3ನೇ ಬಾರಿ ಸಂಸದೀಯ ನಾಯಕನಾಗಿ ಆಯ್ಕೆಯಾದ ಬಳಿಕ ಮೋದಿ ಮೊದಲ ಭಾಷಣ!
ಸಂಸದೀಯ ನಾಯಕನಾಗಿ ಆಯ್ಕೆಯಾದ ಬಳಿಕ ಮೋದಿ ಮೊದಲ ಭಾಷಣ ಮಾಡಿದ್ದಾರೆ. ಎನ್‌ಡಿಎ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಮೋದಿ ಕೆಲ ಮಹತ್ವದ ಸೂಚನೆ ನೀಡಿದ್ದಾರೆ.
ನವದೆಹಲಿ(ಜೂ.07) ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಎನ್‌ಡಿಎ ಮೈತ್ರಿ ಸರ್ಕಾರ ರಚನೆಗೆ ಎಲ್ಲಾ ತಯಾರಿ ನಡೆದಿದೆ. ಇಂದು ಎನ್‌ಡಿಎ ಸಭೆಯಲ್ಲಿ ನರೇಂದ್ರ ಮೋದಿಯನ್ನು ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದೆ. ಬಳಿಕ ಮಾತನಾಡಿದ ಮೋದಿ, ವಿಶ್ವಾಸದೊಂದಿಗೆ ದೇಶವನ್ನು ಮುನ್ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಮ್ಮ ಎನ್‌ಡಿಎ ಒಕ್ಕೂಟದ ಎಲ್ಲಾ ಕಾರ್ಯಕರ್ತರು ಬೇಸಿಗೆಯ ಉರಿ ಬಿಸಿನಲ್ಲಿ ಅವಿರತ ಪರಿಶ್ರಮವಹಿಸಿದ್ದಾರೆ. ಈ ಸೆಂಟ್ರಲ್ ಹಾಲ್‌ನಿಂದ ಆ ಎಲ್ಲಾ ಕಾರ್ಯಕರ್ತರಿಗೆ ಪ್ರಣಾಮ ಸಲ್ಲಿಸುತ್ತೇನೆ. ಎಲ್ಲಾ ಎನ್‌ಡಿಎ ಪಕ್ಷಗಳು ಸಂಸದೀಯ ನಾಯನಕನಾಗಿ ಆಯ್ಕೆ ಮಾಡಿದ ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ. 2019ರಲ್ಲಿ ಇದೇ ಸದನದಲ್ಲಿ ಮಾತನಾಡಿದ ವೇಳೆ ನಾನು ಒಂದು ಮಾತು ಹೇಳಿದ್ದೆ, ವಿಶ್ವಾಸದ ಭರವಸೆ ನೀಡಿದ್ದೆ. ಇದೀಗ ಮತ್ತೆ ಅದೇ ವಿಶ್ವಾಸವನ್ನು ಪುನರುಚ್ಚಿರಿಸುತ್ತಿದ್ದೇನೆ. ಇದೀಗ ವಿಶ್ವಾಸ ಇಷ್ಟು ಗಟ್ಟಿಯಾಗಿರುವ ಕಾರಣ ಇದೀಗ ಒಗ್ಗಟ್ಟಿನಿಂದ ನಾವು ಮುನ್ನಡೆಯುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಹುಲ್‌ಗೆ ವಿಪಕ್ಷ ನಾಯಕ ಹೊಣೆ?
ಆದಿವಾಸಿ ಹೆಚ್ಚಿರುವ 10 ರಾಜ್ಯಗಳ ಪೈಕಿ 7 ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರ ಸೇವೆ ನೀಡುತ್ತಿದೆ. ಗೋವಾ, ಈಶಾನ್ಯ ರಾಜ್ಯಗಳಾಗಿರಬಹುದು. ಈ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಸೇರಿದಂತೆ ಇತರ ಸಮುದಾಯಗಳು ಹೆಚ್ಚಿದೆ. ಈ ರಾಜ್ಯಗಳಲ್ಲೂ ಎನ್‌ಡಿಎ ಸರ್ಕಾರ ನಡೆಸುತ್ತಿದೆ. ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ ಇತಿಹಾಸದಲ್ಲಿ ಎನ್‌ಡಿಎಗೆ ಸಿಕ್ಕ ಯಶಸ್ಸು ಇತರ ಯಾವುದೇ ಮೈತ್ರಿ ಕೂಟಕ್ಕೆ ಸಿಕ್ಕಿಲ್ಲ ಎಂದು ಮೋದಿ ಹೇಳಿದ್ದಾರೆ.
ಸರ್ಕಾರ ನಡೆಸಲು ಬಹುಮತ ಅತ್ಯವಶ್ಯಕ. ಆದರೆ ದೇಶ ಮುನ್ನಡೆಸಲು ಸರ್ವ ಮತ ಅತೀ ಅವಶ್ಯಕ. ದೇಶದ ಪ್ರತಿಯೊಬ್ಬರಿಗೂ ನಾನು ಭರವಸೆ ನೀಡುತ್ತಿದ್ದೇನೆ. ನೀವು ನಮಗೆ ಬಹುಮತ ನೀಡಿ ಸರ್ಕಾರ ನಡೆಸಲು ಬಹುಮತ ನೀಡಿದ್ದೀರಿ. ಇದೀಗ ನಿಮ್ಮ ಅಭಿವೃದ್ಧಿ , ಸುರಕ್ಷತೆ ವಿಚಾರದಲ್ಲಿ ಹಿಂದಿನಂತೆ ಯಾವುದೇ ರಾಜಿ ಇಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವ ಮುನ್ನವೇ 'ಸ್ಟಾಕ್ ಅವ್ಯವಹಾರ' ಆರೋಪ ಮಾಡಿದ ರಾಹುಲ್ ಗಾಂಧಿ!
ಕಳೆದ ಮೂರು ದಶಕಗಳ ಎನ್‌ಡಿಎ ಮೈತ್ರಿ ಪಯಣದಲ್ಲಿ ನಾನೂ ಭಾಗವಾಗಿದ್ದೇನೆ. ಒಬ್ಬ ಕಾರ್ಯಕರ್ತನಾಗಿ ಈ ಮೈತ್ರಿ ಒಕ್ಕೂಟದಲ್ಲಿ ಕೆಲಸ ಮಾಡಿದ್ದೇನೆ. ಇದೀಗ ನಿಮ್ಮಲ್ಲೆರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎನ್‌ಡಿಎ ಮೈತ್ರಿಯ ಪಕ್ಷಗಳು ದೇಶ ಮೊದಲು ಅನ್ನೋ ಗುರಿಯೊಂದಿಗೆ ಮುನ್ನಡೆಯುವ ಪಕ್ಷಗಳು ಎಂದು ಮೋದಿ ಹೇಳಿದ್ದಾರೆ.