ಕೊರೋನಾ ನಿಯಂತ್ರಣಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಜನಜಂಗುಳಿಯನ್ನು ತಪ್ಪಿಸಲು ಕ್ರಮ| ರೈಲು ನಿಲ್ದಾಣದ ಪ್ಲಾಟ್‌ಫಾರಂ ಟಿಕೆಟ್ ದರ 50 ರು.ಗೆ ಹೆಚ್ಚಳ!
ಮುಂಬೈ(ಮಾ.03): ಕೊರೋನಾ ನಿಯಂತ್ರಣಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರೈಲ್ವೆ ನಿಲ್ದಾಣಗಳ ಪ್ಲಾಟ್‌ಫಾರಂ ಟಿಕೆಟ್ ದರವನ್ನು 50 ರು.ಗೆ ರೈಲ್ವೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪರಿಷ್ಕೃತ ದರ ಮಾ.1ರಿಂದಲೇ ಅನ್ವಯವಾಗುತ್ತಿದ್ದು, ಜೂ.15ರ ವರೆಗೂ ಜಾರಿಯಲ್ಲಿರಲಿದೆ. ಈ ಮೊದಲು ಮುಂಬೈನ ಶಿವಾಜಿ ಮಹಾರಾಜ ರೈಲ್ವೆ ನಿಲ್ದಾಣ, ಲೋಕಮಾನ್ಯ ತಿಲಕ್ ನಿಲ್ದಾಣ ಮತ್ತಿತರ ನಿಲ್ದಾಣಗಳಲ್ಲಿ ಪ್ಲಾರ್ಟ್‌ಫಾಮ್‌ರ್ ಟಿಕೆಟ್ ದರ 10 ರುಪಾಯಿ ಇತ್ತು.
ಇತ್ತೀಚೆಗೆ ಮುಂಬೈನಲ್ಲಿ ಕೊರೋನಾ ಸೋಂಕು ತೀವ್ರತೆ ಹೆಚ್ಚುತ್ತಿರುವುದರಿಂದ ರೈಲ್ವೆ ನಿಲ್ದಾಣಗಳಲ್ಲಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
