Asianet Suvarna News Asianet Suvarna News

Ukraine crisis: ನವೀನ್ ಸಾವು, ಪರಿಸ್ಥಿತಿ ಕುರಿತು ಮೋದಿ ಉನ್ನತ ಮಟ್ಟದ ಸಭೆ!

  • ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಮತ್ತೊಂದು ಉನ್ನತ ಮಟ್ಟದ ಸಭೆ
  • ಸತತ ಮೂರನೇ ದಿನ ಉನ್ನತ ಮಟ್ಟದ ಸಭೆ, ಮಹತ್ವದ ವಿಚಾರ ಚರ್ಚೆ
  • ಕನ್ನಡಿಗ ನವೀನ್ ಮೃತಪಟ್ಟ ಬೆನ್ನಲ್ಲೇ ರಕ್ಷಣಾ ಕಾರ್ಯ ಕುರಿತು ಸಭೆ
     
PM modi convene high level meeting on Ukraine issue after Indian students dies russia shelling attacks kharkiv ckm
Author
Bengaluru, First Published Mar 1, 2022, 6:27 PM IST | Last Updated Mar 1, 2022, 6:39 PM IST

ನವದೆಹಲಿ(ಮಾ.01): ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್ ಪರಿಸ್ಥಿತಿ ಗಂಭೀರವಾಗಿದೆ. ಕರ್ನಾಟಕದ ಮೂಲಕ ವಿದ್ಯಾರ್ಥಿ ನವೀನ್ ಶೇಕರಪ್ಪ ಜ್ಞಾನಗೌಡರ್ ಖಾರ್ಕೀವ್‌ನಲ್ಲಿ ಕ್ಷಿಪಣಿ ದಾಳಿಗೆ ಬಲಿಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸದ್ಯ ಉನ್ನತ ಮಟ್ಟದ ಸಭೆ ಆರಂಭಗೊಂಡಿತ್ತು. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಾಣಾ ಕಾರ್ಯದ ರೂಪುರೇಶೆ ಕುರಿತು ಚರ್ಚಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಸತತ 3ನೇ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈಗಾಗಲೇ ಭಾರತೀಯರ ರಕ್ಷಣೆಗೆ ಭಾರತೀಯ ವಾಯುಸೇನೆ ಅಖಾಡಕ್ಕೆ ಇಳಿಯಲು ಸೂಚನೆ ನೀಡಲಾಗಿದೆ. ಉಕ್ರೇನ್ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಶೀಘ್ರದಲ್ಲೇ ಭಾರತೀಯರ ರಕ್ಷಣೆ ಮಾಡಬೇಕಿದೆ. ಹೀಗಾಗಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

Russia Ukraine war ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ!

ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯ ಸಾಗಲು ನಾಲ್ವರು ಕೇಂದ್ರ ಸಚಿವರನ್ನು ದೂತರಾಗಿ ಉಕ್ರೇನ್‌ನ ನೆರೆಯ ನಾಲ್ಕು ದೇಶಗಳಿಗೆ ಕಳುಹಿಸಲಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದರಂತೆ ಉಕ್ರೇನ್‌ನಲ್ಲಿನ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಕೇಂದ್ರ ಸಚಿವರಾದ ಹರ್‌ದೀಪ್‌ ಪುರಿ ಹಂಗೇರಿಗೆ, ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾ ಮತ್ತು ಮಾಲ್ಡೋವಾಕ್ಕೆ, ಕಿರಣ್‌ ರಿಜಿಜು ಸ್ಲೊವಾಕಿಯಾಕ್ಕೆ ಮತ್ತು ವಿ.ಕೆ.ಸಿಂಗ್‌ ಅವರು ಪೋಲೆಂಡ್‌ಗೆ ತೆರಳಲಿದ್ದಾರೆ. ಈ ನಾಲ್ವರೂ ಸಚಿವರು ಉಕ್ರೇನ್‌ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಲ್ಲಿ ಬೀಡುಬಿಟ್ಟು, ಉಕ್ರೇನ್‌ನಿಂದ ತಾವಿರುವ ದೇಶಕ್ಕೆ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಮತ್ತು ಅಲ್ಲಿಂದ ಅವರನ್ನು ಭಾರತಕ್ಕೆ ಕಳುಹಿಸಿಕೊಡುವ ಕೆಲಸದಲ್ಲಿ ಸಮನ್ವಯತೆ ಕೆಲಸ ಮಾಡಲಿದ್ದಾರೆ.

Ukraine Crisis: ಉಕ್ರೇನ್‌ನ ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ!

ಉಕ್ರೇನ್‌ನ ವಾಯುಸೀಮೆಯನ್ನು ವಿಮಾನ ಹಾರಾಟಕ್ಕೆ ನಿಷೇಧಿಸುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ತನ್ನ ನಾಗರಿಕರನ್ನು ಪೋಲೆಂಡ್‌, ರೊಮೇನಿಯಾ, ಸ್ಲೊವಾಕಿಯಾ, ಹಂಗೇರಿ, ಮಾಲ್ಡೋವಾಕ್ಕೆ ಕರೆತಂದು ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ರವಾನಿಸುತ್ತಿದೆ. ಉಕ್ರೇನ್‌ನಲ್ಲಿ ಇನ್ನೂ 14500 ಭಾರತೀಯರನ್ನು ತೆರವುಗೊಳಿಸಬೇಕಾಗಿದೆ. ಹೀಗಾಗಿ ಇವರನ್ನು ಭಾರತಕ್ಕೆ ಕರೆತರಲು ಸರ್ಕಾರ ಸಚಿವರ ನಿಯೋಜನೆಗೆ ನಿರ್ಧರಿಸಿದೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಸಭೆಯಲ್ಲಿ ಭಾರತೀಯರ ತೆರವು ಕಾರಾರ‍ಯಚರಣೆಗೆ ನಿಯೋಜಿಸಲ್ಪಟ್ಟನಾಲ್ವರೂ ಸಚಿವರನ್ನು ಕರೆಸಿಕೊಂಡು, ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ-ಸೂಚನೆ ನೀಡಿದರು. ಬಳಿಕ ರೊಮೇನಿಯಾ ಹಾಗೂ ಸ್ಲೊವಾಕಿಯಾ ದೇಶಗಳ ಪ್ರಧಾನಿಗಳ ಜತೆ ಫೋನ್‌ನಲ್ಲಿ ಮಾತನಾಡಿದ ಮೋದಿ, ಭಾರತೀಯರ ರಕ್ಷಣೆಗೆ ಸಹಕಾರ ಕೋರಿ, ಧನ್ಯವಾದ ತಿಳಿಸಿದರು ಹಾಗೂ ಉಕ್ರೇನ್‌ ಪರಿಸ್ಥಿತಿ ಬಗ್ಗೆ ದುಃಖ ವ್ಯಕ್ತಪಡಿಸಿ, ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೆ 489 ಮಂದಿ ಭಾರತಕ್ಕೆ

ನವದೆಹಲಿ: ಉಕ್ರೇನ್‌ನಿಂದ ಭಾರತೀಯರ ಕರೆತರುವ ‘ಆಪರೇಷನ್‌ ಗಂಗಾ’ ಮತ್ತಷ್ಟುಬಿರುಸಾಗಿದ್ದು, ಸೋಮವಾರ ಒಟ್ಟು 489 ಜನರನ್ನು ತವರಿಗೆ ಕರೆತರಲಾಗಿದೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಏರ್‌ ಇಂಡಿಯಾದ 6 ವಿಮಾನಗಳ ಮೂಲಕ 1396 ಜನರನ್ನು ಭಾರತಕ್ಕೆ ಕರೆತಂದಂತೆ ಆಗಿದೆ.

ಉಕ್ರೇನ್‌ನ ಕೀವ್‌, ಖಾರ್ಕೀವ್‌ ಮೇಲೆ ರಷ್ಯಾ ಭಾರೀ ಬಾಂಬ್‌

ಸಂಧಾನ ಮಾತುಕತೆ ನಿರೀಕ್ಷಿತ ಫಲ ನೀಡದ ಬೆನ್ನಲ್ಲೇ ಉಕ್ರೇನ್‌ನ ರಾಜಧಾನಿ ಕೀವ್‌ ಹಾಗೂ 2ನೇ ಅತಿ ದೊಡ್ಡ ನಗರ ಖಾರ್ಕೀವ್‌ ಮೇಲೆ ರಷ್ಯಾ ಭಾರೀ ಬಾಂಬ್‌ ದಾಳಿ ನಡೆಸಿದೆ. ಖಾರ್ಕೀವ್‌ನಲ್ಲಿ 11 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದಾರೆ. ಎರಡೂ ನಗರಗಳ ಮೇಲೆ ರಷ್ಯಾ ಭಯಾನಕ ಕ್ಲಸ್ಟರ್‌ ಬಾಂಬ್‌ ಹಾಕಿದೆ.

Latest Videos
Follow Us:
Download App:
  • android
  • ios