Asianet Suvarna News Asianet Suvarna News

'ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ, ಕೊರೋನಾಕ್ಕೆ ಶರಣಾದ ಮೋದಿ'

ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ | ಕೊರೋನಾಕ್ಕೆ ಶರಣಾದ ಮೋದಿ: ಕೇಂದ್ರದ ವಿರುದ್ಧ ರಾಹುಲ್‌ ಕಿಡಿ| 

PM Has Surrendered Rahul Gandhi Targets Government Over Virus Crisis
Author
Bangalore, First Published Jun 28, 2020, 10:12 AM IST

ನವದೆಹಲಿ(ಜೂ.28): ಕೊರೋನಾ ನಿಯಂತ್ರಣಕ್ಕೆ ಹಲವು ಕ್ರಮಗಳ ಹೊರತಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ ಬೆನ್ನಲ್ಲೇ, ವೈರಸ್‌ ನಿಯಂತ್ರಿಸಲಾಗದೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾಕ್ಕೆ ಶರಣಾಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.

ಆತ್ಮನಿರ್ಭರ ಭಾರತವೇ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ: ಮೋದಿ ಮನ್‌ ಕೀ ಬಾತ್

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿದ ರಾಹುಲ್‌, ‘ದೇಶದ ಹಲವು ಭಾಗಗಳಿಗೆ ಕೋವಿಡ್‌-19 ವ್ಯಾಪಕವಾಗಿ ಹಬ್ಬುತ್ತಿದೆ. ಆದರೆ, ಭಾರತ ಸರ್ಕಾರದ ಬಳಿ ಸೋಂಕು ನಿಯಂತ್ರಣಕ್ಕೆ ಯಾವುದೇ ಯೋಜನೆಗಳಿಲ್ಲ. ಪ್ರಧಾನಿ ಕೈಕಟ್ಟಿಕುಳಿತಿದ್ದಾರೆ. ಈ ಯುದ್ಧದಲ್ಲಿ ಸೋಲು ಒಪ್ಪಿಕೊಂಡಿರುವ ಮೋದಿ ಅವರು ಸಾಂಕ್ರಮಿಕ ರೋಗದ ವಿರುದ್ಧದ ಹೋರಾಟದಿಂದ ಹಿಂದೆ ಸರಿದಿದ್ದಾರೆ’ ಎಂದು ಜರೆದಿದ್ದಾರೆ.

ಅಲ್ಲದೆ, ಕೊರೋನಾ ನಿಯಂತ್ರಣಕ್ಕಾಗಿ ಐಸಿಎಂಆರ್‌ ಹಾಗೂ ಕೇಂದ್ರ ಸರ್ಕಾರ ಕಳೆದ ಎರಡು ವಾರಗಳಿಂದ ಯಾವುದೇ ಚರ್ಚೆ ನಡೆಸುತ್ತಿಲ್ಲ ಎಂಬ ಸುದ್ದಿ ಸಂಸ್ಥೆಯೊಂದರ ವರದಿಯೊಂದನ್ನು ತಮ್ಮ ಟ್ವೀಟ್‌ನಲ್ಲಿ ರಾಹುಲ್‌ ಲಗತ್ತಿಸಿದ್ದಾರೆ.

Follow Us:
Download App:
  • android
  • ios