India Internet Governance: ರಾಜೀವ್ ಚಂದ್ರಶೇಖರ್ ದಿಕ್ಸೂಚಿ, ಯೋಜನೆ ಮೆಚ್ಚಿದ ಮೋದಿ
- ಇಂಟರ್ನೆಟ್ ಆಡಳಿತದ ಮಾರ್ಗಸೂಚಿಯನ್ನು ವ್ಯಾಖ್ಯಾನಿಸುವ IIGF ಕಾರ್ಯಕ್ರಮ
- ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಅಗತ್ಯವಿದೆ ಎಂದ ರಾಜೀವ್ ಚಂದ್ರಶೇಕರ್
- IIGF ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ನವದೆಹಲಿ(ನ.27): ಡಿಜಿಟಲ್ ಇಂಡಿಯಾ(Digital India) ಮಿಷನ್ ಅಡಿಯಲ್ಲಿ ಇಂಟರ್ನೆಟ್ ಸೇವೆಯನ್ನು(Internet) ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಹೆಚ್ಚು ಜವಾಬ್ದಾರಿಯುತವಾಗಿರುವ ಅವಶ್ಯಕತೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯೋಜಿಸಿದ 3 ದಿನಗಳ ಆನ್‌ಲೈನ್ ಕಾರ್ಯಕ್ರಮದಲ್ಲಿ ಭವಿಷ್ಯದ ಇಂಟರ್ನೆಟ್ ಕುರಿತು ಬೆಳಕು ಚೆಲ್ಲಲಾಯಿತು. ಇದೇ ಕಾರ್ಯಕ್ರಮದಲ್ಲಿ, ಇಂಟರ್‌ನೆಟ್ ನಿರ್ವಹಣಾ ಯೋಜನೆಗಳನ್ನು ವ್ಯಾಖ್ಯಾನಿಸಲು ಭಾರತದ ಇಂಟರ್ನೆಟ್ ಆಡಳಿತದ ( IIGF) ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ಅಭಿನಂದನಾ ಸಂದೇಶ ಸಚಿವ ರಾಜೀವ್ ಚಂದ್ರಶೇಖರ್ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಿತು.
ಮೊಟ್ಟಮೊದಲ ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಮ್ (IIGF) ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ಅತೀ ದೊಡ್ಡ ಭವಿಷ್ಯ ಹೊಂದಿದೆ ರಾಷ್ಟ್ರವಾಗಿದೆ. ಆನ್‌ಲೈನ್‌ನಲ್ಲಿ 800 ಮಿಲಿಯನ್ ಜನರ ಸಂಪರ್ಕ ಹೊಂದಿದ ಅತೀದೊಡ್ಡ ಕೆನೆಕ್ಟೆಡ್ ರಾಷ್ಟ್ರ. ಇದೀಗ ಗ್ರಾಮೀಣ ಬ್ರಾಡ್‌ಬ್ಯಾಂಡ್ ಕಾರ್ಯಕ್ರಮ ಈ ಆನ್‌ಲೈನ್ ಸಂಪರ್ಕ ಜಾಲವನ್ನು ಮತ್ತಷ್ಟು ವೃದ್ಧಿಸಲಿದೆ. ಇದರಿಂದ ಶೀಘ್ರದಲ್ಲೇ ಭಾರತ 1 ಶತಕೋಟಿಗೂ ಹೆಚ್ಚಿನ ಆನ್‌ಲೈನ್ ಕನೆಕ್ಟೆಡ್ ಹೊಂದಿದೆ ರಾಷ್ಟ್ರವಾಗಲಿದೆ ಎಂದು ಐಐಜಿಎಫ್( India Internet Governance Forum)ಕಾರ್ಯಕ್ರಮದಲ್ಲಿ ರಾಜೀವ್ ಚಂದ್ರಶೇಖರ್ ಹೇಳಿದರು.
ಸ್ಟಾರ್ಟ್ಆಪ್ ಉದ್ಯಮಿಗಳ ಜೊತೆ ದೀಪಾವಳಿ ಆಚರಿಸಿದ ಸಚಿವ ರಾಜೀವ್ ಚಂದ್ರಶೇಖರ್!
ಪ್ರಧಾನಿ ಮೋದಿ(PM Narendra Modi) 2015ರಲ್ಲಿ ಡಿಜಿಟಲ್ ಇಂಡಿಯಾ ಮಿಷನ್ ಆರಂಭಿಸಿದರು. ಈ ಮಿಷನ್ ಇಂದು ಭಾರತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಭಾರತೀಯರ ಜೀವನ ಪರಿವರ್ತನೆ, ಡಿಜಿಟಲ್ ಉದ್ಯಮಶೀಲತೆ ಹಾಗೂ ಆರ್ಥಿಕ ಅವಕಾಶ ವಿಸ್ತರಣೆ ಗುರಿಯೊಂದಿಗೆ ಭಾರತದಲ್ಲಿ ಡಿಜಿಟಲ್ ಮಿಶನ್ ಆರಂಭಗೊಂಡಿತು. ಪರಿಣಾಮ ಸಂಪೂರ್ಣ ಭಾರತ ಡಿಜಿಟಲ್ ಇಂಡಿಯಾದಲ್ಲಿ ಮಿಂಚಿನ ವೇಗದಲ್ಲಿ ಮುನ್ನಗ್ಗುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಭಾರತದ ಈಗಾಗಲೇ ಡಿಜಿಟಲ್ ಇಂಡಿಯಾ ಮೂಲಕ ಕ್ರಾಂತಿ ಮಾಡಿದೆ. 800 ಮಿಲಿಯನ್ ಆನ್‌ವೈನ್ ಸಂಪರ್ಕಿತ ಭಾರತೀಯರು ಇದರಲ್ಲಿದ್ದಾರೆ. ಇನ್ನು 400 ಮಿಲಿಯನ್ ಜನರನ್ನು ಸಂಪರ್ಕಿಸುವ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಪರಿಣಾಮಕಾರಿಯಾಗಿ ಇಂಟರ್‌ನೆಟ್ ನೀಡುವ ಬ್ರ್ಯಾಡ್‌ಬ್ಯಾಂಡ್ ನೆಟ್‌ವರ್ಕ್ ಬಳಸಿಕೊಳ್ಳಬೇಕಿದೆ. ಇದರ ಜೊತೆಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಇಂಟರ್ನೆಟ್ ಮಾಡುವ ಗುರಿ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ(MeitY) ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾನ್ಹೇ ಹೇಳಿದರು.
ನವೋದ್ಯಮಿಗಳ ಪ್ರೋತ್ಸಾಹಕ್ಕೆ ನೀತಿ : ರಾಜೀವ್ ಚಂದ್ರಶೇಖರ್
ಸಾಂಕ್ರಾಮಿಕ ಸಂದರ್ಭಗಳಲ್ಲಿ ಇಂಟರ್ನೆಟ್ ಪ್ರಾಮುಖ್ಯತೆ ಎಷ್ಟಿದೆ ಅನ್ನೋದು ನಮಗೆಲ್ಲರಿಗೂ ಅರಿವಾಗಿದೆ. ನಾವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಸೇವೆ ನೀಡಿದೆ. ಇಂಟರ್‌ನೆಟ್ ನಾಗರಿಕರಿಗಾಗಿ ಕೆಲಸ ಮಾಡುತ್ತದೆ. ಆದರೆ ಇತರ ಸುರಕ್ಷಿತ ಕ್ಷೇತ್ರಗಳಂತೆ ಇಂಟರ್ನೆಟ್‌ನಲ್ಲೂ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ICANN ಮಂಡಳಿಯ ಅಧ್ಯಕ್ಷ ಮಾರ್ಟೆನ್ ಬೊಟರ್‌ಮ್ಯಾನ್ ಹೇಳಿದ್ದಾರೆ.
2022ರಿಂದ ಸ್ಪೇಸ್ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ
3 ದಿನಗಳ ಈ ಕಾರ್ಯಾಗಾರ ಇಂಟರ್ನೆಟ್ ಶಕ್ತಿ ಮೂಲಕ ಭಾರತ ಸಶಕ್ತಗೊಳಿಸುವ ವಿಚಾರದ ಸುತ್ತ ಕೇಂದ್ರೀಕೃತವಾಗಿತ್ತು. ಇದಕ್ಕಾಗಿ ಡಿಜಿಟಲೀಕರಣ ಮಾರ್ಗಸೂಚಿ, ಜಾಗತಿಕ ಭಾರತಕ್ಕೆ ಡಿಜಿಟಲ್ ನೆರವು ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ .
UASG ಚೇರ್, datagroup.inನ ಅಜಯ್ ಡೇಟಾ ಅಧ್ಯಕ್ಷತೆಯಲ್ಲಿ 'ಯೂನಿವರ್ಸಲ್ ಅಕ್ಸೆಪ್ಟೆನ್ಸ್' ಕಾರ್ಯಾಗಾರ, ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಡೈರೆಕ್ಟರ್ ಜನರಲ್ ಡಾ. ಸಂಜಯ್ ಬಹ್ಲ್ ಅವರ ಅಧ್ಯಕ್ಷತೆಯಲ್ಲಿ 'ಸೈಬರ್ ಸ್ಪೇಸ್ ರೆಗ್ಯುಲೇಷನ್ಸ್ - ಕಾನೂನು 'ಫ್ರೇಮ್‌ವರ್ಕ್ ಸೇರಿದಂತೆ ಹಲವು ಮಹತ್ವದ ಕಾರ್ಯಗಾರಗಳು ಮೂರು ದಿನಗಳ ಕಾರ್ಯಕ್ರಮದಲ್ಲಿ ನಡೆಯಿತು.