Asianet Suvarna News Asianet Suvarna News

ಮೋದಿ ಕ್ಯಾಬಿನೆಟ್ 2.0: ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ ಘೋಷಣೆ!

  • ನೂತನ ಸಚಿವರ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ
  • ಕೃಷಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಪ್ಯಾಕೇಜ್ ಘೋಷಣೆ
  • ಎಪಿಎಂಸಿ ಮೂಲಕ ಕೃಷಿಕರಿಗೆ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್
PM Modi cabinet Rs 1 lakh crore will be given to farmers via APMC to boost agricultre sector ckm
Author
Bengaluru, First Published Jul 8, 2021, 8:56 PM IST

ನವದೆಹಲಿ(ಜು.08): ಪ್ರಧಾನಿ ನರೇಂದ್ರ ಮೋದಿ ಇಂದು ಸತತ ಸಭೆ ನಡೆಸಿದ್ದಾರೆ. ನೂತನ ಸಚಿವರು, ಪರಿಷ್ಕೃತ ಕ್ಯಾಬಿನೆಟ್ ಜೊತೆ ಮೋದಿ ವರ್ಚುವಲ್ ಸಭೆ ನಡೆಸಿದ್ದಾರೆ. ಈ ಸಭೆ ಬಳಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭರ್ಜರಿ ಪ್ಯಾಕೇಜ್ ಘೋಷಿಸಿದ್ದಾರೆ.  ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ.

ನೂತನ ಸಚಿವರ ಕ್ಯಾಬಿನೆಟ್ ಸಭೆ; ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ ಘೋಷಣೆ!.

ಕೃಷಿ ಉತ್ಪಾದನೆ ಮತ್ತು ಜಾನುವಾರು ಮಾರುಕಟ್ಟೆ ಸೇರಿದಂತೆ ಕೃಷಿ ಕ್ಷೇತ್ರಕ್ಕೆ APMC ಮೂಲಕ 1 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.  ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ರೈತರ ಮೂಲಸೌಕರ್ಯ ನಿಧಿಗೆ ಆತ್ಮನಿರ್ಭಾರ ಭಾರತ್ ಅಡಿಯಲ್ಲಿ ನಿಗದಿಪಡಿಸಿದ 1 ಲಕ್ಷ ಕೋಟಿ ರೂ.ಗಳನ್ನು ಎಪಿಎಂಸಿಗಳು ಬಳಸಬಹುದು ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

 

 ತೆಂಗಿನಕಾಯಿ ಕೃಷಿಯನ್ನು ಹೆಚ್ಚಿಸಲು ನಾವು ತೆಂಗಿನಕಾಯಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದ್ದೇವೆ. ತೆಂಗಿನಕಾಯಿ ಮಂಡಳಿಯ ಅಧ್ಯಕ್ಷರು ಅಧಿಕಾರೇತರ ವ್ಯಕ್ತಿಯಾಗಲಿದ್ದಾರೆ. ಈ ಮೂಲಕ ತೆಂಗಿನಕಾಯಿ ಕೃಷಿ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದರು.

 

ಆಗಸ್ಟ್ 15ರ ವರೆಗೆ ದೆಹಲಿಯಲ್ಲೇ ಇರಬೇಕು ; ನೂತನ ಸಚಿವರಿಗೆ ಬಂತು ಮಹತ್ವದ ಸೂಚನೆ!.

ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಗೌರವಿಸಲಿದೆ. ರೈತರು ಹೊಸ ಕಾಯ್ದೆ ಹಿಂತೆಗೆದುಕೊಳ್ಳಬೇಕು ಅನ್ನೋ ಒಂದೇ ಆಗ್ರಹ ಬಿಟ್ಟು, ಕಾಯ್ದೆಯಲ್ಲಿರುವ ಯಾವುದೇ ಅಂಶದ ತಿದ್ದುಪಡಿಗೆ, ಚರ್ಚೆಗೆ ಕೇಂದ್ರ ಸಿದ್ಧ ಎಂದು ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದ್ದಾರೆ.  

ಎಪಿಎಂಸಿಗಳನ್ನು ತೆಗೆದುಹಾಕಲಾಗುವುದಿಲ್ಲ. ಕೃಷಿ ಕಾನೂನು ಅನುಷ್ಠಾನದ ಬಳಿಕ ಎಪಿಎಂಸಿಗಳು ಕೇಂದ್ರದಿಂದ ಮೂಲ ಸೌಕರ್ಯ ನಿಧಿಯಿಂದ ಕೋಟ್ಯಾಂಟರ ರೂಪಾಯಿಗಳನ್ನು ಪಡೆಯುತ್ತಿದೆ. ಇದರಿಂದ ರೈತರಿಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತೋಮರ್ ಹೇಳಿದ್ದಾರೆ.
 

Follow Us:
Download App:
  • android
  • ios