ್ವಾಡ್ ನಾಯಕರ ಸಭೆ ಆಯೋಜಿಸಲಿದೆ”.

ನಮ್ಮ ಪಕ್ಕದ ದೇಶಕ್ಕೆ ನೆರವು ನೀಡುವುದನ್ನೇ ನಿಲ್ಲಿಸಿದ ಡೊನಾಲ್ಡ್ ಟ್ರಂಪ್!

ಟ್ರಂಪ್ ಮತ್ತು ಮೋದಿ ನಡುವೆ ಉತ್ತಮ ಸ್ನೇಹ ಸಂಬಂಧವಿದೆ ಎಂಬುದು ಗಮನಾರ್ಹ. ಅಧ್ಯಕ್ಷರಾಗಿ ಮೊದಲ ಅವಧಿಯಲ್ಲಿ ಟ್ರಂಪ್ ಅವರ ಕೊನೆಯ ವಿದೇಶ ಪ್ರವಾಸ ಭಾರತಕ್ಕೆ ಆಗಿತ್ತು. ಇಬ್ಬರೂ 2019 ರ ಸೆಪ್ಟೆಂಬರ್‌ನಲ್ಲಿ ಹೂಸ್ಟನ್‌ನಲ್ಲಿ ಮತ್ತು 2020 ರ ಫೆಬ್ರವರಿಯಲ್ಲಿ ಅಹಮದಾಬಾದ್‌ನಲ್ಲಿ ಎರಡು ಪ್ರತ್ಯೇಕ ಸಮಾವೇಶಗಳಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು.