Asianet Suvarna News Asianet Suvarna News

ಮಾರ್ಥೋಮಾ ಕ್ರಿಶ್ಚಿಯನ್ ಸಮುದಾಯದ ಪ್ರಧಾನ ಗುರು ನಿಧನ, ಮೋದಿ ಸಂತಾಪ!

 ಮರ್ಥೋಮಾ ಕ್ರಿಶ್ಚಿಯನ್ ಸಮುದಾಯದ ಮುಖ್ಯಗುರು 90 ವರ್ಷದ ಜೋಸೆಫ್ ಮಾರ್ಥೋಮಾ ನಿಧನ| ಟ್ವೀಟ್ ಮಾಡಿ ಮೋದಿ ಸಂತಾಪ| ಆದರ್ಶಗಳನ್ನು ಯಾವತ್ತೂ ನೆನಪಿಸಿಕೊಳ್ಳಲಾಗುತ್ತದೆ

PM Modi condoles Dr Joseph Marthoma Metropolitan dies at 90 pod
Author
Bangalore, First Published Oct 18, 2020, 9:57 AM IST
  • Facebook
  • Twitter
  • Whatsapp

ನವದೆಹಲಿ(ಅ.18): ಮರ್ಥೋಮಾ ಕ್ರಿಶ್ಚಿಯನ್ ಸಮುದಾಯದ ಮುಖ್ಯಗುರು 90 ವರ್ಷದ ಜೋಸೆಫ್ ಮಾರ್ಥೋಮಾ ಕೇರಳದ ಥಿರುವಲ್ಲಾದಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.  2007 ರಲ್ಲಿ ಅವರು ಈ ಸಮುದಾಯದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಜೋಸೆಫ್ ಮಾರ್ಥೋಮಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ 'ಜೋಸೆಫ್ ಮಾರ್ಥೋಮಾ ಓರ್ವ ಅಸಾಧಾರಣ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದರು. ಮಾನವೀಯತೆಗೆ ಪ್ರಾಮುಖ್ಯತೆ ಕೊಟ್ಟ ಅವರು ಬಡವರು, ದಲಿತರ ಜೀವನ ಉತ್ತಮಗೊಳಿಸಲು ಬಹಳಷ್ಟು ಪರಿಶ್ರಮಪಟ್ಟಿದ್ದಾರೆ. ಅವರ ಆದರ್ಶಗಳನ್ನು ಯಾವತ್ತೂ ನೆನಪಿಸಿಕೊಳ್ಳಲಾಗುತ್ತದೆ' ಎಂದಿದ್ದಾರೆ.

ಸಂತ ಥಾಮಸ್‌ರವರ ವಂಶಜರು ಮಾರ್ಥೋಮಾ ಕ್ರಿಶ್ಚಿಯನ್ನರು

ಮಾರ್ಥೋಮಾ ಕ್ರಿಶ್ಚಿಯನ್ ಸಮುದಾಯ ಅನೇಕ ಅನುಯಾಯಿಗಳನ್ನು ಹೊಂದಿದೆ. ಇವರೆಲ್ಲರೂ ಸಂತ ಥಾಮಸ್ ವಂಶಜರೆಂದು ಕರೆಸಿಕೊಳ್ಳುತ್ತಾರೆ. ಸಂತ ಥಾಮಸ್ ಯೇಸು ಕ್ರಿಸ್ತರ 12 ಶಿಷ್ರು, ಕ್ರಿಶ್ಚಿಯನ್ ಧರ್ಮ ಪ್ರಚಾರಕರಲ್ಲಿ ಒಬ್ಬರು. ಮಾರ್ಥೋಮಾ ಸಿರಿಯನ್ ಚರ್ಚ್‌ ಕೇರಳದಲ್ಲಿರುವ ಅತ್ಯಂತ ಪುರಾತನ ಸಿರಿಯನ್ ಚರ್ಚ್ ಆಗಿದೆ. ಈ ಚರ್ಚ್‌ ದೇಶಾದ್ಯಂತ ಅನೇಕ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತದೆ. 

Follow Us:
Download App:
  • android
  • ios