ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಇದೀಗ ಚುನಾವಣಾ ಪ್ರಚಾರ ಗೀತೆ ಬಿಡುಗಡೆ ಮಾಡಿದೆ. ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅನ್ನೋ ಪ್ರಚಾರ ಗೀತೆ ಕನ್ನಡ ಸೇರಿ 24 ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ.
ನವದೆಹಲಿ(ಫೆ.21) ಲೋಕಸಭಾ ಚುನಾವಣಾ ಕಾವು ಹೆಚ್ಚಾಗತೊಡಗಿದೆ. ಚುನಾವಣಾ ಅಖಾಡಕ್ಕೆ ಧುಮುಕಿರುವ ಬಿಜೆಪಿ ಅದ್ಧೂರಿಯಾಗಿ ಪ್ರಚಾರ ಕಾರ್ಯಗಳನ್ನು ಆರಂಭಿಸುತ್ತಿದೆ. ಮುಂಬರುವ ಚುನಾವಣಾ ಕುರಿತು ದೆಹಲಿಯ ಭಾರತ್ ಮಂಟಪಂನಲ್ಲಿ ಸಭೆ ಸೇರಿದ ಬಿಜೆಪಿ ರಾಷ್ಟ್ರೀಯ ಮಂಡಳಿ, ಚುನಾವಣಾ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅನ್ನೋ ಚುನಾವಣಾ ಪ್ರಚಾರ ಗೀತೆ ಕನ್ನಡ ಸೇರಿದಂತೆ 24 ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮತ್ತೊಮ್ಮೆ ಮೋದಿ ಸರ್ಕಾರ ಅನ್ನೋ ಈ ಗೀತೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಪ್ರಚಾರ ಗೀತೆಯಾಗಿದೆ.
ಫಿಕ್ ಏಕ್ ಬಾರ್ ಮೋದಿ ಸರ್ಕಾರ ಪ್ರಚಾರ ಗೀತೆಯ ವಿಭಿನ್ನ ಸಾಹಿತ್ಯ ಒಳಗೊಂಡಿದೆ. ಈ ಹಾಡು ಎಲ್ಲಾ ಭಾರತೀಯರನ್ನು ಒಗ್ಗೂಡಿಸುವ ಕೆಲಸ ಮಾಡಲಿದೆ.ಈ ಹಾಡನ್ನು ವಿವಿಧ ಕ್ಷೇತ್ರಗಳ, ವಿವಿಧ ಸಮುದಾಯ, ಸಮಾಜಗಳ ಸಮಗ್ರ ಅಭಿವೃದ್ಧಿಯ ಹೂರಣವನ್ನು ಕಟ್ಟಿಕೊಡಲಿದೆ. ಪ್ರಧಾನಿ ಮೋದಿ ಸರ್ಕಾರ, ಬಡತನ ನಿರ್ಮೂಲನದಿಂದ ಜಾಗತಿಕ ಮಟ್ಟದಲ್ಲಿ ಭಾರದ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಫಲಿತಾಂಶಗಳಿಂದ ಮಿಳಿತಗೊಂಡಿದೆ.
ಭಾರತ 24 ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಆ ಭಾಷೆಗಳೆಂದರೆ:
| ಕನ್ನಡ | ಒರಿಯಾ | ಸಂಸ್ಕೃತ |
| ಹಿಂದಿ | ಸಂತಾಲಿ | ಕುಮೌನಿ |
| ಡೋಗ್ರಿ | ಭೋಜ್ಪುರಿ | ಬಂಗಾಳಿ |
| ಬುಂದೇಲಿ | ಪಂಜಾಬಿ | ಮರ್ವಾರಿ |
| ಸಿಂದ್ | ಗುಜರಾತಿ | ಇಂಗ್ಲೀಷ್ |
| ಹರ್ಯಾನ್ವಿ | ತಮಿಳು | ತೆಲುಗು |
| ಗಾರೋ | ಕಾಶ್ಮೀರಿ | ಮರಾಠಿ |
| ಅಸ್ಸಾಮಿ | ನಾಗಾ | ಮಲೆಯಾಳಂ |
ಬಿಜೆಪಿಯ ಚುನಾವಣಾ ಗೀತೆಯಲ್ಲಿ ಹಲವು ಮಹತ್ವದ ಅಂಶಗಳ ಕುರಿತು ಬೆಳಕು ಚೆಲ್ಲಲಾಗಿದೆ. ರೈತರಿಗಾಗಿ ಮೋದಿ ಸರ್ಕಾರದ ಮಾಡಿದ ಕೆಲಸಗಳು, ಅಸಂಘಟಿಕ ಕಾರ್ಮಿಕರು, ಮಹಿಳೆಯರು , ಯುವಕರು, ದೇಶದಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ, ಭಾರತದ ಆರ್ಥಿಕ ಬೆಳವಣಿಗೆ, ಚಂದ್ರಯಾನ3 ಮಿಷನ್, ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ಅಪ್ರತಿಮ ಸಾಧನೆಗಳನ್ನು ಈ ಹಾಡಿನಲ್ಲಿ ಉಲ್ಲೇಖಿಸಲಾಗಿದೆ.
2014ರ ಜನವರಿ ತಿಂಗಳಲ್ಲಿ ಫಿಕ್ ಏಕ್ ಬಾರ್ ಮೋದಿ ಸರ್ಕಾರ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಿದ್ದರು. ಈ ಅಭಿಯಾನದ ಅಡಿಯಲ್ಲಿ ಬಿಜೆಪಿ ನಾಯಕರು ದೇಶಾದ್ಯಂತ ಗೋಡೆಗಳಲ್ಲಿ ಫಿಕ್ ಏಕ್ ಬಾರ್ ಮೋದಿ ಸರ್ಕಾರ ಥೀಮ್ ಕುರಿತು ಪೈಟಿಂಗ್ ಮಾಡಿದ್ದಾರೆ. ಇದೀಗ ಈ ಅಭಿಯಾದ ಮುಂದುವರಿದ ಭಾಗವಾಗಿ ಫಿರ್ ಏಕ್ ಬಾರ್ ಮೋದಿ ಸರ್ಕಾರ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ 360 ಡಿಗ್ರಿ ಡಿಜಿಟಲ್ ಪ್ರಚಾರಕ್ಕೆ ಚಾಲನೆ ನೀಡಿದೆ. ಈಗಾಗಲೇ ಬಿಜೆಪಿ www.ekbaarphirsemodisarkar.bjp.org ವೆಬ್‌ಸೈಟ್ ಆರಂಭಿಸಿದೆ. ಈ ವೆಬ್‌ಸೈಟ್‌ನಲ್ಲಿ ಈಗಾಗಲೇ 30 ಲಕ್ಷಕ್ಕೂ ಅಧಿಕ ಮತದಾರರು ಸ್ವಯಂಪ್ರೇರಿತವಾಗಿ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವ ಪ್ರತಿಜ್ಞೆ ಮಾಡಿದ್ದಾರೆ.
