ನವೋದ್ಯಮಿಗಳ ಪ್ರೋತ್ಸಾಹಕ್ಕೆ ನೀತಿ : ರಾಜೀವ್‌ ಚಂದ್ರಶೇಖರ್‌

  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ವಿದ್ಯುನ್ಮಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಗಣ್ಯ ನಾಯಕನ ಸ್ಥಾನದಲ್ಲಿ ನಿಲ್ಲಿಸಲು ಕಟಿಬದ್ಧ
  • ನವೋದ್ಯಮಿಗಳ ಪ್ರೋತ್ಸಾಹಿಸಲು ಸೂಕ್ತ ನೀತಿ ಜಾರಿಗೆ ತರಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿಕೆ
Policy for Encouraging   Startups Says Minister Rajeev Chandrasekhar snr

 ಬೆಂಗಳೂರು (ಅ.19):  ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾರತವನ್ನು ವಿದ್ಯುನ್ಮಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ (Electronic and technology sector) ಅಗ್ರಗಣ್ಯ ನಾಯಕನ ಸ್ಥಾನದಲ್ಲಿ ನಿಲ್ಲಿಸಲು ಕಟಿಬದ್ಧರಾಗಿದ್ದಾರೆ. ಇದಕ್ಕೆ ಪೂರಕವಾಗಿ ವಿದ್ಯುನ್ಮಾನ ಹಾಗೂ ಐಟಿ ಸಚಿವಾಲಯ (IT Ministry) ಶ್ರಮಿಸುತ್ತಿದ್ದು, ನವೋದ್ಯಮಿಗಳ ಪ್ರೋತ್ಸಾಹಿಸಲು ಸೂಕ್ತ ನೀತಿ ಜಾರಿಗೆ ತರಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev chandrashekar) ಹೇಳಿದ್ದಾರೆ.

ಸೋಮವಾರ ಬೆಂಗಳೂರಿನ ಸಿಡಾಕ್‌ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಜೀವ್‌ ಚಂದ್ರಶೇಖರ್‌ ಅವರು, ಇಂಡಸ್‌ (ಉನ್ನತ ಕೌಶಲ್ಯದ ನಾವೀನ್ಯತೆ ಅಭಿವೃದ್ಧಿ) ಅಭಿವೃದ್ಧಿಪಡಿಸಿರುವ ಐಓಟಿ (IOT) ಕಿಟ್‌ಗೆ (ಸಿಂಗಲ್‌ ಬೋರ್ಡ್‌ ಐಓಟಿ-ಇಂಟರ್ನೆಟ್‌ ಆಫ್‌ ಥಿಂಗ್ಸ್‌ ಸಾಧನ) ಚಾಲನೆ ನೀಡಿದರು.

ಗತಿ ಶಕ್ತಿ ಯೋಜನೆ.. 2022ಕ್ಕೆ ದೇಶದ ಎಲ್ಲ ಹಳ್ಳಿ 4G!

ಸ್ವತಃ ಟೆಕ್ನೋಕ್ರಾಟ್‌ ಆಗಿರುವ ಸಚಿವರು, ನರೇಂದ್ರ ಮೋದಿ (Narendra Modi) ಸರ್ಕಾರ ಭಾರತವನ್ನು ವಿದ್ಯುನ್ಮಾನ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರ ಮಾಡಲು ಮುಂದಾಗಿದೆ. ಇದಕ್ಕಾಗಿ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯವು (IT Ministry) ಪಾಲುದಾರನ ಪಾತ್ರ ಪೋಷಿಸುತ್ತಿದ್ದು, ಮಾರುಕಟ್ಟೆಹಾಗೂ ಬಂಡವಾಳ ಹೂಡಿಕೆ ಸೇರಿದಂತೆ ನಾವೀನ್ಯತೆ, ನವೋದ್ಯಮಕ್ಕೆ ಪ್ರೋತ್ಸಾಹಿಸಲು ಸಿದ್ಧವಾಗಿದೆ. ಜೀವಿತಾವಧಿಯಲ್ಲಿ ಒಮ್ಮೆ ಸಿಗುವ ಅವಕಾಶ ಈಗ ಭಾರತದ ಎದುರಿದೆ. ಇದರ ಸದುಪಯೋಗಕ್ಕಾಗಿ ಸೆಮಿ ಕಂಡಕ್ಟರ್‌ ಹಾಗೂ ನವೋದ್ಯಮಗಳಿಗೆ ಸೂಕ್ತ ನೀತಿ ರೂಪಿಸಲು ನರೇಂದ್ರ ಮೋದಿ ಸರ್ಕಾರ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಸಿಡಾಕ್‌ ಅಭಿವೃದ್ಧಿಪಡಿಸಿರುವ ಐಓಟಿ ಕಿಟ್‌ ಬಗ್ಗೆ ಮಾತನಾಡಿದ ಅವರು, ಕಿಟ್‌ ಕ್ರೆಡಿಟ್‌ಕಾರ್ಡ್‌ (Credit Card) ಅಳತೆಯಲ್ಲಿದ್ದು, ಆರು ಸೆನ್ಸಾರ್‌ಗಳು, ಆ್ಯಕ್ಚುಯೇಟರ್‌, ಡಿಬರ್ಗ್‌ ಇಂಟರ್‌ಫೇಸಸ್‌ ಒಳಗೊಂಡಿದೆ. ಇದು ಸುಲಭವಾಗಿ ಒಯ್ಯಬಹುದಾದ ಮತ್ತು ಕಾಂಪ್ಯಾಕ್ಟ್  ವಿನ್ಯಾಸದಲ್ಲಿದ್ದು, ಡ್ರೋನ್‌ (Drone) ನಿರ್ಮಾಣ ಸೇರಿದಂತೆ ಸ್ಮಾರ್ಟ್‌ ಸೊಲ್ಯೂಷನ್ಸ್‌ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ. ಪ್ರತಿ ಯೂನಿಟ್‌ 2,500 ರು. ಬೆಲೆ ಇರಲಿದ್ದು, ಶೀಘ್ರದಲ್ಲೇ ಜಿಇಎಂ (GEM) ಪೋರ್ಟಲ್‌ ನಲ್ಲಿ ಲಭ್ಯವಿರುತ್ತದೆ. ಸಿಡಾಕ್‌ ಈ ತಂತ್ರಜ್ಞಾನವನ್ನು ವಾಣಿಜ್ಯ ಉತ್ಪಾದನೆಗಾಗಿ ಸ್ಟಾರ್ಟ್‌ಅಪ್‌ಗಳಿಗೆ ವರ್ಗಾಯಿಸಲು ಸಿದ್ಧವಾಗಿದೆ ಎಂದರು.

ಅಂದು ಸಿದ್ದು ವಾಚ್‌.. ಇಂದು ಡಿಕೆಶಿ ಕಿಕ್ ಬ್ಯಾಕ್.. ಕಾಂಗ್ರೆಸ್‌ ಅಂದ್ರೆ ಭ್ರಷ್ಟಾಚಾರದ DNA!

ಇದೇ ವೇಳೆ ಸಿಡಾಕ್‌ ಅಭಿವೃದ್ಧಿಪಡಿಸಿರುವ ನವೀನ ತಂತ್ರಜ್ಞಾನಗಳಾದ ಸ್ಮಾರ್ಟ್‌ ನೀರಿನ ಮೀಟರ್‌, ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌, ಸ್ಮಾರ್ಟ್‌ ನೀರು ಸರಬರಾಜು ವ್ಯವಸ್ಥೆ, ಸಿಡಾಕ್‌ನ ಅತ್ಯುನ್ನತ ಸಾಮರ್ಥ್ಯದ ಕಂಪ್ಯೂಟಿಂಗ್‌ (ಎಚ್‌ಪಿಸಿ), ಕ್ವಾಂಟಮ್ ಕಂಪ್ಯೂಟಿಂಗ್‌ ತಂತ್ರಜ್ಞಾನಗಳನ್ನು ಅವಲೋಕನ ಮಾಡಿದರು.

ನೀತಿ ರೂಪಣೆ ಕುರಿತು ಸಲಹೆಗಳನ್ನು ಆಹ್ವಾನಿಸಿದ ಸಚಿವರು, ಟೆಕ್ಸಾಸ್‌ ಇನ್‌ಸ್ಟ್ರು ಮೆಂಟ್ಸ್‌ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್‌ ಕುಮಾರ್‌, ಸಂಖ್ಯಾ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಾಗ್‌ ನಾಯಕ್‌, ಸಿರೆಲ್‌ ಸಿಸ್ಟಮ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಮೀತ್‌ ಮಾರ್ಥೂ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದರು.

Latest Videos
Follow Us:
Download App:
  • android
  • ios