PM Kisan Samman Nidhi: ಮುಂದಿನ ವಾರ ಈ ದಿನದಂದು ಬರಲಿದೆ 14ನೇ ಕಂತು

ಕೇಂದ್ರ ಕೃಷಿ ಸಚಿವಾಯಲದಿಂದ ನೇರ ನಗದು ವರ್ಗಾವಣೆ ಮೂಲಕ ದೇಶದ ರೈತರ ಖಾತೆಗೆ ಸೇರಲಿರುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 14ನೇ ಕಂತು ಮಂದಿನ ವಾರ ಬಿಡುಗಡೆ ಮಾಡುವುದಾಗಿ ಯೋಜನೆಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

PM Kisan Samman Nidhi 14th instalment to be released on next week on this date san

ಬೆಂಗಳೂರು (ಜು.20): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ಯೋಜನೆ) 14 ನೇ ಕಂತನ್ನು ಕೇಂದ್ರ ಸರ್ಕಾರವು ಮುಂದಿನ ವಾರ ಬಿಡುಗಡೆ ಮಾಡಲು ಕೇಂದ್ರ ಕೃಷಿ ಸಚಿವಾಲಯ ನಿರ್ಧರಿಸಿದೆ. ಪಿಎಂ ಕಿಸಾನ್ ಫಲಾನುಭವಿಗಳಿಗೆ ಸರ್ಕಾರ ಸುಮಾರು 8.5 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ಕಂತಿಗೆ ರೂ 2000 ಮತ್ತು ಒಂದು ವರ್ಷದಲ್ಲಿ ಒಟ್ಟು ರೂ 6000 ಪಡೆಯುತ್ತಾರೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಆಧಾರ್ ಮತ್ತು ಎನ್‌ಪಿಸಿಐ ಎರಡಕ್ಕೂ ಜೋಡಿಸಲಾದ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ. ಹಣ ವರ್ಗಾವಣೆ ಮಾಡುವ ಅಧಿಕೃತ ದಿನಾಂಕವನ್ನು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗಿಬ್ಬರ ಹಾಗೂ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ 2019ರಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.

ಈ ದಿನ ಬಿಡುಗಡೆಯಾಗಲಿದೆ 14ನೇ ಕಂತು: ಪಿಎಂ ಕಿಸಾನ್ ಯೋಜನೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಕಾರ, ಸರ್ಕಾರವು 14 ನೇ ಕಂತನ್ನು 2023ರ ಜುಲೈ 27ರಂದು ಬಿಡುಗಡೆ ಮಾಡಲಿದೆ. ಇದೇ ವೇಳೆ ರಾಜಸ್ಥಾನದ ಸಿಕಾರ್‌ನ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ಕೂಡ ನಡೆಯಲಿದೆ.

ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರಿಗೆ 2 ಸಾವಿರ ರೂಪಾಯಿಯಂತೆ, ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡುತ್ತದೆ. ಈ ವರ್ಷದಲ್ಲಿ ಫೆಬ್ರವರಿ 27 ರಂದು 13ನೇ ಕಂತಿನ ಹಣ ಬಂದಿತ್ತು. ಈಗ 14ನೇ ಕಂತಿನ ಹಣ ಜುಲೈ 27 ರಂದು ಬಿಡುಗಡೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ. ಅದರೊಂದಿಗೆ,  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14 ನೇ ಕಂತಿನ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಗಳು ತಮ್ಮ eKYC ಅನ್ನು ಪೂರ್ಣಗೊಳಿಸಬೇಕು.

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಲ್ಲಿ ನಿಮ್ಮ ಅರ್ಹತೆ ಚೆಕ್‌ ಮಾಡುವುದು ಹೇಗೆ?
Step 1:  ಪಿಎಂ ಕಿಸಾನ್‌ ವೆಬ್‌ಸೈಟ್‌ https://pmkisan.gov.in/ ಭೇಟಿ ನೀಡಿ
Step 2: ಇದರಲ್ಲಿ ನೋ ಯುವರ್‌ ಸ್ಟೇಟಸ್‌ (know your status) ಟ್ಯಾಬ್‌ ಕ್ಲಿಕ್‌ ಮಾಡಿ
Step 3: ನಿಮ್ಮ ನೋಂದಣಿ ನಂಬರ್‌ ಹಾಗೂ ಕ್ಯಾಪ್ಚಾ ಕೋಡ್‌ ದಾಖಲಿಸಿ. ಗೆಟ್‌ ಡೇಟಾ ಕ್ಲಿಕ್‌ ಮಾಡಿ.
- ನಿಮ್ಮ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಸ್ಟೇಟಸ್‌ ತಿಳಿಯುತ್ತದೆ.

ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು? : 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿ

PM KISAN ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಹುಡುಕೋದು ಹೇಗೆ?
Step 1: ಪಿಎಂ ಕಿಸಾನ್‌ ವೆಬ್‌ಸೈಟ್‌ https://pmkisan.gov.in/ ಭೇಟಿ ನೀಡಿ
Step 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್‌ ಕ್ಲಿಕ್‌ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
Step 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್‌ ವಿವರಗಳನ್ನು ಆಯ್ಕೆಮಾಡಿ
Step 4: ಗೆಟ್‌ ರಿಪೋರ್ಟ್‌ ಎನ್ನುವ ಟ್ಯಾಬ್‌ ಕ್ಲಿಕ್‌ ಮಾಡಿ
ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ: ಇ-ಕೆವೈಸಿ ಕಡ್ಡಾಯ; ರಂಗನಾಥ್‌.ಆರ್‌

Latest Videos
Follow Us:
Download App:
  • android
  • ios