ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ: ಇ-ಕೆವೈಸಿ ಕಡ್ಡಾಯ; ರಂಗನಾಥ್‌.ಆರ್‌

ತಾಲೂಕಿನಲ್ಲಿ ಈಗಾಗಲೇ 27242 ಇ-ಕೆವೈಸಿ ಮಾಡಿಸಿಕೊಂಡಿದ್ದು, ಉಳಿಕೆ ನೋಂದಾಯಿಸದೇ ಇರುವ ಅರ್ಹ 9863 ರೈತರು ಸ್ವಯಂಘೋಷಣಾ ಪತ್ರ, ಎಲ್ಲಾ ಸರ್ವೆ ನಂಬರ್‌ಗಳ ಪಹಣಿ, ಆಧಾರ್‌ ಜೆರಾಕ್ಸ್‌ ಪ್ರತಿ, ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌ ಪ್ರತಿಗಳನ್ನು ಸಂಬಂಧಪಟ್ಟಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸಲ್ಲಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್‌.ರಂಗನಾಥ್‌ ತಿಳಿಸಿದ್ದಾರೆ.

PM Kisan Samman Yojana: E-KYC mandatory snr

  ಶಿರಾ :  ತಾಲೂಕಿನಲ್ಲಿ ಈಗಾಗಲೇ 27242 ಇ-ಕೆವೈಸಿ ಮಾಡಿಸಿಕೊಂಡಿದ್ದು, ಉಳಿಕೆ ನೋಂದಾಯಿಸದೇ ಇರುವ ಅರ್ಹ 9863 ರೈತರು ಸ್ವಯಂಘೋಷಣಾ ಪತ್ರ, ಎಲ್ಲಾ ಸರ್ವೆ ನಂಬರ್‌ಗಳ ಪಹಣಿ, ಆಧಾರ್‌ ಜೆರಾಕ್ಸ್‌ ಪ್ರತಿ, ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌ ಪ್ರತಿಗಳನ್ನು ಸಂಬಂಧಪಟ್ಟಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸಲ್ಲಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್‌.ರಂಗನಾಥ್‌ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು, ಫೆಬ್ರವರಿ-2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯಗಳಿಸಲು ರೈತರ ಆರ್ಥಿಕ ಬಲವರ್ಧನೆಗೆ ನೆರವಾಗುವ ಉದ್ದೇಶದಿಂದ ಎಲ್ಲಾ ವರ್ಗದ ರೈತರಿಗೆ ಕೇಂದ್ರ ಸರಕಾರದಿಂದ ವಾರ್ಷಿಕ 6000 ರು.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರಕಾರದಿಂದ 4000 ರು.ಗಳನ್ನು ಎರಡು ಕಂತುಗಳಲ್ಲಿ ಒಟ್ಟು 10000 ರು.ಗಳನ್ನು ನೀಡಲಾಗುತ್ತಿದೆ.

ಆಧಾರ್‌ ಕಾರ್ಡ್‌ನ್ನು ಬ್ಯಾಂಕ್‌ ಆಕೌಂಟ್‌ಗೆ ಜೋಡಣೆ ಮಾಡಿಸುವುದು ಹಾಗೂ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಸದರಿ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸುವುದು ಅವಶ್ಯಕವಾಗಿರುತ್ತದೆ. ಆದ್ದರಿಂದ ಶಿರಾ ತಾಲೂಕಿನಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದೆ ಉಳಿದಿರುವ ರೈತರು ತಾಲ್ಲೂಕಿನ 9863 ರಷ್ಟುರೈತ ಭಾಂದವರು ಇ-ಕೆವೈಸಿ ಯನ್ನು ರೈತ ಸಂಪರ್ಕ ಕೇಂದ್ರ, ಗ್ರಾಮಓನ್‌, ಗ್ರಾಹಕರ ಸೇವಾ ಕೇಂದ್ರ ಹಾಗೂ ಪೋಸ್ಟ್‌ ಆಫೀಸ್‌ಗಳಲ್ಲಿ, ಬ್ಯಾಂಕುಗಳಲ್ಲಿ ಈಗಾಗಲೇ ತಿಳಿಸಿರುವ ದಾಖಲೆಗಳೊಂದಿಗೆ ಸಂಪರ್ಕಿಸಿ ಈ ತಿಂಗಳ ಜೂನ್‌-30 ಕಡೇ ದಿನವಾಗಿರುವುದರಿಂದ ಇ-ಕೆವೈಸಿ ಮಾಡಿಸಿಕೊಳ್ಳಲು ಎಲ್ಲಾ ರೈತ ಬಾಂಧವರಿಗೆ ಮನವಿ ಮಾಡಿದ್ದಾರೆ.

1,42,356 ಫಲಾನುಭವಿಗಳಿಗೆ 13 ಕಂತುಗಳಲ್ಲಿ 267.07 ಕೋಟಿ ರು

ಚಿಕ್ಕಮಗಳೂರು (ಜೂ.11) ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯ 1,42,356 ಫಲಾನುಭವಿಗಳಿಗೆ 13 ಕಂತುಗಳಲ್ಲಿ 267.07 ಕೋಟಿ ರು. ನೀಡಲಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ(Minister of State for Agriculture and Farmers Welfare) ಶೋಭಾ ಕರಂದ್ಲಾಜೆ ಹೇಳಿದರು.

ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿಗೆ 195 ಕೋಟಿ, ಅಮೃತ್‌ ಕುಡಿಯುವ ನೀರು ಯೋಜನೆಗೆ 52.27 ಕೋಟಿ, ಉದ್ಯಾನಗಳ ಅಭಿವೃದ್ಧಿ ಇನ್ನಿತರೆ ಅಭಿವೃದ್ಧಿಗೆ 13.75 ಕೋಟಿ, 15 ನೇ ಹಣಕಾಸು ಯೋಜನೆಯಡಿ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ 7.85 ಕೋಟಿ ರು. ಅನುದಾನ ಕೇಂದ್ರದಿಂದ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?

ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ 28 ಕೋಟಿ, ಜಲ್‌ ಜೀವನ್‌ ಮಿಷನ್‌ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 298 ಕೋಟಿ, ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ 200 ಕೋಟಿ ರು., ಚಿಕ್ಕಮಗಳೂರು ಪಶು ಆಸ್ಪತ್ರೆಗೆ 1.79 ಕೋಟಿ ರು., ಪಿಎಂಜಿಎಸ್‌ವೈ 200 ಕೋಟಿ ರು., ಖೇಲೋ ಇಂಡಿಯಾ ಯೋಜನೆಯಡಿ 11.50 ಕೋಟಿ ರು., ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 9.97 ಕೋಟಿ, ಜನ್‌ಧನ್‌ ಯೋಜನೆಯಡಿ 15.69 ಕೋಟಿ ರು., ರಾಷ್ಟ್ರೀಯ ಉಚ್ಛ ಶಿಕ್ಷಣ ಯೋಜನೆಯಡಿ 2 ಕೋಟಿ ರು, ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆಯಡಿ 185 ಕೋಟಿ ರು. ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ 10.14 ಕೋಟಿ ರು. ಅನುದಾನ ಬಂದಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios