ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..!

* ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..!
* ಬ್ಲ್ಯಾಕ್ ಫಂಗಸ್ ಮಧ್ಯೆ ರಾಜ್ಯಕ್ಕೆ ವೈಟ್ ಫಂಗಸ್ ಎಂಟ್ರಿ
* ರಾಯಚೂರಿನಲ್ಲಿ ವೈಟ್ ಫಂಗಸ್ ಪತ್ತೆ
 

First case of White Fungus found in Karnataka rbj

ರಾಯಚೂರು, (ಮೇ.22): ರಾಜ್ಯದಲ್ಲಿ ಕೊರೋನಾ ಮಧ್ಯೆ ಬ್ಲ್ಯಾಕ್ ಫಂಗಸ್ ಆತಂಕ ಮೂಡಿಸಿದೆ. ಇದರ ಮಧ್ಯೆ ಇದೀಗ ರಾಜ್ಯದಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಗೊಳಿಸಿದೆ.

 ಇದೇ ಮೊದಲ ಬಾರಿಗೆ ರಾಜ್ಯದಲ್ಲಿ  6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 6 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ.

ಬ್ಲ್ಯಾಕ್ ಫಂಗಸ್‌, ವೈಟ್‌ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..? 

ರಾಯಚೂರಿನ ಖಾಸಗಿ ಆಸ್ಪತ್ರೆಯೊಂದರಲ್ಲೇ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಇವರೆಲ್ಲರೂ ಕೊರೋನಾ ಸೋಂಕಿನಿಂದ ಗುಣಮುಖರಾದವರಾಗಿದ್ದಾರೆ ಎಂದು ವೈದ್ಯ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

ವೈಟ್ ಫಂಗಸ್ ಸೋಂಕಿತರು ಆತಂಕಪಡುವ ಅಗತ್ಯವಿಲ್ಲ. 14 ದಿನಗಳ ಕಾಲ ಚಿಕಿತ್ಸೆ ನೀಡಿದರೆ ಗುಣಮುಖರಾಗಬಹುದು. ಈ ಸೋಂಕಿನಲ್ಲಿ ಅನ್ನನಾಳಕ್ಕೆ ತೊಂದರೆಯಾಗುತ್ತದೆ ಹೊರತು ಜೀವಕ್ಕೆ ಮಾರಕವಲ್ಲ. ಆದರೆ ಫಂಗಸ್ ರಕ್ತದಲ್ಲಿ ಸೇರಿದರೆ ಮಾತ್ರ ಪ್ರಾಣಕ್ಕೆ ಅಪಾಯ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಇನ್ನು ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ನಷ್ಟು ಅಪಾಯಕಾರಿ ಅಲ್ಲ ಎಂದು ಈಗಾಗಲೇ ತಜ್ಞ ವೈದ್ಯರು ಹೇಳಿದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಈ ವೈಟ್ ಫಂಗಸ್ ಉತ್ತರ ಪ್ರದೇಶದಲ್ಲಿ ಪತ್ತೆಯಾತ್ತು.

Latest Videos
Follow Us:
Download App:
  • android
  • ios