ಟಿಪ್ಸ್ ಕೊಡದ್ದಕ್ಕೆ ಪಿಝಾ ಡೆಲಿವರಿ ಬಾಯ್ ಮಾಡಿದ ಕೆಲಸ ನೋಡಿ..! ಟಿಪ್ಸ್ ಕೊಡಲ್ವಾ ? ಒಂದ್ ಪೀಸ್ ಪಿಝಾ ತಿಂತೀನಿ ಅಂತಾನೆ ಈತ

ದೆಹಲಿ(ಜು.26): COVID-19 ಅಪಾಯದಿಂದಾಗಿ ವಿಶ್ವದಾದ್ಯಂತ ಡೆಲಿವರಿ ಬಾಯ್ಸ್ ಪ್ರತಿದಿನ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲಸಕ್ಕೆ ಬರೆ ಬೀಳುವುದಲ್ಲದೆ ಪ್ರೊಟೋಕಾಲ್ ಅನುಸರಿಸಿ ಡೆಲಿವರಿ ಮಾಡುವುದು ಕಷ್ಟ.

ಕಳೆದ 10 ತಿಂಗಳುಗಳಲ್ಲಿ ಡೆಲಿವರಿ ಬಾಯ್ಸ್ ಕೆಲಸದ ಸಮಯ ಹಲವಾರು ಗಂಟೆಗಳಷ್ಟು ಹೆಚ್ಚಾಗಿದೆ. ಆದರೆ ಅವರಿಗೆ ಯಾವುದೇ ಹೆಚ್ಚಿನ ವೇತನವೂ ನೀಡುವುದಿಲ್ಲ. ಗ್ರಾಹಕರ ಬೇಡಿಕೆ ಪೂರೈಸಲು 12-15 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಬಿಕ್ಕಟ್ಟಿನ ಸಮಯದಲ್ಲಿ ಕೆಲವು ಒಳ್ಳೆಯ ಮಾತು ಅಥವಾ ಗ್ರಾಹಕರಿಂದ ಕೆಲವು ಪ್ರೋತ್ಸಾಹದ ಮಾತುಗಳು ಕೂಡಾ ಅವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ ಬಹಳಷ್ಟು ಗ್ರಾಹಕರು ಡೆಲಿವರಿ ಬಾಯ್ಸ್‌ಗಳನ್ನು ಟ್ರೀಟ್ ಮಾಡುವ ರೀತಿಯೇ ಭಿನ್ನವಿರುತ್ತದೆ.

ಫಿಜ್ಜಾ ಆರ್ಡರ್ ಮಾಡಲು ಹೋಗಿ 65 ಸಾವಿರ ಕಳಕೊಂಡ ಉದ್ಯಮಿ!

ಗ್ರಾಹಕರು ಖುಷಿಯಿಂದ ಟಿಪ್ಸ್ ಕೊಡುವುದು ಸಾಮಾನ್ಯ. ಆದರೆ ಇನ್ನು ಕೆಲವರು ನೂರಾರು ರೂಪಾಯಿ ಪಿಝಾ ಆರ್ಡರ್ ಮಾಡಿ ಒಂದಷ್ಟು ಟಿಪ್ಸ್ ಕೊಡಲು ಹಿಂದೇಟು ಹಾಕುತ್ತಾರೆ.

ಈ ಪಿಜ್ಜಾ ಡೆಲಿವರಿ ಬಾಯ್ ಟಿಪ್ಸ್ ನೀಡಲು ತನ್ನ ಬಳಿ ಹಣವಿಲ್ಲ ಎಂದು ಗ್ರಾಹಕ ಹೇಳಿಕೊಂಡ ನಂತರ ಅವನು ತಲುಪಿಸುತ್ತಿದ್ದ ಪೆಟ್ಟಿಗೆಯಿಂದ ಒಂದು ತುಂಡು ಪಿಜ್ಜಾವನ್ನು ತೆಗೆದುಕೊಂಡು ತಿಂದಿದ್ದಾನೆ.

ಆದರೆ ಪಿಜ್ಜಾ ಹಟ್ ಡ್ರೈವರ್ ತಾವಾಗಿಯೇ ಪಿಝಾ ತೆಗೆದುಕೊಳ್ಳಲಿಲ್ಲ. ಗ್ರಾಹಕ ಹಾಗೆ ಮಾಡಲು ಹೇಳಿದ್ದರಿಂದ ಅವನು ಸ್ಲೈಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.

ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಹೆಲ್ತಿ ಟೇಸ್ಟಿ ಪಿಜ್ಜಾ ಸಾಸ್‌!

ಅವನು ಪೆಟ್ಟಿಗೆಯನ್ನು ನೆಲದ ಮೇಲೆ ಇರಿಸಿ ನಂತರ ಬಾಗಿಲು ಬಡಿಯಲು ಹೋಗುತ್ತಾನೆ. ಆದರೆ ನಂತರ ಟಿಪ್ಸ್‌ಗೆ ಹಣವಿಲ್ಲ, ದಯವಿಟ್ಟು ಒಂದು ತುಂಡು ಪಿಜ್ಜಾ ತೆಗೆದುಕೊಳ್ಳಿ ಎಂದು ಬರೆಯುವ ಚಿಹ್ನೆಯನ್ನು ಅವನು ನೋಡುತ್ತಾನೆ.

YouTube video player

ನೀನು ನನಗೆ ತಮಾಷೆಮಾಡುತ್ತಿದ್ದೀಯಾ ಎಂದು ಡೆಲಿವರಿ ಬಾಯ್ ಹೇಳುತ್ತಾರೆ. ಕೆಲವು ಸೆಕೆಂಡುಗಳ ನಂತರ ಅವನು ಪಿಜ್ಜಾ ಪೆಟ್ಟಿಗೆಯನ್ನು ತೆರೆಯುತ್ತಾನೆ, ಒಂದು ಸ್ಲೈಸ್ ತೆಗೆದುಕೊಂಡು, ತನ್ನ ಮಾಸ್ಕ್ ಒಂದು ಬದಿಯನ್ನು ತೆಗೆದು ಪಿಝಾ ತಿನ್ನುತ್ತಾನೆ. ಈ ವಿಡಿಯೋ ಕ್ಲಿಪ್ ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.