100ರ ಗಡಿ ದಾಟಿದ ಪೆಟ್ರೋಲ್ ಬೆಲೆ: ಭಾರತದಲ್ಲಿ ಇದೇ ಮೊದಲು

ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಎಂದು ಅಂದುಕೊಂಡಂತೆಯೇ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಹೇಗಿದೆ ಈಗಿನ ಬೆಲೆ..?

Petrol Crosses 100 rupees Mark In Rajasthan First Time Ever In India dpl

ನವದೆಹಲಿ(ಫೆ.17): ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿಯ ಗಡಿ ದಾಟಿದೆ. ರಾಜಸ್ಥಾನದಲ್ಲಿ ಇಂದಿನ ಪೆಟ್ರೋಲ್ ಬೆಲೆ ಸತತ 9ನೇ ದಿನ ಏರಿಕೆಯಾಗಿ 100ರ ಗಡಿ ತಲುಪಿದೆ.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಲೀಟರ್ಗೆ ತಲಾ 25 ಪೈಸೆಯಂತೆ ಹೆಚ್ಚಿಸಲಾಗಿದೆ. ಹಚ್ಚು ತೆರಿಗೆ ಇರುವಂತಹ ಬ್ರಾಂಡೆಡ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿದೆ.

ಈ ಒಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರು.ನಷ್ಟು ಇಳಿಕೆ!

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.13 ರೂಪಾಯಿ. ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲೇ ಪೆಟ್ರೋಲ್ ಮೇಲೆ ಹೆಚ್ಚು ವ್ಯಾಟ್ ವಿಧಿಸುವ ರಾಜ್ಯ ರಾಜಸ್ಥಾನ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 89.54 ರೂಪಾಯಿ ಇತ್ತು. ಡಿಸೇಲ್ ಬೆಲೆ 79.95 ರೂಪಾಯಿ ಇತ್ತು. ಮುಂಬೈನಲ್ಲಿ ಪೆಟ್ರೋಲ್ ಬೆಲೆ 96 ಮತ್ತು ಡಿಸೇಲ್ ಬೆಲೆ 86.98ಕ್ಕೆ ಏರಿಕೆಯಾಗಿತ್ತು. ಶ್ರೀಗಂಗಾನರದಲ್ಲಿ ಬ್ರಾಂಡೆಡ್ ಪೆಟ್ರೋಲ್ ಬೆಲೆ 102.91 ಇದ್ದರೆ ಇದೇ ಗುಣಮಟ್ಟದ ಡಿಸೇಲ್ ದರ 95.76 ಇದೆ.

Latest Videos
Follow Us:
Download App:
  • android
  • ios