Asianet Suvarna News

ಯೋಗ ನೇಪಾಳದ ಕೊಡುಗೆ; ಶ್ರೀರಾಮ ಜನ್ಮಸ್ಥಳ ಬಳಿಕ ಪ್ರಧಾನಿ ಒಲಿ ಮತ್ತೊಂದು ವಿವಾದ!

  • ಅಂತಾರಾಷ್ಟ್ರೀಯ ಯೋಗದಿನಾಚರಣೆಯಂದು ಮತ್ತೊಂದು ವಿವಾದ
  • ವಿಶ್ವಕ್ಕೆ ನೇಪಾಳ ನೀಡಿದ ಕೊಡುಗೆ ಯೋಗ ಎಂದ ಪ್ರಧಾನಿ
  • ಶ್ರೀರಾಮನ ಜನ್ಮಸ್ಥಳ ವಿವಾದ ಸೃಷ್ಟಿಸಿದ್ದ ಬಳಿಕ ಇದೀಗ ಯೋಗ ವಿವಾದ
PM KP Oli sharma sparked another controversy claiming that yoga originated Nepal not in India ckm
Author
Bengaluru, First Published Jun 21, 2021, 7:40 PM IST
  • Facebook
  • Twitter
  • Whatsapp

ಕಾಠ್ಮಂಡು(ಜೂ.21): ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗಿದೆ. 7ನೇ ಯೋಗದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೇಶವನ್ನುದ್ದೇಶಿ ಮಾತನಾಡಿದ್ದರು. ಭಾರತದ ಯೋಗಾಭ್ಯಾಸಕ್ಕೆ ವಿಶ್ವವೇ ಮನ್ನಣೆ ನೀಡಿದೆ. ಆದರೆ ಯೋಗ ದಿನಾಚರಣೆ ದಿನವೇ ನೇಪಾಳ ಪ್ರಧಾನಿ ಕೆಪಿ ಒಲಿ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಶ್ವಕ್ಕೆ ಯೋಗ ಕೊಡುಗೆ ನೀಡಿದ್ದು ನೇಪಾಳ ಎಂದು ಒಲಿ ಶರ್ಮಾ ಹೇಳಿದ್ದಾರೆ.

ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!

ನೇಪಾಳ ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಭಾರತವೇ ಇರಲಿಲ್ಲ. ರಾಜ್ಯಗಳು, ಮಹಾರಾಜಗಳುಗಳಿದ್ದ ರಾಜ್ಯವಿತ್ತೇ ಹೊರತು, ಭಾರತ ಅಸ್ಥಿತ್ವದಲ್ಲೇ ಇರಲಿಲ್ಲ.  ಅನಾದಿ ಕಾಲದಿಂದಲೂ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದ ಮೂಲ ನೇಪಾಳ. ಆದರೆ ನಾವು ಯೋಗವನ್ನು ನಮ್ಮ ಕೊಡುಗೆ ಎಂದು ಹೇಳಲಿಲ್ಲ. ಇದೇ ವೇಳೆ ಭಾರತ ಯೋಗ ಗುರು ಎಂದು ಹೇಳಿ ಎಲ್ಲಾ ಕ್ರೆಡಿಟ್ ಪಡೆದುಕೊಂಡಿದೆ ಎಂದು ಒಲಿ ಶರ್ಮಾ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಎಲ್ಲಾ ಕ್ರೆಡಿಟ್ ಪಡೆದುಕೊಂಡರು. ನೇಪಾಳ ಯೋಗದ ಮೂಲವೇ ಹೊರತು ಭಾರತವಲ್ಲ ಎಂದು ಒಲಿ ಶರ್ಮಾ ಹೇಳಿದ್ದಾರೆ. ಇದೀಗ ಒಲಿ ಶರ್ಮಾ ಹೇಳಿಕೆ  ಭಾರತೀಯರ ಮಾತ್ರವಲ್ಲ ನೇಪಾಳಿಗರ ಆಕ್ರೋಶಕ್ಕೂ ಕಾರಣವಾಗಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ

ಅಯೋಧ್ಯೆ ವಿವಾದ ಬಗೆ ಹರಿದು ಮಂದಿರ ಕಾರ್ಯ ಆರಂಭಗೊಂಡಂತೆ ಶ್ರೀರಾಮನ ಜನ್ಮಸ್ಥಾನ ಆಯೋಧ್ಯೆ ಅಲ್ಲ. ನೇಪಾಳದಲ್ಲಿ ಎಂದು ಕೆಪಿ ಒಲಿ ಶರ್ಮಾ ಹೇಳಿದ್ದರು. ನೇಪಾಳದ ಮದಿ ವಲಯ ಅಥವಾ ಆಯೋಧಪುರಿಯಲ್ಲಿ ಶ್ರೀರಾಮನ ಜನ್ಮಸ್ಥಳ. ಆದರೆ ಭಾರತ ತನ್ನ ರಾಜಕೀಯ ಲಾಭಕ್ಕಾಗಿ ಆಯೋಧ್ಯೆ ಎಂದು ಹೇಳಿಕೊಂಡು ಪ್ರಚಾರ ಮಾಡಿತು ಎಂದು ಕೆಪಿ ಒಲಿ ಶರ್ಮಾ ಹೇಳಿದ್ದರು. 

ಶ್ರೀರಾಮನ ಜನ್ಮಸ್ಥಳ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದ ತಣ್ಣಗಾದ ಬೆನ್ನಲ್ಲೇ ಇದೀಗ ಯೋಗದ ಮೂಲ ನೇಪಾಳ ಎಂದು ಹೇಳೋ ಮೂಲಕ ಮತ್ತೆ ಭಾರತೀಯರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

Follow Us:
Download App:
  • android
  • ios