ಉನ್ನತ ಮಟ್ಟದ ಸಭೆ; ಲಸಿಕೆ, ಆಕ್ಸಿಜನ್, ವೈದ್ಯಕೀಯ ಸಲಕರಣೆ ಆಮದು ಸುಂಕ ರದ್ದು!

ಕೊರೋನ ವೈರಸ್ ಕಾರಣ ದೇಶದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ, ವೈದ್ಯಕೀಯ ಸಲಕರಣೆ, ಲಸಿಕೆ ಸಮಸ್ಯೆ ಸೇರಿದಂತೆ ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.  ಈ ಸಭೆಯಲ್ಲಿ ವಿದೇಶದಿಂದ ಆಕ್ಸಿಜನ್ ಸೇರಿದಂತೆ ಕೆಲ ವೈದ್ಯಕೀಯ ಸಲಕರಣೆಗೆ ಆಮದು ಸುಂಕ ರದ್ದು ಮಾಡಲಾಗಿದೆ. ಮೋದಿ ಉನ್ನತ ಮಟ್ಟದ ಸಭೆಯ ಪ್ರಮುಖಾಂಶ ಇಲ್ಲಿದೆ

PM Modi chairs high level meeting measures to increase supply of oxygen and related equipment ckm

ನವದೆಹಲಿ(ಏ.24): ದೇಶದಲ್ಲಿ ಕೊರೋನಾ 2ನೇ ಅಲೆ ತಂದಿಟ್ಟ ಆರೋಗ್ಯ ತುರ್ತು ಪರಿಸ್ಥಿತಿ ಭೀಕರವಾಗಿದೆ. ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ನೀಗಿಸಲು ಸಾಗರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಆದರೆ ಬೇಡಿಕೆ ಹೆಚ್ಚಿರುವ ಕಾರಣ ಇನ್ನೂ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ದೇಶದಲ್ಲಿ ಆಮ್ಲಜನ ಲಭ್ಯತೆ ಹೆಚ್ಚಿಸಲು ಕೈಗೊಂಡ ಕ್ರಮಗಳ ಪರಿಶೀಲಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!.

ಈ ಮಹತ್ವದ ಸಭೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಪೂರೈಕೆ ಮತ್ತು ರೋಗಿಗಳ ಆರೈಕೆಗೆ ಅಗತ್ಯವಾದ ಸಲಕರಣೆಗಳನ್ನು ತ್ವರಿತವಾಗಿ ಪೂರೈಸುವ ಹಾಗೂ ದೇಶದಲ್ಲಿ ಉತ್ಪಾದಕತೆ  ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಆಮ್ಲಜನಕ ಮತ್ತು ವೈದ್ಯಕೀಯ ಸರಬರಾಜುಗಳ ಲಭ್ಯತೆಯನ್ನು ಹೆಚ್ಚಿಸಲು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಸಿನರ್ಜಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಪಿಎಂ ಒತ್ತಿ ಹೇಳಿದರು.

ಆಮ್ಲಜನಕ, ಲಸಿಕೆ, ವೈದ್ಯಕೀಯ ಸಲಕೆರಣೆಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಮಾರ್ಗ ಸುಲಭ ಮಾಡಲಿದೆ. ಆಮದು ಸುಂಕ ರದ್ದು ಮಾಡಲಾಗಿದೆ. 3 ತಿಂಗಳ ಆಮದು ಸುಂಕ ರದ್ಧು ಮಾಡಲಾಗಿದೆ.

  • ಮೆಡಿಕಲ್ ಗ್ರೇಡ್ ಆಮ್ಲಜನಕ
  • ಫ್ಲೋ ಮೀಟರ್, ನಿಯಂತ್ರಕ, ಕನೆಕ್ಟರ್‌ಗಳು ಮತ್ತು ಕೊಳವೆಗಳ ಜೊತೆಗೆ ಆಮ್ಲಜನಕ ಸಾಂದ್ರಕ
  • ವ್ಯಾಕ್ಯೂಮ್ ಪ್ರೆಶರ್ ಸ್ವಿಂಗ್ ಅಬ್ಸಾರ್ಪ್ಷನ್ (VPSA)ಮತ್ತು ಪ್ರೆಶರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ಎ) ಆಮ್ಲಜನಕ ಸಸ್ಯಗಳು, ಕ್ರಯೋಜೆನಿಕ್ ಆಕ್ಸಿಜನ್ ಏರ್ ಸೆಪರೇಷನ್ ಯೂನಿಟ್ಸ್ (ಎಎಸ್‌ಯು) ದ್ರವ / ಅನಿಲ ಆಮ್ಲಜನಕ
  • ಆಮ್ಲಜನಕ ಕ್ಯಾನಿಸ್ಟರ್
  • ಆಮ್ಲಜನಕ ತುಂಬುವ ವ್ಯವಸ್ಥೆಗಳು
  • ಆಮ್ಲಜನಕ ಶೇಖರಣಾ ಟ್ಯಾಂಕ್‌ಗಳು, ಕ್ರಯೋಜೆನಿಕ್ ಸಿಲಿಂಡರ್‌ಗಳು ಮತ್ತು ಟ್ಯಾಂಕ್‌ಗಳು ಸೇರಿದಂತೆ ಆಮ್ಲಜನಕ ಸಿಲಿಂಡರ್‌ಗಳು
  • ಆಮ್ಲಜನಕ ಉತ್ಪಾದಕಗಳು
  • ಶಿಪ್ಪಿಂಗ್ ಆಕ್ಸಿಜನ್‌ಗಾಗಿ ಐಎಸ್‌ಒ ಕಂಟೇನರ್‌ಗಳು
  • ಆಮ್ಲಜನಕಕ್ಕಾಗಿ ಕ್ರಯೋಜೆನಿಕ್ ರಸ್ತೆ ಸಾರಿಗೆ ಟ್ಯಾಂಕ್
  • ಆಮ್ಲಜನಕದ ಉತ್ಪಾದನೆ, ಸಾರಿಗೆ, ವಿತರಣೆ ಅಥವಾ ಸಂಗ್ರಹಣೆಗಾಗಿ ಉಪಕರಣಗಳ ತಯಾರಿಕೆ
  • ವೆಂಟಿಲೇಟರ್‌ಗಳು ವೈರಲ್ ಫಿಲ್ಟರ್‌ಗಳು ಸೇರಿದಂತೆ ವೈದ್ಯಕೀಯ ಸಲಕರಣೆ
  • ನೇಸಲ್ ಕಾನ್ಯುಯೆಲ್ ಡಿವೈಸ್

ಮೇಲಿನ ಸಲಕರಣೆಗಳು, ಲಸಿಕೆ ಸೇರದಂತೆ ಹಲವು ವಸ್ತುಗಳಿಗೆ ಆಮದು ಸುಂಕ ರದ್ದು ಮಾಡಲಾಗಿದೆ. ಕಸ್ಟಮ್ ಡ್ಯೂಟಿ ಕ್ಲಿಯೆರೆನ್ಸ್‌ಗಾಗಿ ಪ್ರಧಾನಿ ಮೋದಿ ಕಂದಾಯ ಇಲಾಖೆಗೆ ನಿರ್ದೇಶ ನೀಡಿದ್ದಾರೆ. ಇದರ ಮೇಲ್ವಿಚಾರಣೆಗಾಗಿ ಕಸ್ಟಮ್ಸ್ ಜಂಟಿ ಕಾರ್ಯದರ್ಶಿ ಗೌರವ್ ಮಸಲ್ಡಾನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

Latest Videos
Follow Us:
Download App:
  • android
  • ios