ಕೇಂದ್ರ ಸರ್ಕಾರ ಘೋಷಿಸಿರುವ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯು, ದೇಶದ ಮೂಲಸೌಕರ್ಯ ವಲಯದ ಯೋಜನೆ, ಜಾರಿ ಮತ್ತು ಕಣ್ಗಾವಲಿಗೆ ಹೊಸ ಸ್ಪರ್ಶ ನೀಡುವ ಜೊತೆಗೆ ಒಟ್ಟಾರೆ ಯೋಜನಾ ಜಾರಿ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ನವದೆಹಲಿ (ಮಾ.01): ಕೇಂದ್ರ ಸರ್ಕಾರ ಘೋಷಿಸಿರುವ ಪ್ರಧಾನ ಮಂತ್ರಿ ಗತಿ ಶಕ್ತಿ (PM Gati Shakti) ಯೋಜನೆಯು, ದೇಶದ ಮೂಲಸೌಕರ್ಯ ವಲಯದ ಯೋಜನೆ, ಜಾರಿ ಮತ್ತು ಕಣ್ಗಾವಲಿಗೆ ಹೊಸ ಸ್ಪರ್ಶ ನೀಡುವ ಜೊತೆಗೆ ಒಟ್ಟಾರೆ ಯೋಜನಾ ಜಾರಿ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.
ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ ಕುರಿತು ಸೋಮವಾರ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ‘ಮೂಲಸೌಕರ್ಯ ಯೋಜನೆ, ಯೋಜನೆ ಜಾರಿ ಮತ್ತು ಅದರ ಮೇಲಿ ನಿಗಾ ವಿಷಯಗಳಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಹೊಸ ದಿಕ್ಕು ನೀಡಲಿದೆ. ಜೊತೆಗೆ ಎಲ್ಲಾ ಹಂತಗಳಲ್ಲೂ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವನ್ನು ಖಚಿತಪಡಿಸಲಿದೆ’ ಎಂದರು.
‘ಹಾಲಿ ವಿವಿಧ ಯೋಜನೆಗಳ ಜಾರಿಯ ವೇಳೆ, ಅದರ ಪಾಲುದಾರರ ನಡುವೆ ಪರಸ್ಪರ ಕೊರತೆಯಿಂದಾಗಿ ಯೋಜನೆ ಪೂರ್ಣಗೊಳ್ಳುವ ಸಮಯ ವಿಳಂಬವಾಗುವುದರ ಜೊತೆಗೆ, ವೆಚ್ಚವೂ ಅಂದಾಜನ್ನು ಮೀರುತ್ತಿದೆ. ಇದಕ್ಕೆ ಮುಖ್ಯ ಕಾರಣ ವಿವಿಧ ಇಲಾಖೆಗಳ ನಡುವೆ ಪರಸ್ಪರ ಮಾಹಿತಿ ಕೊರತೆ ಕಾರಣವಾಗಿತ್ತು. ಆದರೆ ಗತಿ ಶಕ್ತಿ ಯೋಜನೆಯ ಈ ಕೊರತೆ ನೀಗುವ ಮೂಲಕ ಕಾಲಮಿತಿಯಲ್ಲಿ ಗುಣಮಟ್ಟದ ಯೋಜನೆ ಜಾರಿಯಾಗುವುದು ಮತ್ತು ವೆಚ್ಚ ಕಡಿತವನ್ನು ಖಚಿತಪಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Russia Ukraine War ಉಕ್ರೇನ್ ಪರಿಸ್ಥಿತಿ, ಭಾರತೀಯರ ರಕ್ಷಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ಮಾತೃಭಾಷೆಯಲ್ಲಿ ಹೆಮ್ಮೆಯಿಂದ ಮಾತಾಡಿ: ಮಾತೃ ಭಾಷೆಯಲ್ಲಿಯೇ ಮಾತನಾಡುವ ಅಗತ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯನ್ನು ಹೆಮ್ಮೆಯಿಂದ ಬಳಸಬೇಕು ಎಂದು ಕರೆಕೊಟ್ಟಿದ್ದಾರೆ. ಅಲ್ಲದೆ ಇಂಥ ಬೆಳವಣಿಗೆಯು, ಇಡೀ ಹೊಸ ತಲೆಮಾರಿಗೆ ಮತ್ತು ಇಡೀ ಜಗತ್ತಿಗೆ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂದು ಹೇಳಿದ್ದಾರೆ.
ಭಾನುವಾರ ಮಾಸಿಕ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸ್ವಾತಂತ್ರ್ಯಾನಂತರದ 75 ವರ್ಷಗಳ ನಂತರವೂ ತಮ್ಮ ಭಾಷೆ, ವಸ್ತ್ರ, ಆಹಾರ ಮತ್ತು ಪಾನೀಯಗಳ ಹಿರಿಮೆ ಬಗೆಗಿನ ಗೊಂದಲ ಮತ್ತು ಕೀಳರಿಮೆ ಇನ್ನೂ ಉಳಿದುಕೊಂಡಿದೆ. ವಿಶ್ವದಲ್ಲಿ ಎಲ್ಲೂ ಇಲ್ಲ ಇಂಥ ಮನೋಭಾವ ನಮ್ಮಲ್ಲೂ ಬೇಡ. ಭಾಷಾ ಶ್ರೀಮಂತಿಕೆಯಲ್ಲಿ ಭಾರತ ಇಡೀ ವಿಶ್ವದಲ್ಲೇ ಅದ್ವಿತೀಯವಾದುದು. ಹೀಗಾಗಿ ಪ್ರತಿಯೊಬ್ಬರು ತಮ್ಮ ಮಾತೃಭಾಷೆಯಲ್ಲಿ ಹೆಮ್ಮೆಯಿಂದ ಮಾತನಾಡಬೇಕು’ ಎಂದು ಕರೆಕೊಟ್ಟರು.
‘ತಾಯಿ ನಮ್ಮ ಜೀವನವನ್ನು ರೂಪಿಸುವಂತೆ ಮಾತೃ ಭಾಷೆ ಕೂಡಾ ನಮ್ಮ ಜೀವನವನ್ನು ರೂಪಿಸುತ್ತದೆ. ತಾಯಿ ಮತ್ತು ತಾಯ್ನುಡಿ ಎರಡೂ ನಮ್ಮ ಜೀವನದ ಶಕ್ತಿ ಮತ್ತು ತಳಪಾಯ ಇದ್ದಂತೆ. ಹೇಗೆ ನಾವು ನಮ್ಮ ತಾಯಿಯನ್ನು ದೂರ ಮಾಡುವುದು ಸಾಧ್ಯವಿಲ್ಲವೋ ಹಾಗೆಯೇ ತಾಯ್ನುಡಿಯನ್ನು ಕೂಡಾ’ ಎಂದು ಮಾತೃ ಭಾಷೆಯ ಮಹತ್ವ ತಿಳಿ ಹೇಳುವ ಕೆಲಸ ಮಾಡಿದರು.
ವಿಶ್ವದ ಶ್ರೀಮಂತ ಭಾಷೆಯಾದ ತಮಿಳು ಇರುವುದು ಭಾರತದಲ್ಲಿ. ಈ ಮಹತ್ವದ ವಿಷಯ ನಮ್ಮದಾಗಿರುವುದಕ್ಕೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು. ಅದೇ ರೀತಿ ಸಂಸ್ಕೃತದಲ್ಲಿನ ಪುರಾತನ ಗ್ರಂಥಗಳ ಬಗ್ಗೆಯೂ ನಾವು ಹೆಮ್ಮೆ ಪಡಬೇಕು. ಭಾರತದಲ್ಲಿ ನಾವು 121 ವಿವಿಧ ಮಾತೃ ಭಾಷೆಗಳನ್ನು ಹೊಂದಿದ್ದೇವೆ. ಈ ಪೈಕಿ 14 ಭಾಷೆಗಳನ್ನು ನಿತ್ಯವೂ ತಲಾ ಕನಿಷ್ಠ 1 ಕೋಟಿಗಿಂತ ಹೆಚ್ಚು ಜನರು ಬಳಕೆ ಮಾಡುತ್ತಾರೆ. ನಮ್ಮಲ್ಲಿ ನಿತ್ಯ 14 ಭಾಷೆಗಳನ್ನು ಮಾತನಾಡುವ ಜನರ ಒಟ್ಟು ಸಂಖ್ಯೆಯಷ್ಟುಹಲವು ಯುರೋಪಿಯನ್ ದೇಶಗಳ ಒಟ್ಟು ಜನಸಂಖ್ಯೆ ಕೂಡಾ ಇಲ್ಲ.
ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!
ಭಾಷೆ ಎನ್ನುವುದು ಕೇವಲ ಭಾವನೆ ವ್ಯಕ್ತಪಡಿಸುವ ಮಾಧ್ಯಮವಲ್ಲ, ಬದಲಾಗಿ ಅದು ಸಂಸ್ಕೃತಿ ಮತ್ತು ಸಮಾಜದ ಪರಂಪರೆಯನ್ನು ಉಳಿಸುವ ಮಾಧ್ಯಮವಾಗಿಯೂ ಕೆಲಸ ಮಾಡುತ್ತದೆ ಎಂದು ಹೇಳಿದರು. ಮಾತೃ ಭಾಷೆ ತನ್ನದೇ ಆದ ಅರಿವನ್ನು ಹೊಂದಿದೆ. ಈ ಅರಿವನ್ನು ಅರ್ಥ ಮಾಡಿಕೊಳ್ಳಲೆಂದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅದೇ ರೀತಿ ವೃತ್ತಿಪರ ಕೋರ್ಸ್‌ಗಳನ್ನೂ ಸ್ಥಳೀಯ ಭಾಷೆಯಲ್ಲೇ ಬೋಧಿಸುವ ಸಂಬಂಧ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
