ಅಮರನಾಥ ನೋಡಲು ಅಮೆರಿಕಾದಿಂದ ಬಂದವರಿಗೆ ಪ್ರಧಾನಿ ಶ್ಲಾಘನೆ

ಇತ್ತೀಚೆಗೆ ಪವಿತ್ರ ಅಮರನಾಥ ಯಾತ್ರೆಗೆ ಬಂದಿದ್ದ ಇಬ್ಬರು ಅಮೆರಿಕನ್ನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PM Modi appreciates those who came from America for Amarnath Yatra akb

ನವದೆಹಲಿ: ಇತ್ತೀಚೆಗೆ ಪವಿತ್ರ ಅಮರನಾಥ ಯಾತ್ರೆಗೆ ಬಂದಿದ್ದ ಇಬ್ಬರು ಅಮೆರಿಕನ್ನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಜಗತ್ತಿನ ಎಲ್ಲೆಡೆಯಿಂದ ಭಾರತದ ತೀರ್ಥಕ್ಷೇತ್ರಗಳಿಗೆ ಯಾತ್ರಿಕರು ಬರುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.  ಅಮರನಾಥ ಯಾತ್ರೆಯಲ್ಲಿ ಸ್ವಾಮಿ ವಿವೇಕಾನಂದರಿಗಾದ ಅನುಭವಗಳ ಬಗ್ಗೆ ಈ ವಿದೇಶಿ ಅತಿಥಿಗಳು ಎಲ್ಲೋ ಕೇಳಿದ್ದರು. ಅದರಿಂದ ಅವರು ಎಷ್ಟುಪ್ರಭಾವಿತರಾಗಿದ್ದರು ಅಂದರೆ ಸ್ವತಃ ಅವರೇ ಅಮರನಾಥ ಯಾತ್ರೆಗೆ ಬಂದಿದ್ದರು. ಈ ಯಾತ್ರೆಯನ್ನು ಅವರು ಭೋಲೇನಾಥನ ಆಶೀರ್ವಾದವೆಂದು ಪರಿಗಣಿಸಿದ್ದರು. ಇದು ಭಾರತದ ವಿಶೇಷತೆ. ನಮ್ಮ ದೇಶ ಎಲ್ಲರನ್ನೂ ಸ್ವೀಕರಿಸುತ್ತದೆ, ಎಲ್ಲರಿಗೂ ಏನನ್ನಾದರೂ ಕೊಡುತ್ತದೆ’ ಎಂದು ಮೋದಿ ತಿಳಿಸಿದ್ದಾರೆ.

ಜು.11ರಂದು ಜಮ್ಮು ಕಾಶ್ಮೀರದ ಅಮರನಾಥ ಕ್ಷೇತ್ರಕ್ಕೆ ಇಬ್ಬರು ಅಮೆರಿಕನ್ನರು ಬಂದಿದ್ದರು. ಈ ಯಾತ್ರೆಗಾಗಿ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದೆವು, ಇದು ತಮ್ಮ ಕನಸು ನನಸಾದ ಕ್ಷಣ ಎಂದು ಅವರು ಹೇಳಿಕೊಂಡಿದ್ದರು. ನಾವು ಕ್ಯಾಲಿಫೋರ್ನಿಯಾದ ದೇವಸ್ಥಾನವೊಂದರಲ್ಲಿ ವಾಸಿಸುತ್ತೇವೆ. ನಾವಿಬ್ಬರೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು. ಅಮರನಾಥದಲ್ಲಿ ವಿವೇಕಾನಂದರಿಗೆ ವಿಶೇಷ ಅನುಭವವಾಗಿತ್ತು. 40 ವರ್ಷಗಳಿಂದ ನಾವು ಈ ಕತೆ ಕೇಳುತ್ತಿದ್ದೇವೆ. ನಂತರ ಅಮರನಾಥದಲ್ಲಿ ನಡೆಯುವ ಆರತಿಯನ್ನು ನೋಡುತ್ತಿದ್ದೆವು. ಅದರ ಅನುಭವ ವರ್ಣನಾತೀತ. ಈಗ ನಮಗೆ ಬಹಳ ಸಂತೋಷವಾಗಿದೆ. ಇಲ್ಲಿಗೆ ಭೇಟಿ ನೀಡುವುದು ಅಸಾಧ್ಯವೆಂದೇ ಭಾವಿಸಿದ್ದೆವು. ಆದರೆ ಭೋಲೇನಾಥನ ಕೃಪೆಯಿಂದ ಎಲ್ಲವೂ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದರು.

'ಓಂ ನಮಃ ಶಿವಾಯ' ಎನ್ನುತ್ತಾ ತಾಯಿ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯಾ ಐಯ್ಯರ್

ಅದೃಷ್ಟ ಚೆನ್ನಾಗಿತ್ತು, ಮಳೆ ನಿಂತು ಕಾಪ್ಟರ್‌ನಲ್ಲಿ ರಕ್ಷಿಸಿದರು: ಅಮರನಾಥ ಯಾತ್ರಿಕರ ಅನುಭವದ ಮಾತು

Latest Videos
Follow Us:
Download App:
  • android
  • ios