ನಟಿ ಸಾನ್ಯಾ ಐಯ್ಯರ್ ಅಮರನಾಥ ಯಾತ್ರೆಯಲ್ಲಿದ್ದಾರೆ. ಯಾತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Image credits: our own
ತಾಯಿ ಜೊತೆ ಸಾನ್ಯಾ
ತನ್ನ ತಾಯಿ ಜೊತೆ ಸಾನ್ಯಾ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆಯ ಒಂದಿಷ್ಟು ಫೋಟೋಗಳನ್ನು ಸಾನ್ಯಾ ಶೇರ್ ಮಾಡಿದ್ದಾರೆ.
Image credits: our own
ಅವಿಸ್ಮರಣೀಯ ಪ್ರಯಾಣ
ಯಾತ್ರೆಯ ಬಗ್ಗೆ ಸಾನ್ಯಾ 'ಅಮರನಾಥ ಒಂದು ಅವಿಸ್ಮರಣೀಯ ಪ್ರಯಾಣ. ಪವಿತ್ರ ಗುಹೆಗೆ 17 ಕಿಲೋಮೀಟರ್ ಒಂದು ಮಾರ್ಗದ ಪಾದಯಾತ್ರೆ ಸುಲಭದ ಕೆಲಸವಾಗಿರಲಿಲ್ಲ ಎಷ್ಟೋ ಭಕ್ತರು ಸಮರ್ಪಣಾ ಭಾವದಿಂದ ಸಾಗುತ್ತಾರೆ' ಎಂದು ಹೇಳಿದ್ದಾರೆ.
Image credits: our own
ಅಮರನಾಥ್ ಹೆಸರು ಬಂದಿದ್ದು ಹೇಗೆ?
ಅಮರ ಕಥೆಯನ್ನು ತನ್ನ ಪಾರ್ವತಿಗೆ ತಿಳಿಸಿದ ಜಾಗ ಅಮರನಾಥ್ ಎಂದು ಹೆಸರುವಾಸಿಯಾಗಿದೆ.ಕಥೆಯನ್ನು ಕೇಳಿಸಿಕೊಂಡ ಎರಡು ಪಾರಿವಾಳವು ಅಮರವಾಗಿಯೇ ಉಳಿಯಿತು ಎಂದು ತಿಳಿಸಿದ್ದಾರೆ.
Image credits: our own
ಟ್ರಕ್ಕಿಂಗ್
ಇತ್ತೀಚಿಗಷ್ಟೆ ಸಾನ್ಯಾ ಟ್ರಕ್ಕಿಂಗ್ ಫೋಟೋ ಹಂಚಿಕೊಂಡಿದ್ದರು. ಕೊರೆಯುವ ಚಳಿ, ವಿಪರೀತ ಮಳೆಯ ನಡುವೆಯೂ ಟ್ರಕ್ಕಿಂಗ್ ಮಾಡಿದ ಅನುಭವ ಹಂಚಿಕೊಂಡಿದ್ದರು.
Image credits: our own
ಫೋಟೋಶೂಟ್ ಮೂಲಕ ಮಿಂಚಿಂಗ್
ಸಾನ್ಯಾ ಐಯ್ಯರ್ ಇತ್ತೀಚೆಗೆ ಸಿಕ್ಕಾಪಟ್ಟೆ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಜೊತೆ ಫೋಟೋಶೂಟ್ ಮೂಡಿಸಿದ್ದರು.
Image credits: our own
ಸಿನಿಮಾಗಾಗಿ ಕಾಯುತ್ತಿರುವ ಸಾನ್ಯಾ
ಸಾನ್ಯಾ ಐಯ್ಯರ್ ಸಿನಿಮಾಗಳನ್ನು ಮಾಡುವ ಆಲೋಚನೆಯಲ್ಲಿದ್ದಾರೆ. ಉತ್ತಮ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದಾರೆ. ಸದ್ಯದಲ್ಲೇ ತೆರೆಮೇಲೆ ಮಿಂಚುವ ಸಾಧ್ಯತೆ ಇದೆ.