ತಬ್ಲೀಘಿ ಮುಖ್ಯಸ್ಥನನ್ನು ಬಂಧಿಸಲು ಸರ್ಕಾರ ಹಿಂದೇಟು ಹಾಕಲು ಇದು ಕಾರಣವಂತೆ!
ಕೊರೋನಾ ವೈರಸ್ಸು ದೇಶದಲ್ಲಿ ಮೊದಲ ಸುತ್ತು ಹರಡಲು ತಬ್ಲೀಘಿಗಳು ಕೂಡ ಕಾರಣವಾಗಿದ್ದು ಗೊತ್ತಿರುವ ವಿಷಯವೇ. ಆದರೆ ಯಾಕೋ ಏನೋ ತಬ್ಲೀಘಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ದಿಲ್ಲಿ ಪೊಲೀಸರಿಗೆ ಹಾಗೂ ಉತ್ತರಪ್ರದೇಶ ಪೊಲೀಸರಿಗೆ ಮನಸ್ಸಿದ್ದಂತೆ ಕಾಣುತ್ತಿಲ್ಲ.
ಬೆಂಗಳೂರು (ಮೇ. 29): ಕೊರೋನಾ ವೈರಸ್ಸು ದೇಶದಲ್ಲಿ ಮೊದಲ ಸುತ್ತು ಹರಡಲು ತಬ್ಲೀಘಿಗಳು ಕೂಡ ಕಾರಣವಾಗಿದ್ದು ಗೊತ್ತಿರುವ ವಿಷಯವೇ. ಆದರೆ ಯಾಕೋ ಏನೋ ತಬ್ಲೀಘಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ದಿಲ್ಲಿ ಪೊಲೀಸರಿಗೆ ಹಾಗೂ ಉತ್ತರಪ್ರದೇಶ ಪೊಲೀಸರಿಗೆ ಮನಸ್ಸಿದ್ದಂತೆ ಕಾಣುತ್ತಿಲ್ಲ.
ಕರ್ನಾಟಕ ಬಿಜೆಪಿಯಲ್ಲಿ ಇಬ್ಬರೇ ನಿರ್ಣಾಯಕ ಆಟಗಾರರು; ಒಬ್ಬರು ಬಿಎಸ್‌ವೈ, ಇನ್ನೊಬ್ಬರು?
ಸ್ಥಳೀಯವಾಗಿ ತಬ್ಲೀಘಿ ಜಮಾತ್ ಮೇಲೆ ಹಾಕಿರುವ ಕೇಸ್‌ಗಳು ಸಾಧಾರಣ ಆಗಿದ್ದು, ಜಾಮೀನು ತೆಗೆದುಕೊಳ್ಳಲು ಕೋರ್ಟ್‌ಗೂ ಹೋಗಬೇಕಿಲ್ಲ. ಇವು ಕೇವಲ ನಿರ್ಲಕ್ಷ್ಯತನದ ಕೇಸಗಳು. ತಬ್ಲೀಘಿ ಜಮಾತ್ 180 ದೇಶಗಳಲ್ಲಿ ಸಕ್ರಿಯವಾಗಿದ್ದು, ಮುಸ್ಲಿಂ ಯುವಕರನ್ನು ಭಯೋತ್ಪಾದನೆಯತ್ತ ಹೋಗದಂತೆ ತಡೆಯಲು ಅನೇಕ ಕಡೆ ತಬ್ಲೀಘಿಗಳ ಸಹಾಯವಾಗಿದೆಯಂತೆ. ಹೀಗಾಗಿಯೇ ತಬ್ಲೀಘಿ ಮುಖ್ಯಸ್ಥ ಮೊಹಮ್ಮದ್ ಸಾದ್‌ನನ್ನು ಬಂಧಿಸಲು ಸರ್ಕಾರ ಹಿಂದೆಮುಂದೆ ನೋಡುತ್ತಿದೆಯಂತೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ