ಕಾಠ್ಮಂಡು(ಆ.10): ಶ್ರೀರಾಮ ಹುಟ್ಟಿದ್ದು ಭಾರತದಲ್ಲಲ್ಲ. ನೇಪಾಳದ ಅಯೋಧ್ಯೆಯಲ್ಲಿ ಎಂದು ಇತ್ತೀಚೆಗಷ್ಟೇ ಕ್ಯಾತೆ ತೆಗೆದಿದ್ದ ಕಮ್ಯುನಿಸ್ಟ್‌ ನಾಯಕ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಇದೀಗ ನೇಪಾಳದಲ್ಲೇ ರಾಮಮಂದಿರ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಅಲ್ಲದೆ ರಾಮಮಂದಿರ ನಿರ್ಮಾಣಕ್ಕೆ ಶೀಘ್ರ ಪೂಜೆ ಆಯೋಜನೆಗೂ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಹೋದರಿಯರ ಹಠಕ್ಕೆ ಮಣಿದ ಭಾರತ, ನೇಪಾಳ: ಕೆಲ ಸಮಯ ಗಡಿ ಓಪನ್!

ರಾಮ ಹುಟ್ಟಿದ್ದು ನೇಪಾಳದಲ್ಲಿ ಎಂದು ಕೆಲ ದಿನಗಳ ಹಿಂದಷ್ಟೇ ಓಲಿ ನೀಡಿದ್ದ ಹೇಳಿಕೆಗೆ ಅವರದ್ದೇ ದೇಶದ ಆಡಳಿತರೂಢ ಮತ್ತು ವಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಚೀನಾ ಚಿತಾವಣೆಯಂತೆ ನಡೆದುಕೊಳ್ಳುತ್ತಿರುವ ಓಲಿ, ಇದೀಗ ಮತ್ತೊಂದು ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದಾರೆ.

ಓಲಿ ಅವರ ಪ್ರಕಾರ ದಕ್ಷಿಣ ನೇಪಾಳದ ತೋರಿ ಎಂಬ ನಗರವೇ ನಿಜವಾದ ಅಯೋಧ್ಯೆ. ಅಲ್ಲಿಯೇ ರಾಮ ಹುಟ್ಟಿದ್ದು. ಹೀಗಾಗಿ ಅಲ್ಲಿಯೇ ರಾಮಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಥೋರಿ ಪ್ರದೇಶ ಇರುವ ಮಡಿ ನಗರದ ಹೆಸರನ್ನು ಅಯೋಧ್ಯೆಪುರಿ ಎಂದು ಬದಲಿಸಲೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಮುಂಬರುವ ದಸರಾದಲ್ಲಿ ಬರುವ ನವಮಿಯಂದು ಅದ್ಧೂರಿಯಾಗಿ ಮಂದಿರಕ್ಕೆ ಭೂಮಿಪೂಜೆ ನಡೆಸಲಾಗುವುದು.ಭೂಮಿಪೂಜೆ ಬಳಿಕ ರಾಮ ಜನ್ಮಭೂಮಿ ಅಯೋಧ್ಯ ಧಾಮ ಯೋಜನೆ ಹಂತಹಂತವಾಗಿ ಜಾರಿಯಾಗಲಿದೆ. ಈ ದೇಗುಲದಲ್ಲಿ ರಾಮ, ಸೀತೆ, ಲಕ್ಷ$್ಣನ, ಹನುಮಂತನ ವಿಗ್ರಹ ಇರಿಸಲಾಗುವುದು ಎಂದು ಓಲಿ ತಿಳಿಸಿದ್ದಾರೆ ಎಂದು ನ್ಯಾಷನಲ್‌ ನ್ಯೂಸ ಕಮಿಟಿ ಸುದ್ದಿಸಂಸ್ಥೆ ವರದಿ ಮಾಡಿದೆ.