Asianet Suvarna News Asianet Suvarna News

ಕೊರೋನಾವನ್ನು ಲೈಟ್ ಆಗಿ ತಗೊಳ್ಬೇಡಿ: ಸೋಂಕಿತ ಗರ್ಭಿಣಿಯ ಲಾಸ್ಟ್ ಮೆಸೇಜ್

  • ದಯವಿಟ್ಟು ಕೊರೋನಾವನ್ನು ಲೈಟ್ ಆಗಿ ತಗೊಳ್ಬೇಡಿ
  • 34 ವರ್ಷದ ಸೋಂಕಿತ ಗರ್ಭಿಣಿಯ ಲಾಸ್ಟ್ ಮೆಸೇಜ್ 
Please dont take corona so lightly: Final message from 34 year old pregnant Covid-19 patient dpl
Author
Bangalore, First Published May 22, 2021, 5:16 PM IST | Last Updated May 22, 2021, 5:16 PM IST

ದೆಹಲಿ(ಮೇ.22): ಡಿಂಪಲ್ ಅರೋರಾ ಎಂಬ ದಂತವೈದ್ಯೆ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟಾಗುವಾಗ ಕೊರೋನಾ ಮುಷ್ಠಿಯಲ್ಲಿ ಸಿಕ್ಕಿಬಿದ್ದರು ಈಕೆ. 7ನೇ ತಿಂಗಳಲ್ಲಿ ಇನ್ನೂ ಹುಟ್ಟದ ಕಂದನ ಕಳೆದುಕೊಂಡ ಈಕೆ ಮರುದಿನ ತಾವೂ ಇಹಲೋಕ ತ್ಯಜಿಸಿದರು. ಮೂರು ವರ್ಷದ ಮಗುವನ್ನು ತಬ್ಬಲಿಯಾಗಿ ಮಾಡಿ ಹೋದರು. ಆಕೆ ಸಾಯುವ ಮುನ್ನ ನೀಡಿದ ಲಾಸ್ಟ್ ಮೆಸೇಜ್ ಈಗ ವೈರಲ್ ಆಗಿದೆ.

ಕೊರೋನಾವನ್ನು ದಯವಿಟ್ಟು ಲೈಟ್ ಆಗಿ ತಗೊಳ್ಬೇಡಿ. ಇದು ಅತ್ಯಂತ ಕೆಟ್ಟ ರೋಗ, ಇದರ ಲಕ್ಷಣಗಳು ಇನ್ನಷ್ಟು ಕೆಟ್ಟದ್ದು. ನನಗೆ ಮಾತನಾಡಲಾಗುತ್ತಿಲ್ಲ, ಆದರೆ ನನಗೆ ನನ್ನ ಮೆಸೇಜ್ ಎಲ್ಲರಿಗೂ ಕೊಡಬೇಕು. ಮುಖ್ಯವಾಗಿ ನನ್ನ ಗರ್ಭಾವಸ್ಥೆಯಲ್ಲಿ ನನಗಿದು ಬೇಡ ಎಂದು ಗದ್ಗತಿರಾಗಿ ಹೇಳುತ್ತಾರೆ ಆಕೆ.

ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..!

34 ವರ್ಷದ ಈಕೆ ಬದುಕನ್ನು ಬಗಹಳಷ್ಟು ಎಂಜಾಯ್ ಮಾಡಿದ್ದರು. ಪ್ರತಿ ನಿಮಿಷವನ್ನು ಖುಷಿ ಖುಷಿಯಾಗಿ ಅನುಭವಿಸಿದ್ದರು ಆಕೆ. ಆದರೆ ಕೊರೋನಾ ಜೊತೆ ಎಷ್ಟೇ ಹೋರಾಡಿದರೂ ಬದುಕಿಗೆ ಮರಳಲು ಆಕೆಗೆ ಸಾಧ್ಯವಾಗಲಿಲ್ಲ.

ಭಾರತದಲ್ಲಿ ರೂಪಾಂತರಿ ಕೊರೋನಾ ಅಪಾಯ ಹೆಚ್ಚಾಗಿದ್ದು, ಬಹಳಷ್ಟು ಜನ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದ್ದು, ಕೊರೋನಾದ ಅಪಾಯ ಇನ್ನೂ ಕಮ್ಮಿಯಾಗಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios