ನವದೆಹಲಿ(ಏ.08): ಭಾರತಕ್ಕೆ ಕೊರೋನಾ ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಆದರೆ ಎಲ್ಲರ ಸಹಕಾರ ಅಗತ್ಯ. ಒಂದು ಕೊರೋನಾ ಟೆಸ್ಟಿಂಗ್ ಲ್ಯಾಬ್‌ನಿಂದ ಇದೀಗ ಪ್ರತಿ ಜಿಲ್ಲೆಯಲ್ಲಿ ಲ್ಯಾಬ್‌ಗಳಿವೆ. ಕೊರೋನಾ ಹೊಡೆದೋಡಿಸಲು ಭಾರತ ಶಕ್ತವಾಗಿದೆ. ಕೊರೋನಾ ಪರೀಕ್ಷೆಯತ್ತ ಹೆಚ್ಚಿನ ಗಮಹರಿಸಬೇಕು. ಟೆಸ್ಟಿಂಗ್ ಮೂಲಕ ಕೊರೋನಾ ಮೂಲ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಹೆಚ್ಚಿನ ಒತ್ತು ನೀಡಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ

 

ಕೊರೋನಾ ನಿಯಂತ್ರಣಕ್ಕೆ ಕರೆದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಮೋದಿ ಮಹತ್ವದ ಸಲಹೆ ನೀಡಿದ್ದಾರೆ. ಕೊರೋನಾ 2ನೆ ಅಲೆಯನ್ನು ತಡೆಯಲು ಕಟ್ಟು ನಿಟ್ಟಿನ ಮಾರ್ಗ ಅನುಸರಿಸಬೇಕಿದೆ ಎಂದಿದ್ದಾರೆ. ಕೊರೋನಾ ಪ್ರಕರಣ ಹೆಚ್ಚಳಕ್ಕೆ ಹೆದರುವ ಅಗತ್ಯವಿಲ್ಲ. ಆದರೆ ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ಮೆಂಟ್ ಸೂತ್ರವನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು ಎಂದು ಮೋದಿ ಹೇಳಿದ್ದಾರೆ.

11 ರಾಜ್ಯಗಳ ಆರೋಗ್ಯ ಸಚಿವರ ಜೊತೆ ಹರ್ಷವರ್ಧನ್ ಕೊರೋನಾ ಸಭೆ!.

ಮಹಾರಾಷ್ಟ್ರ, ಪಂಜಾಬ್, ಚತ್ತೀಸಘಡ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ಅತೀಯಾಗಿದೆ. ಮೊದಲ ಅಲೆಯಲ್ಲಿನ ಗರಿಷ್ಠ ಪ್ರಕರಣಗಳ ಸಂಖ್ಯೆಯನ್ನು ಈಗಾಗಲೇ ದಾಟಿದೆ. ಇದೀಗ ಮೊದಲ ಅಲೆಯಲ್ಲಿ ನಮ್ಮಲ್ಲಿನ ಕೊರತೆಗಳು ನೀಗಿಸಲಾಗಿದೆ. ಮೆಡಿಕಲ್ ಸಲಕರಣೆಗಳು ನಮ್ಮಲ್ಲಿದೆ. ಹೀಗಾಗಿ ಒಗ್ಗಟ್ಟಾಗಿ ಹೋರಾಡಿದರೆ ಕೊರೋನಾ ನಿರ್ಮೂಲನೆ ಸಾಧ್ಯ ಎಂದಿದ್ದಾರೆ.

ಕೊರೋನಾ ಮಾರ್ಗಸೂಚಿಗಳ ಪಾಲನೆ ಜೊತೆಗೆ ಮೈಕ್ರೋ ಕಂಟೈನ್ಮೆಂಟ್ ಝೋನ್, ನೈಟ್ ಕರ್ಫ್ಯೂಗಳಿಂದ ಕೊರೋನಾ ಚೈನ್ ಬ್ರೇಕ್ ಮಾಡಲು ಸಾಧ್ಯವಿದೆ.  COVID-19 ಪರೀಕ್ಷೆಗೆ ಒತ್ತು ನೀಡುವಂತೆ ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಶೇಕಡಾ 70 ರಷ್ಟು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿ, ಆದರೆ ಸೂಕ್ತ ಪರೀಕ್ಷೆ, ಚಿಕಿತ್ಸೆಯಿಂದ ನಿಯಂತ್ರಿಸಲು ಸಾಧ್ಯವಿದೆ ಎಂದು ಮೋದಿ ಹೇಳಿದ್ದಾರೆ.

ಏ.20ರ ವೇಳೆಗೆ ಬೆಂಗ್ಳೂರಲ್ಲಿ ನಿತ್ಯ 6500+ ಕೊರೋನಾ ಕೇಸ್‌..!...

ಮಹತ್ವದ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿನ ಕೊರೋನಾ ಪ್ರಕರಣ ಹರಡುವುದನ್ನು ತಡೆಯಲು ತುರ್ತು ಕ್ರಮ ಅಗತ್ಯವಾಗಿದೆ. ಈಗಾಗಲೇ 9 ಕೋಟಿ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ ಎಂದರು.

ಕೊರೋನಾ ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಲಸಿಕೆ ನೀಡುತ್ತಿಲ್ಲ ಎಂಬ ದೂರಿನ ನಡುವೆ ಕೇಂದ್ರ ಸರ್ಕಾರ ಇದೀಗ ಹೆಚ್ಚುವರಿ ಲಸಿಕೆ ನೀಡುವ ಭರವಸೆ ನೀಡಿದೆ.  ಆರಂಭದಲ್ಲಿ ನಿಗದಿಪಡಿಸಿದ 7.3 ಲಕ್ಷ ಡೋಸ್ ಬದಲು 17 ಲಕ್ಷ ಡೋಸ್ ಕಳುಹಿಸಲು ಕೇಂದ್ರ ನಿರ್ಧರಿಸಿದೆ.   

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಭೀತಿ ಹೆಚ್ಚಾದ ಕಾರಣ ಉನ್ನತಮಟ್ಟದ ಸಭೆ ನಡೆಸಿದ್ದರು. ಕೊರೋನಾ ಚಿಕಿತ್ಸಾ ಕೇಂದ್ರ, ಬೆಡ್ ಲಭ್ಯತೆ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಹರಡಂತೆ ಕ್ರಮ, ಲಸಿಕೆ ಅಭಿಯಾನ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಿದ್ದರು. ಬಳಿಕ ಮಹಾರಾಷ್ಟ್ರ ಸೇರಿದಂತ 3 ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ಅಧ್ಯಯನಕ್ಕೆ 3 ತಂಡಗಳನ್ನು ಕಳುಹಿಸಿದ್ದರು.