ಚೆನ್ನಮ್ಮ, ರಾಯಣ್ಣನ ಬೆಳಗಾವಿಗೆ ಆಗಮಿಸುವುದು ಪುಣ್ಯಕ್ಷೇತ್ರಕ್ಕೆ ತರಳಿದಷ್ಟೇ ಪವಿತ್ರ, ಪ್ರಧಾನಿ ಮೋದಿ

ಬೆಳಗಾವಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ ಹಾಗೂ ಕೆಲ ಯೋಜನೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಜನತೆಯನ್ನುದ್ದೇಶಿ ಮಾತನಾಡಿದ್ದಾರೆ. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ.

Pm modi address people after Launch Several Development Initiatives in Belagavi Karnataka ckm

ಬೆಳಗಾವಿ(ಫೆ.27): ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಸ್ಪೂರ್ತಿಯಾಗಿರುವ ಬಸವಣ್ಣನವರಿಗೆ ಪ್ರಣಾಮ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಬೆಳಗಾವಿಯ ಜನತೆ ಪ್ರೀತಿ ಮತ್ತು ಆಶೀರ್ವಾದ ಅಮೂಲ್ಯ ಎಂದರು. ನಿಮ್ಮ ಪ್ರೀತಿ, ಆಶಿರ್ವಾದವೇ ನಮಗೆ ಕೆಲಸ ಮಾಡಲು ಶಕ್ತಿ ಹಾಗೂ ಪ್ರೇರಣೆ ಎಂದು ಮೋದಿ ಹೇಳಿದರು. ಬೆಳಗಾವಿ ಭೂಮಿಗೆ ಆಗಮಿಸಿವುದು ಯಾವುದೇ ಪುಣ್ಯಕ್ಷೇತ್ರಕ್ಕೆ ತೆರವುದಕ್ಕಿಂತ ಕಡಿಮೆ ಇಲ್ಲ. ಇದು ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಡಿದು. ಗುಲಾಮಿ ಸಂಸ್ಕೃತಿ ವಿರುದ್ಧ ಹೋರಾಟದ ನೆನಪು ಕಟ್ಟಿಕೊಡುತ್ತದೆ. ಇಂದು ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಚರ್ಚೆ ಆಗುತ್ತಲೇ ಇದೆ. ಬೆಳಗಾವಿಯಲ್ಲಿ 100 ವರ್ಷಗಳ ಹಿಂದೆ ಸ್ಟಾರ್ಟ್ ಆಪ್ ಆರಂಭಗೊಂಡಿತ್ತು. ಬಾಬುರಾವ್ ಕುಸಾಲ್‌ಕರ್ ಬೆಳಗಾವಿಯಲ್ಲಿ ಸಣ್ಣ ಉದ್ಯಮ ಆರಂಭಿಸಿದ್ದರು.ಬೆಳಗಾವಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಮತ್ತಷ್ಟು ಅಬಿವೃದ್ಧಿಯೋಜನೆ ಮಾಡುತ್ತಿದೆ ಎಂದು ಮೋದಿ ಹೇಳಿದರು.

190 ಕೋಟಿ ರೂಪಾಯಿ ವೆಚ್ಚದ ರೈಲು ನಿಲ್ದಾಣ ಸೇರಿದಂತೆ ಹಲವು ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಾಕಾರಿಗೆ ಬೆಳಗಾವಿಯಲ್ಲಿ ಚಾಲನೆ ನೀಡಿದ ಪ್ರಧಾನಿ ಮೋದಿ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಗ ನಾಯಕರನ್ನ ಕಾಂಗ್ರೆಸ್ ಹಿಂದಿನಿಂದಲೂ ಅವಮಾನಿಸುತ್ತಿದೆ. ನಿಜಲಿಂಗಪ್ಪ ಅವರಿಂದ ಹಿಡಿದು, ಇದೀಗ ಮಲ್ಲಿಕಾರ್ಜುನ ಖರ್ಗೆ ವರಗೆ ನಾಯಕರನ್ನು ಅವಮಾನಿಸುವುದು ಕಾಂಗ್ರೆಸ್ ಸಂಪ್ರದಾಯಾಗಿದೆ ಎಂದು ಮೋದಿ ಹೇಳಿದ್ದಾರೆ. ಇಂದು ಲೋಕಾರ್ಪಣೆ ಹಾಗೂ ಹಲವು ಯೋಜನೆಗಳಿಗೆ ಚಾಲನೆಯಿಂದ ಬೆಳಗಾವಿಯಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಸಂಪರ್ಕ ಸೇತುವೆ, ಪ್ರತಿ ಮನೆಗೆ ನೀರು, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಯೋಜನೆಗಳು ಬೆಳಗಾವಿಯಲ್ಲಿ ವೇಗವಾಗಿ ನಡೆಯುತ್ತಿದೆ. ಹಿಂದುಸ್ಥಾನದ ಪ್ರತಿ ರೈತರನ್ನು ಬೆಳಗಾವಿ ಹಾಗೂ ಕರ್ನಾಟಕದ ಜೊತೆ ಸಂಪರ್ಕಿಸುತ್ತದೆ. 16,000 ಕೋಟಿ ರೂಪಾಯಿ ಇಂದು ಒಂದು ಕ್ಲಿಕ್ ಮೂಲಕ ರೈತರ ಖಾತೆಗೆ ಜಮಾಗೊಂಡಿದೆ. ಈ ಹಿಂದೆ ಕಾಂಗ್ರೆಸ್ ಪ್ರಧಾನಿ ಹೇಳಿದ್ದರು, 1 ರೂಪಾಯಿ ಕೊಟ್ಟರೆ ಅದರಲ್ಲಿ ಫಲಾನುಭವಿಗೆ ತಲುಪುದು ಪೈಸೆ ಮಾತ್ರ. ಇದೀಗ ಯೋಚನೆ ಮಾಡಿ ಇಷ್ಟು ಮೊತ್ತ ಕಳುಹಿಸಿದರೆ, ಸಾವಿರಾರು ಕೋಟಿ ರೂಪಾಯಿ ಮಾಯವಾಗುುತ್ತಿತ್ತು. ಆದರೆ ಇದು ಮೋದಿ ಸರ್ಕಾರ ಎಂದರು.

ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ

ವಂಚಿತರ, ಬಡವರು, ದೀನದಲಿತರಿಗೆ ಸರ್ಕಾರ ಯೋಜನೆ ಜಾರಿಗೆ ತಂದಿದೆ. ನಮ್ಮ ದೇಶದಲ್ಲಿ ಸಣ್ಣ ಸಣ್ಣ ರೈತರ ಕುರಿತು ನಿರ್ಲಕ್ಷ್ಯ ವಹಿಸಲಾಗಿತ್ತು. ಅವರಿಗೆ ಯಾವುದೇ ಯೋಜನೆ ಇರಲಿಲ್ಲ. ಆದರೆ ಬಿಜೆಪಿ ಸರ್ಕಾರ ಸಣ್ಣ ಸಣ್ಣ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೆರವು ನೀಡುತ್ತಿದೆ. 50,000 ಕೋಟಿ ರೂಪಾಯಿ ಇದುವರೆಗೆ ಮಹಿಳಾ ರೈತರ ಖಾತೆಗೆ ಜಮೆ ಆಗಿದೆ. ಇದರಿಂದ ಸಣ್ಣ ಸಣ್ಣ ರೈತರು ಯಾರೊಂದಿಗೆ ಕೈಚಾಚುವ ಅಗತ್ಯವಿಲ್ಲ ಎಂದರು.

ಬಿಜೆಪಿ ಸರ್ಕಾರ ಕೃಷಿಯನ್ನು ಆಧುನಿಕತೆಯೊಂದಿಗೆ ಸಂಪರ್ಕಿಸುತ್ತಿದೆ. ಭವಿಷ್ಯದ ದೃಷ್ಟಿಯಿಂದ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದೆ. 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಕೃಷಿ ಬಜೆಟ್ 25 ಸಾವಿರ ಕೋಟಿ ರೂಪಾಯಿ ಇತ್ತು.  ಈ ಬಾರಿಯ ಬಜೆಟ್‌ನಲ್ಲಿ ನಾವು ಕೃಷಿಗಾಗಿ 1.25 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ನಾವು ತಂತ್ರಜ್ಞಾನಕ್ಕೆ ಒತ್ತು ನೀಡಿದ್ದೇವೆ. ಇದರ ಲಾಭ ರೈತರಿಗೆ ಆಗುತ್ತಿದೆ. ಜನಧನ ಖಾತೆ, ಆಧಾರ್ ಸೇರಿದಂತೆ ಹಲವು ಸೌಲಭ್ಯಗಳನ್ನು ನಾಗರೀಕರಿಗೆ ನೀಡುವ ಮೂಲಕ ರೈತರ ಹಾದಿ ಸುಗಮಗೊಳಿಸಿದ್ದೇವೆ ಎಂದರು.

 ದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಾಗಿದೆ. ಪ್ರಮಾಣಿಕ ಪ್ರಯತ್ನದೊಂದಿಗೆ ರೈತರ ಬದುಕು ಹಸನಾಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರಾಚೀನ ಪರಂಪರೆಯನ್ನು ಮತ್ತೆ ಉತ್ತೇಜನಗೊಳಿಸುವ ಕಾರ್ಯಕ್ಕೆ ನಮ್ಮ ಸರ್ಕಾರ ನೆರವು ನೀಡುತ್ತಿದೆ. ಸಿರಿ ಧಾನ್ಯವನ್ನು ಶ್ರೀ ಅನ್ನ ಅನ್ನೋ ಹೆಸರಿಟ್ಟು ವಿಶ್ವ ಮಾರುಕಟ್ಟೆ ಒದಗಿಸುವ ಪ್ರಯತ್ನ ಮಾಡಲಾಗಿದೆ. ರೈತ ಬಂಧು ಬಿಎಸ್ ಯಡಿಯೂರಪ್ಪ ರೈತರಿಗಾಗಿ ಹಲವು ಆಂದೋಲನ ನಡೆಸಿದ್ದಾರೆ. ಇದೀಗ ಶ್ರೀ ಅನ್ನವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯಬೇಕಿದೆ ಎಂದರು.

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಮಲೆನಾಡಿನ ಅಭಿವೃದ್ಧಿ ಸಂಕೇತ: ಯಡಿಯೂರಪ್ಪ ಭಾವುಕ ಭಾಷಣ

ಬೆಳಗಾವಿಯ ರೈಲು ನಿಲ್ದಾಣ ನೋಡಿದರೆ ಹಲವರಿಗೆ ಆಶ್ಚರ್ಯ, ಮತ್ತೆ ಹಲವರಿಗೆ ಹೆಮ್ಮೆ ಎನಿಸುತ್ತದೆ. ಕರ್ನಾಟಕದ ಬಹುತೇಕ ರೈಲು ನಿಲ್ದಾಣಗಳನ್ನು ಇದೀ ರೀತಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇಂತಹ ನಿಲ್ದಾಣಗಳನ್ನು ನಾವು ವಿದೇಶದಲ್ಲಿ ನೋಡುತ್ತಿದ್ದೇವು. ಇದೀಗ ಭಾರತದ ಪ್ರತಿ ನಿಲ್ದಾಣಗಳು ಈ ರೀತಿಯ ರೂಪ ಪಡೆದುಕೊಳ್ಳುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ 2 ಲಕ್ಷಕ್ಕಿಂತ ಕಡಿಮೆ ಮನೆಯಲ್ಲಿ ಕುಡಿಯುವ ನೀರು ಬರುತ್ತಿತ್ತು. ಇದೀಗ 4.5 ಲಕ್ಷ ಮನೆಗಳಲ್ಲಿ ಜಲ ಜೀವನ್ ಮಿಷನ್ ನೀರು ತಲುಪಿದೆ. ಸಮಾಜದ ಪ್ರತಿ ವರ್ಗದ ಜನರನ್ನು ಸಶಕ್ತ ಮಾಡಲು ಬದ್ಧವಾಗಿದೆ. ಆದರೆ ಕಾಂಗ್ರೆಸ್ ಕರ್ನಾಟಕದ ನಾಯಕರನ್ನು ಅವಮಾನಿಸುವ ಕೆಲಸ ಮಾಡಿದೆ. ನಿಜಲಿಂಗಪ್ಪ ಸೇರಿದಂತೆ ಹಲವರನ್ನು ಅವಮಾನಿಸಿದೆ. ಮಲ್ಲಿಕಾರ್ಜುನ ಖರ್ಗೆಯನ್ನು ಗೌರವಿಸುತ್ತದೆ. ಆದರೆ ಕಾಂಗ್ರೆಸ್ ಖರ್ಗೆಯನ್ನು ಅವಮಾನಿಸುವ ಕೆಲಸ ಮಾಡುತ್ತದೆ. ಇತ್ತೀಚೆಗೆ ಕಾಂಗ್ರೆಸ್ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಅವಮಾನಿಸಿದೆ. ಖರ್ಗೆ ಕೇವಲ ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಿದ್ದಾರೆ ಎಂದು ಮೋದಿ ಕಾಂಗ್ರೆಸ್ ಗಾಂಧಿ ಕುಟಂಬ ಕೈಯಲ್ಲಿರುವ ಪಕ್ಷ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರು ತುಂಬಾ ನಿರಾಸೆಯಾಗಿದ್ದಾರೆ. ಎಲ್ಲಿ ತನಕ ಮೋದಿ ಇರುತ್ತಾರೆ, ಇಲ್ಲಿ ತನಕ ಕಾಂಗ್ರೆಸ್‌ಗೆ ಏನೂ ಸಿಗುವುದಿಲ್ಲ ಎಂದು ಗೊತ್ತಾಗಿದೆ. ಇಡೀ ದೇಶ ಹೇಳುತ್ತಿದೆ. ಮೋದಿ ನಿಮ್ಮ ಕಮಲ ಅರಳಿದೆ ಎಂದು ಹೇಳುತ್ತಿದೆ. ಡಬಲ್ ಎಂಜಿನ್ ಸರ್ಕಾರ ಇದ್ದರೆ, ಅಭಿವೃದ್ಧಿ ಪಕ್ಕ. ಇಂದು ನನ್ನ ಕರ್ನಾಟಕ ಯಾತ್ರೆ ಹಲವು ವಿಶೇಷತೆ ಹೊಂದಿದೆ. ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದೇನೆ. ಇದೇ ದಿನ ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳುವ ಅವಕಾಶವೂ ಒದಗಿಬಂತು. ಇಲ್ಲಿಗೆ ಆಗಮಿಸಿದಾಗ ನೀವು ಕಮಾಲ್ ಮಾಡಿದ್ದೀರಿ. ನಿಮ್ಮ ಪ್ರೀತಿ ನೋಡಿ ಹೃದಯ ತುಂಬಿ ಬಂತು ಎಂದು ಮೋದಿ ಹೇಳಿದ್ದಾರೆ.ನೀವು ನಮಗೆ ನೀಡುವ ಪ್ರೀತಿಯನ್ನು ಸಂಪೂರ್ಣ ಅಭಿವೃದ್ಧಿ ಭರವಸೆಯೊಂದಿಗೆ ಹಿಂತಿರುಗಿ ನೀಡುತ್ತೇನೆ ಎಂದರು. 
 

Latest Videos
Follow Us:
Download App:
  • android
  • ios