Asianet Suvarna News Asianet Suvarna News

Sheikh Hasina visit India ಮೋದಿ ಪ್ರಧಾನಿಯಾಗಿರುವವರೆಗೆ ಭಾರತ ಬಾಂಗ್ಲಾದೇಶ ಬಾಂಧವ್ಯಕ್ಕೆ ಅಡ್ಡಿ ಇಲ್ಲ, ಶೇಕ್ ಹಸಿನಾ!

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಭಾರತ ಪ್ರವಾಸದಲ್ಲಿ 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿ ಮೋದಿಯಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಬಾಂಧವ್ಯ ವೃದ್ಧಿಯಾಗಿದೆ ಎಂದಿದ್ದಾರೆ. 

PM modi and Bangladesh PM Sheikh Hasina Signed 7 MoUs Lauds vision and bilateral ties ckm
Author
First Published Sep 6, 2022, 3:49 PM IST

ನವದೆಹಲಿ(ಸೆ.06): ಭಾರತ-ಬಾಂಗ್ಲಾ ದೇಶದ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ 4 ದಿನಗಳ ಭೇಟಿಗಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ  ನವದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಪ್ರಮುಖ 7 ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಕ್ ಹಸಿನಾ ಸಹಿ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಶೇಕ್ ಹಸಿನಾ, ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಇರುವವರೆಗೆ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧಕ್ಕೆ ಯಾವುದೇ ಅಡ್ಡಿ ಇಲ್ಲ. ಮೋದಿಯಿಂದ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಸಿದೆ ಎಂದು ಶೇಕ್ ಹಸಿನಾ ಹೇಳಿದ್ದಾರೆ. ಪ್ರಾದೇಶಿಕ ಸಂಪರ್ಕ ಉಪಕ್ರಮ ವಿಸ್ತರಣೆ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಸ್ಥಾಪಿಸುವುದು , ರಕ್ಷಣಾ ಸಹಕಾರವನ್ನು ನವೀಕರಿಸುವುದು ಸೇರಿದಂತ 7 ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ಬಾಂಗ್ಲಾದೇಶ ಸಹಿ ಹಾಕಿದೆ.  

ಇದೇ ವೇಳೆ ಮೋದಿ ಹಾಗೂ ಶೇಕ್ ಹಸೀನಾ(sheikh hasina ) ಜಂಟಿಯಾಗಿ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಯುನಿಟ್ 1 ಅನಾವರಣಗೊಳಿಸಿದ್ದಾರೆ. ಇಷ್ಟೇ ಅಲ್ಲ ಜಂಟಿಯಾಗಿ 5.13 ಕಿ.ಮೀ ರುಪ್ಶಾ ರೈಲು ಸೇತುವೆ ಉದ್ಘಾಟಿಸಿದ್ದಾರೆ. ಈ ರೈಲು 64.7 ಕಿಮೀ ಖುಲ್ನಾ-ಮೊಂಗ್ಲಾ ಪೋರ್ಟ್ ಬ್ರಾಡ್ ಗೇಜ್ ರೈಲು ಯೋಜನೆಯ ಪ್ರಮುಖ ಭಾಗವಾಗಿದೆ. ಇನ್ನು ಪ್ರಮುಖವಾಗಿ ಕುಶಿಯಾರ ನದಿ ನೀರಿನ ಮಧ್ಯಂತರ ಹಂಚಿಕೆ ಕುರಿತು ತಿಳುವಳಿಕೆ ಪತ್ರಕ್ಕೆ ಭಾರತ ಹಾಗೂ ಬಾಂಗ್ಲಾದೇಶ ಸಹಿ ಹಾಕಿದೆ. ಭಾರತ ಹಾಗೂ ಬಾಂಗ್ಲಾ(India and Bangladesh Ties) ಗಡಿಯಲ್ಲಿ 54 ಪ್ರಮುಖ ನದಿಗಳು ಹರಿಯುತ್ತಿದೆ. ಉಭಯ ದೇಶಗಳ ಬಾಂಧವ್ಯದಿಂದ ಎರಡೂ ದೇಶದ ಜನರ ಜೀವನೋಪಾಯಕ್ಕೆ ನದಿಗಳು ಪ್ರಮುಖವಾಗಿದೆ ಎಂದು ಜಂಟಿ ಹೇಳಿಕೆ ನೀಡಿತು. ಮೈತ್ರಿ ಪವರ್ ಪ್ಲಾಂಟ್(maitree thermal power project) ಯೋಜನೆಯಿಂದ ಬಾಂಗ್ಲಾದೇಶ ಜನರು ಕಡಿಮೆ ಬೆಲೆಯಲ್ಲಿ ವಿದ್ಯುತ್( ಉಪಯೋಗಿಸಲು ಸಾಧ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ. 

Operation Ganga: ವಿದೇಶಿಗರಿಗೂ ನೆರವು, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬಾಂಗ್ಲಾ ಪ್ರಧಾನಿ

ಕಳೆದ ವರ್ಷ ಬಾಂಗ್ಲಾದೇಶ ಸ್ವಾತಂತ್ರ್ಯದ 50ನೇ ವರ್ಷಾಚರಣೆಯನ್ನು ಆಚರಿಸಿದ್ದೆವು. ಈ ವೇಳೆ ಭಾರತದ ಪ್ರತಿನಿಧಿಗಳು ಬಾಂಗ್ಲಾದೇಶಕ್ಕೆ ತೆರಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆವು. ನಾವು ಅಜಾದಿಕಾ ಅಮೃತ ಮಹೋತ್ಸವ ಆಚರಣೆ ಮಾಡಿದ್ದೇವೆ. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಬಾಂಧವ್ಯ ಅತ್ಯುತ್ತಮ ಹಾಗೂ ಉಚ್ಚಸ್ಥಿತಿಯಲ್ಲಿರಲಿದೆ ಎಂದು ಮೋದಿ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಅತೀ ದೊಡ್ಡ ವ್ಯಾಪಾರ ವಹಿವಾಟಿನ ರಾಷ್ಟ್ರಗಳಾಗಲಿದೆ ಎಂದು ಮೋದಿ(PM Narendra Modi) ಹೇಳಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಪರ್ಕ, ಗಡಿಯಲ್ಲಿನ ಸಹಕಾರದಿಂದ ದ್ವಿಪಕ್ಷೀಯ ಸಂಬಂಧ ಉತ್ತಮಗಳೊಳ್ಳಲಿದೆ. ಇದರಿಂದ ಏಷ್ಯಾದ ಅತೀ ದೊಡ್ಡ ಮಾರುಕಟ್ಟೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವ್ಯಾಪಾರ ವಹಿವಾಟಿಗೂ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ: ಮೋದಿಗೆ ಥ್ಯಾಂಕ್ಸ್ ಹೇಳಿದ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ

ಭಾರತ ಬಾಂಗ್ಲಾದ ಸ್ನೇಹಿತ ಎಂದ ಶೇಕ್ ಹಸಿನಾ ಜಂಟಿಯಾಗಿ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದರು. ಇದೇ ವೇಳೆ ಬಾಂಗ್ಲಾದೇಶ ವಿಮೋಚನ ಯುದ್ಧದ ಸಮಯದಲ್ಲಿ ಭಾರತದ ಕೊಡುಗೆಯನ್ನು ಸ್ಮರಿಸಿದ್ದಾರೆ. ಸ್ನೇಹದಿಂದ ಎಲ್ಲಾ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಶೇಕ್ ಹಸೀನಾ ಹೇಳಿದ್ದಾರೆ. 

ಬಾಂಗ್ಲಾ ಪ್ರಧಾನಿ ಭೇಟಿಯಾದ ಗೌತಮ್ ಅದಾನಿ
ಭಾರತದ ಉದ್ಯಮಿ ಗೌತಮ್ ಅದಾನಿ, ಭಾರತಕ್ಕೆ ಆಗಮಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಅವರನ್ನು ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿ ಭೇಟಿಯಾದ ಅದಾನಿ, ಗೊಡ್ಡಾ ಪವರ್ ಪ್ರಾಜೆಕ್ಟ್ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ಈ ವರ್ಷದ ಅಂತ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿ ವ್ಯವಹಾರಗಳಿವೆ. ಪವರ್ ಪ್ರಾಜೆಕ್ಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ . 

Follow Us:
Download App:
  • android
  • ios