ನವದೆಹಲಿ(ಮೇ.17): ದೇಶದಲ್ಲಿರುವ 2ನೇ ಕೊರೋನಾ ಅಲೆ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಆಗಮಿಸಲಿರುವ ಮುಂದಿನ ಅಲೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಮುಖ ವೈದ್ಯರ ತಂಡದ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ತಮ್ಮ ಪ್ರಾಣ ಲೆಕ್ಕಿಸಿದ ಕೊರೋನಾ ವಿರುದ್ದ ನಡೆಸುತ್ತಿರುವ ಹೋರಾಟಕ್ಕೆ ಧನ್ಯವಾದ ಹೇಳಿದ್ದಾರೆ.

ಕೊರೋನಾ ಆತಂಕ; ರಾಜ್ಯ ಹಾಗೂ ಜಿಲ್ಲಾ ಕ್ಷೇತ್ರ ಅಧಿಕಾರಿಗಳ ಜೊತೆ ಮೋದಿ ಸಂವಾದ!

ಕೊರೋನಾ ಪರೀಕ್ಷೆ, ಸೂಕ್ತ ಚಿಕಿತ್ಸೆ, ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವಿಕೆ, ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆ ಸೇರಿದಂತೆ ದೇಶ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸಮಸ್ಯೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಒದಗಿಸುವತ್ತ ಕಾರ್ಯನಿರ್ವಹಿಸುತ್ತಿದೆ. ಎಂಬಿಬಿಎಸ್ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮಾನಸಂಪನ್ಮೂಲ ವೃದ್ಧಿಗೆ ದೇಶ ಕೈಗೊಂಡ ಕ್ರಮಗಳು ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಬಲ ನೀಡಿದೆ ಎಂದು ನರೇಂದ್ರ ಮೋದಿ ಹೇಳಿದರು.

ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಿದ ಕಾರಣ ದೇಶದ 90% ಆರೋಗ್ಯ ವೃತ್ತಿಪರರು ಈಗಾಗಲೇ ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಲಸಿಕೆಗಳು ಹೆಚ್ಚಿನ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿವೆ ಎಂದು ಮೋದಿ ಹೇಳಿದ್ದಾರೆ.

ಯೋಗಿ ಸೇರಿ ನಾಲ್ವರು ಸಿಎಂಗಳ ಜೊತೆ ಮೋದಿ ಮಾತು, ಕೊರೋನಾ ಬಗ್ಗೆ ಮಾಹಿತಿ!

ದೈನಂದಿನ ಪ್ರಯತ್ನಗಳಲ್ಲಿ ಆಮ್ಲಜನಕ ಲೆಕ್ಕಪರಿಶೋಧನೆ ಸೇರಿಸಬೇಕು ಎಂದು  ವೈದ್ಯರಲ್ಲಿ  ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಹೋಮ್ ಐಸೋಲೇಶನ್ ಆರೈಕೆಯಲ್ಲಿರುವ ಸೋಂಕಿತರ ಎಸ್‌ಒಪಿ ಚಾಲಿತವಾಗಿದಯೇ ಎಂದು ವೈದ್ಯರು ಖಚಿತಪಡಿಸಿಕೊಳ್ಳಬೇಕು. ರೋಗಿಗಳ ಚಿಕಿತ್ಸೆಗೆ ಟೆಲಿಮೆಡಿಸಿನ್ ದೊಡ್ಡ ಪಾತ್ರವಹಿಸಿದೆ. ಈ ಸೇವೆಯನ್ನು ಗ್ರಾಮೀಣ ಪ್ರದೇಶಳಿಗೆ ವಿಸ್ತರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ   ಹಳ್ಳಿಗಳಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಒದಗಿಸುತ್ತಿರುವ ವೈದ್ಯರನ್ನು ಶ್ಲಾಘಿಸಿದರು. ಇದೇ ರೀತಿಯ ತಂಡಗಳನ್ನು ರಚಿಸಿ, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮತ್ತು ಎಂಬಿಬಿಎಸ್ ಇಂಟರ್ನಿಗಳಿಗೆ ತರಬೇತಿ ನೀಡಬೇಕು. ದೇಶದ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಟೆಲಿಮೆಡಿಸಿನ್ ಸೇವೆ ಇರುವಂತೆ ನೋಡಿಕೊಳ್ಳುವ ಕೆಲಸ ಮಾಡಬೇಕು ಎಂದು ಅವರು ರಾಜ್ಯದಾದ್ಯಂತದ ವೈದ್ಯರಿಗೆ ಮೋದಿ ಮನವಿ ಮಾಡಿದರು.

ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್‌ ಬಳಕೆ, ಆಡಿಟ್‌ಗೆ ಆದೇಶ: ರಾಜ್ಯಗಳಿಗೆ ಢವಢವ!

ಸಂವಾದದಲ್ಲಿ ಕೊರೋನಾ ಉಲ್ಬಣಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾರ್ಗದರ್ಶನ ಮತ್ತು ನಾಯಕತ್ವ, ಲಸಿಕೆ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಿರುವುದಕ್ಕೆ ವೈದ್ಯರು ಮೋದಿಗೆ ಧನ್ಯವಾದ ಅರ್ಪಿಸಿದರು.  ಸಂವಾದದಲ್ಲಿ ವೈದ್ಯರು ತಮ್ಮ ಅನುಭವ ಹಾಗೂ ವಿಶೇಷ ಪ್ರಯತ್ನಗಳನ್ನು ಮೋದಿಗೆ ವಿವರಿಸಿದರು.