PFI Ban: ಮತಾಂಧ ಸಂಘಟನೆ ಪಿಎಫ್‌ಐ ಬ್ಯಾನ್‌ಗೆ ಏಳು ಪ್ರಮುಖ ಕಾರಣಗಳು..!

ರಾಷ್ಟ್ರೀಯ ತನಿಖಾ ಸಂಸ್ಥೆ, ಇಡಿ ಹಾಗೂ ವಿವಿಧ ರಾಜ್ಯಗಳ ಪೊಲೀಸರು ಜಂಟೀ ಕಾರ್ಯಾಚರಣೆಯಲ್ಲಿ ಅಂದಾಜು 250ಕ್ಕೂ ಅಧಿಕ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ ಬಳಿಕ, ಕೇಂದ್ರ ಸರ್ಕಾರ ಈ ಸಂಘಟನೆ ಹಾಗೂ ಇದರ ಅಡಿಯಲ್ಲಿ ಬರುವ ವಿವಿಧ ಸಂಘಟನೆಗಳನ್ನು ಮುಂದಿನ ಐದು ವರ್ಷಗಳ ಕಾಲ ನಿಷೇಧ ವಿಧಿಸಿದೆ. ಪಿಎಫ್‌ಐ ಬ್ಯಾನ್‌ ಮಾಡಲು ಸರ್ಕಾರಕ್ಕಿದ 7 ಪ್ರಮುಖ ಕಾರಣಗಳು ಇಲ್ಲಿವೆ.

PFI News Why the Centre banned Popular Front of India These are the major reasons  san

ಬೆಂಗಳೂರು (ಸೆ. 28): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ವಿವಿಧ ರೂಪಗಳನ್ನು ಸರ್ಕಾರ ಬುಧವಾರ ನಿಷೇಧಿಸಿದೆ. ಸರ್ಕಾರದ ನಿರ್ಧಾರದ ಹಿಂದಿನ ಕಾರಣ ಮತ್ತು ಸಂಸ್ಥೆಯು ಒಳಗೊಂಡಿರುವ "ಕಾನೂನುಬಾಹಿರ ಚಟುವಟಿಕೆಗಳು" ಏನು ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ.  ಕಳೆದ ಐದು ದಿನಗಳಲ್ಲಿ ಪಿಎಫ್‌ಐ ಮತ್ತು ಅದರ ಸದಸ್ಯರ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ಸರಣಿ ದಾಳಿಗಳ ನಂತರ ಕೇಂದ್ರ ಸರ್ಕಾರವು ಈ ಮಹತ್ವದ ಕ್ರಮವನ್ನು ಕೈಗೊಂಡಿದೆ. ಮೊದಲ ದಿನದ ದಾಳಿಯಲ್ಲಿ 106ಕ್ಕೂ ಅಧಿಕ ಮಂದಿಯನ್ನು ಎನ್‌ಐಎ ಹಾಗೂ ಇಡಿ ಬಂಧಿಸಿದ್ದರೆ, ಮರುದಿನದ ದಾಳಿಯಲ್ಲಿ ವಿವಿಧ ರಾಜ್ಯಗಳ ಪೊಲೀಸರು 100ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ. ಒಟ್ಟಾರೆ ಈವರೆಗೂ 250 ಅಧಿಕ ಪಿಎಫ್‌ಐ ಮುಖಂಡರು ಕಾನೂನಿನ ಕುಣಿಕೆಯಲ್ಲಿದ್ದಾರೆ. ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟುಮಾಡುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಿಎಫ್‌ಐ ಮತ್ತು ಅದರ ಸಹಚರರು ತೊಡಗಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಸರ್ಕಾರದ ಪ್ರಕಾರ, ಈ ಚಟುವಟಿಕೆಗಳು ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಮತ್ತು ದೇಶದಲ್ಲಿ ಉಗ್ರವಾದವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗಿದೆ.

ಪಿಎಫ್‌ಐ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಸರ್ಕಾರ ಹೇಳಿರುವ ಕಾರಣಗಳು

1. ವಿದೇಶದಲ್ಲಿರುವ ಗುಂಪುಗಳಿಂದ ಧನಸಹಾಯ ಮತ್ತು ಸೈದ್ಧಾಂತಿಕವಾಗಿ ಬೆಂಬಲಿಸುವುದರಿಂದ PFI ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತದೆ. ಸಂಘಟನೆಯು ಹಲವಾರು ಕ್ರಿಮಿನಲ್ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಮತ್ತು ದೇಶದ ಸಾಂವಿಧಾನಿಕ ಅಧಿಕಾರದ ಕಡೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತದೆ. ಪಿಎಫ್‌ಐ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ

2.ಪಿಎಫ್‌ಐ ಮತ್ತು ಅದರ ಕಾರ್ಯಕರ್ತರು ಪದೇ ಪದೇ ಹಿಂಸಾತ್ಮಕ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದು ವಿವಿಧ ಪ್ರಕರಣಗಳ ತನಿಖೆಯಿಂದ ತಿಳಿದುಬಂದಿದೆ. ಪಿಎಫ್‌ಐ ಸದಸ್ಯರು ನಡೆಸಿದ ಹಿಂಸಾತ್ಮಕ ಕೃತ್ಯಗಳಲ್ಲಿ ಪ್ರಮುಖವಾಗಿ, ಕಾಲೇಜು ಪ್ರಾಧ್ಯಾಪಕನ ಕಾಲುಗಳನ್ನು ಕತ್ತರಿಸಿದ್ದು, ಇತರ ಧರ್ಮದ ಸಂಘಟನೆಯ ವ್ಯಕ್ತಿಗಳ ಕೊಲೆ, ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಲು ಸ್ಫೋಟಕಗಳನ್ನು ಪಡೆಯುವುದು ಸೇರಿವೆ.

3. ಪಿಎಫ್‌ಐ ಕೆಲವು ಸ್ಥಾಪಕ ಸದಸ್ಯರು ಟೆರರಿಸ್ಟ್ ಗುಂಪುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ವಿದ್ಯಾರ್ಥಿಗಳ ಇಸ್ಲಾಮಿಕ್ ಚಳುವಳಿಯ ನಾಯಕರು, ಭಾರತ (SIMI) ಮತ್ತು PFI ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (JMB) ನೊಂದಿಗೆ ಸಂಪರ್ಕವನ್ನು ಹೊಂದಿದೆ. ಗ್ಲೋಬಲ್‌ ಟೆರರಿಸ್ಟ್ ಸಂಸ್ಥೆಗಳ ಜೊತೆ PFI  ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಹಲವಾರು ನಿದರ್ಶನಗಳಿವೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ನಂತಹ ಭಯೋತ್ಪಾದಕ ಗುಂಪು  PFI ಮತ್ತು ಅದರ ಸಹವರ್ತಿ  ಸಂಘಟನೆಗಳು ರಹಸ್ಯವಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ದೇಶದಲ್ಲಿ ಅಭದ್ರತೆಯ ಭಾವನೆಯನ್ನು ಉತ್ತೇಜಿಸುವ ಮೂಲಕ ಒಂದು ಸಮುದಾಯದ ಆಮೂಲಾಗ್ರೀಕರಣವನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ಕೆಲವು PFI ಕಾರ್ಯಕರ್ತರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದಾರೆ ಎಂಬ ಅಂಶದಿಂದ ರುಜುವಾತಾಗಿದೆ. ಪಿಎಫ್‌ಐ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವ ಪ್ಲಾನ್ ಗಳನ್ನ ಹೊಂದಿದೆ.

4.ಪಿಎಫ್‌ಐ ಸಂಘಟನೆಯನ್ನ ಬಲವಾಗಿ ಬ್ಯಾನ್ ಮಾಡಲೇ ಬೇಕು ಅನ್ನೋ ಕೂಗು ಕೇಳಿದ್ದೇ ಹಿಂದೂಗಳ ಹತ್ಯೆ ವಿಚಾರದಲ್ಲಿ. ಕಾರ್ಯಕರ್ತರು ಹಲವಾರು ಭಯೋತ್ಪಾದಕ ಕೃತ್ಯಗಳು ಮತ್ತು ಹಲವಾರು ವ್ಯಕ್ತಿಗಳ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ. ಪಿಎಫ್‌ಐ ಸಂಘಟನೆಯ ಕಾರ್ಯಕರ್ತರಿಂದ 11 ಜನ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಸಂಜಿತ್ (ಕೇರಳ, ನವೆಂಬರ್, 2021),  ವಿ.ರಾಮಲಿಂಗಂ, (ತಮಿಳುನಾಡು, 2019), ನಂದು (ಕೇರಳ, 2021),  ಅಭಿಮನ್ಯು (ಕೇರಳ, 2018), ಬಿಬಿನ್ (ಕೇರಳ, 2017),  ಶರತ್ (ಕರ್ನಾಟಕ), ಪ್ರವೀಣ್‌ ನೆಟ್ಟಾರು (2022) ಪ್ರಮುಖವಾದ ಪ್ರಕರಣ.

PFI Ban: 5 ವರ್ಷಗಳ ಕಾಲ ನಿಷೇಧ; ಕೇಂದ್ರ ಸರ್ಕಾರದ ಮಾಸ್ಟರ್‌ ಸ್ಟ್ರೋಕ್‌

5. ಪಿಎಫ್‌ಐನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇತರರೊಂದಿಗೆ ಪಿತೂರಿ ನಡೆಸುತ್ತಿದ್ದಾರೆ ಮತ್ತು ಭಾರತದ ಮತ್ತು ವಿದೇಶದಿಂದ ಬ್ಯಾಂಕಿಂಗ್ ಮಾರ್ಗಗಳ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಈ ಹಣವನ್ನು ಕಾನೂನುಬದ್ಧವೆಂದು ನಿರೂಪಿಸಲು ಬಹು ಖಾತೆಗಳ ಮೂಲಕ ಸಂಯೋಜನೆ ಮಾಡಿದ್ದಾರೆ ಮತ್ತು ಅಂತಿಮವಾಗಿ ಭಾರತದಲ್ಲಿ ವಿವಿಧ ಅಪರಾಧ, ಕಾನೂನುಬಾಹಿರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಬಳಸಲಾಗುತ್ತದೆ.

ಎನ್‌ಐಎ ತನಿಖೆಯ ಬಿಗ್‌ ನ್ಯೂಸ್‌, ಪಿಎಫ್‌ಐ ಟಾರ್ಗೆಟ್‌ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!

6.ಸಂಸ್ಥೆಯ ಚಟುವಟಿಕೆಗಳು ತಮ್ಮ ಘೋಷಿತ ಉದ್ದೇಶಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ ಎಂದು ಕಂಡುಬಂದ ನಂತರ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪಿಎಫ್‌ಐಗೆ ನೀಡಲಾದ ನೋಂದಣಿಯನ್ನು ರದ್ದುಗೊಳಿಸಿತು. ಆದಾಯ ತೆರಿಗೆ ಇಲಾಖೆಯು ರಿಹ್ಯಾಬ್ ಇಂಡಿಯಾ ಫೌಂಡೇಶನ್‌ಗೆ ನೀಡಿದ್ದ ನೋಂದಣಿಯನ್ನೂ ರದ್ದುಗೊಳಿಸಿದೆ.

7.ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಪಿಎಫ್‌ಐ ಅನ್ನು ನಿಷೇಧಿಸಲು ಶಿಫಾರಸು ಮಾಡಿವೆ.

Latest Videos
Follow Us:
Download App:
  • android
  • ios