Asianet Suvarna News Asianet Suvarna News

ಪಿಎಂ ಕೇರ್ಸ್ ಫಂಡ್ ಸರ್ಕಾರ ನಿಯಂತ್ರಣದಲ್ಲಿಲ್ಲ, ಇದು ಚಾರಿಟೇಬಲ್ ಟ್ರಸ್ಟ್, ಹೈಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ!

ಕೋವಿಡ್ ಸಂಕಷ್ಟದ ವೇಳೆ ಪಿಎಂ ಕೇರ್ಸ್ ಫಂಡ್ ಭಾರಿ ಸದ್ದು ಮಾಡಿತ್ತು. ಜನಸಾಮಾನ್ಯರಿಂದ ಹಿಡಿದು ಶ್ರೀಮಂತರು ದೇಣಿಗೆ ನೀಡಿ ದೇಶಕಟ್ಟಲು ನೆರವಾಗಿದ್ದರು. ಇದೀಗ ಇದೇ ಪಿಎಂ ಕೇರ್ಸ್ ಫಂಡ್ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಇದೀಗ ಸ್ಪಷ್ಟನೆ ನೀಡಿದೆ. ಪಿಎಂ ಕೇರ್ಸ್ ಫಂಡ್ ಕುರಿತು ಕೇಂದ್ರ ಸರ್ಕಾರ ಹೇಳಿದ್ದೇನು?

PM Cares Fund independent public charitable trust no control over govt PMO to Delhi High court ckm
Author
First Published Jan 31, 2023, 8:20 PM IST

ನವದೆಹಲಿ(ಜ.31): ಪ್ರಧಾನ ಮಂತ್ರಿ ಕೇರ್ಸ್ ಫಂಡ್ ಕುರಿತು ಪ್ರಧಾನಿ ಕಾರ್ಯಾಲಯ ದೆಹಲಿ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ಪಿಎಂ ಕೇರ್ಸ್ ಫಂಡ್ ಯಾವುದೇ ಸಾರ್ವಜನಿಕ ಫಂಡ್ ಅಲ್ಲ. ಪಿಎಂ ಕೇರ್ಸ್ ಫಂಡ್ ಮೇಲೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಯಾವುದೇ ಅಧಿಕಾರವಿಲ್ಲ. ಇಷ್ಟೇ ಅಲ್ಲ ಪಿಎಂ ಕೇರ್ಸ ಫಂಡ್‌ನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ. ಇದು ಚಾರಿಟೇಬಲ್ ಟ್ರಸ್ಟ್ ಆಗಿದೆ. ಹೀಗಾಗಿ ಪಿಎಂ ಕೇರ್ಸ್ ಫಂಡ್ ಮಾಹಿತಿ ಹಕ್ಕು ಕಾಯ್ದೆ 2005 ಅನ್ವಯವಾಗಲ್ಲ. ಇಷ್ಟೇ ಅಲ್ಲ ಈ ಚಾರಿಟೇಬಲ್ ಟ್ರಸ್ಟ್‌ನ್ನು ಆರ್ಟಿಕ್ 12ರ ಸಂವಿಧಾನಿಕ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ ಎಂದು ಪ್ರಧಾನಿ ಕಾರ್ಯಾಲಯ ದೆಹಲಿ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.

ಪಿಎಂ ಕೇರ್ಸ್ ಫಂಡ್‌ನಲ್ಲಿ ಬಾಕಿ ಉಳಿದಿರುವ ಹಣ, ನಿಧಿಯನ್ನು ಯಾವೆಲ್ಲಾ ಕಾರ್ಯಗಳಿಗೆ ಬಳಸಲಾಗಿದೆ. ಸಂವಿಧಾನದ  ಅಡಿಯಲ್ಲಿ ನಿಧಿ ಲೆಕ್ಕಪರಿಶೋಧನೆ ಬಹಿರಂಗಪಡಿಸಬೇಕು. ಇದಕ್ಕೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಸಮ್ಯಕ್ ಗಂಗ್ವಾಲ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಕುರಿತು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಜಸ್ಚೀಸ್ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದ್ದಕ್ಕೆ ಪ್ರಧಾನಿ ಕಾರ್ಯಾಲಯ ಇಂದು ದೆಹಲಿ ಹೈಕೋರ್ಟ್‌ಗೆ ಪಿಎಂ ಕೇರ್ಸ್ ಫಂಡ್ ಕುರಿತು ಅಫಿದವಿತ್ ಸಲ್ಲಿಸಿದೆ.  

 

ಪಿಎಂ ಕೇರ್ಸ್‌ ಫಂಡ್‌ ಸಲಹಾ ಮಂಡಳಿಗೆ ಸುಧಾ ಮೂರ್ತಿ ನೇಮಕ; ಟ್ರಸ್ಟಿಯಾದ Ratan Tata

ಪ್ರಧಾನಿ ಕಾರ್ಯಾಲಯ ಸಲ್ಲಿಸಿದ ವಿವರವಾದ ಅಫಿದವಿತ್‌ನಲ್ಲಿ ಪಿಎಂ ಕೇರ್ಸ್ ಫಂಡ್ ನಿಧಿ ಕುರಿತ ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಪಿಎಂ ಕೇರ್ಸ್ ಫಂಡ್‌ಗೆ ಕೇಂದ್ರದಿಂದ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಇದರ ಮೇಲೆ ಸರ್ಕಾರದ ಯಾವುದೇ ನಿಯಂತ್ರಣವಿಲ್ಲ. ಪಿಎಂ ಕೇರ್ಸ್ ಫಂಡ್ ಸ್ವಯಂಪ್ರೇರಿತ ದೇಣಿಕೆಯನ್ನು ಮಾತ್ರ ಸ್ವೀಕರಿಸುತ್ತದೆ. ಪಿಎಂ ಕೇರ್ಸ್ ಫಂಡ್‌ಗೆ ಸರ್ಕಾರದಿಂದ ಯಾವುದೇ ಅನುದಾನ ಹಾಗೂ ಬೆಂಬಲವಿಲ್ಲ. ಇಷ್ಟೇ ಸರ್ಕಾರದ ಬಜೆಟ್‌ನಿಂದ, ಸಾರ್ವಜನಿಕ ಉದ್ಯಮ ವಲಯದಿಂದ ಯಾವುದೇ ನಿಧಿ ಸ್ವೀಕರಿಸುವುದಿಲ್ಲ ಎಂದಿದೆ.

ಕೊರೋನಾ ವೈರಸ್‌ನಿಂದ ಬಾಧಿತರಾದವರಿಗೆ ನೆರವು ನೀಡಲೆಂದು ಕೇಂದ್ರ ಸರ್ಕಾರ ಕಳೆದ ವರ್ಷ ಸ್ಥಾಪಿಸಿದ್ದ ‘ಪಿಎಂ ಕೇರ್ಸ್‌ ಫಂಡ್‌’ ಸರ್ಕಾರಿ ಫಂಡ್‌ ಅಲ್ಲ. ಇದರಡಿ ಸಂಗ್ರಹಿಸಿ ಹಣ ಭಾರತ ಸರ್ಕಾರದ ಸಂಚಿತ ನಿಧಿಗೆ ಹೋಗುವುದಿಲ್ಲ ಪಿಎಂ ಕೇರ್ಸ್‌ ಟ್ರಸ್ಟ್‌ ಅಡಿ ಈ ನಿಧಿ ಕಾರ್ಯನಿರ್ವಹಿಸುತ್ತಿದ್ದು, ಇದರ ಎಲ್ಲಾ ಹಣಕಾಸು ವ್ಯವಹಾರಗಳು ಅತ್ಯಂತ ಪಾರದರ್ಶಕವಾಗಿರುತ್ತವೆ ಎಂದೂ ತಿಳಿಸಿದೆ.

ಪಿಎಂ ಕೇರ್ಸ್‌ ಫಂಡ್‌ ಅನ್ನು ಪ್ರಧಾನ ಮಂತ್ರಿಗಳು ಸ್ಥಾಪಿಸಿರುವುದರಿಂದ ಅದು ಸರ್ಕಾರದ ನಿಧಿಯಾಗುತ್ತದೆ. ಒಂದು ವೇಳೆ ಅದು ಸರ್ಕಾರದ ನಿಧಿಯಲ್ಲ ಅಂತಾದರೆ ವೆಬ್‌ಸೈಟ್‌ನಲ್ಲಿ ಪ್ರಧಾನಿಯ ಭಾವಚಿತ್ರ ಮತ್ತು ಸರ್ಕಾರದ ಲಾಂಛನ ಹಾಕಿರುವುದು ಏಕೆ ಎಂದು ಪ್ರಶ್ನಿಸಿ ಸಮ್ಯಕ್‌ ಗಂಗ್ವಾಲ್‌ ಎಂಬುವರು ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

PM Cares Fund ಪಿಎಂ ಕೇ​ರ್ಸ್‌ ಫಂಡ್‌ಗೆ 10,900 ಕೋಟಿ ರೂ ದೇಣಿಗೆ, 3976 ಕೋಟಿ ವೆಚ್ಚ!

ಪಿಎಂ ಕೇರ್ಸ್‌ ಟ್ರಸ್ಟ್‌ನ ಗೌರವ ಉಸ್ತುವಾರಿಯೂ ಆಗಿರುವ ಪ್ರಧಾನಿ ಕಾರ್ಯಾಯಲದ ಅಧೀನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ಅಫಿಡವಿಟ್‌ ಸಲ್ಲಿಸಿ, ‘ಇದು ಸರ್ಕಾರದ ನಿಧಿ ಅಲ್ಲ. ಆದರೆ ಇದಕ್ಕೆ ಬರುವ ದೇಣಿಗೆ ಹಾಗೂ ಈ ನಿಧಿಯಿಂದ ಮಾಡುವ ಖರ್ಚಿನ ಬಗ್ಗೆ ಕೇಂದ್ರ ಸರ್ಕಾರದ ಸಿಎಜಿ ಅವರು ನೇಮಿಸಿರುವ ಚಾರ್ಟರ್ಡ್‌ ಅಕೌಂಟೆಂಟ್‌ಗಳಿಂದ ಆಡಿಟ್‌ ಮಾಡಿಸಲಾಗುತ್ತದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಅದರ ಎಲ್ಲಾ ವಿವರಗಳನ್ನೂ ಸರ್ಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ದೇಶದ ಬೇರೆಲ್ಲಾ ಟ್ರಸ್ಟ್‌ಗಳಿಗೆ ಅನ್ವಯಿಸುವ ನಿಯಮಗಳೇ ಈ ಟ್ರಸ್ಟ್‌ಗೂ ಅನ್ವಯಿಸುತ್ತವೆ. ಸಂವಿಧಾನಬದ್ಧವಾಗಿ ಇದು ಸ್ಥಾಪಿತವಾಗಿದೆ’ ಎಂದು ತಿಳಿಸಿದರು.

Follow Us:
Download App:
  • android
  • ios