Asianet Suvarna News Asianet Suvarna News

ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ: ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಸಂಸದ ವೈಯಕ್ತಿಕ ಟೀಕೆ

ಮೋದಿ ಸರ್‌ನೇಮ್‌ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಉಂದುವರಿಸಿರುವ ಬಿಜೆಪಿ ಇಂದು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದೆ.

person born to a foreign woman can never be patriot bjp mps jibe at gandhis ash
Author
First Published Mar 28, 2023, 3:24 PM IST

ನವದೆಹಲಿ (ಮಾರ್ಚ್‌ 28, 2023): ಮೋದಿ ಸರ್‌ನೇಮ್‌ಗೆ ಅವಮಾನ ಮಾಡಲಾಗಿದೆ ಎಂದು ರಾಹುಲ್‌ ಗಾಂಧಿಗೆ ಈಗಾಗಲೇ 2 ವ‍ರ್ಷ ಜೈಲು ಶಿಕ್ಷೆ ನೀಡಲಾಗಿದೆ. ಹಾಗೂ ಶಿಕ್ಷೆ ಆರಂಭವಾಗುವ ಮುನ್ನವೇ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇನ್ನು, ಇದಕ್ಕೆ ಪರ - ವಿರೋಧ ಹೇಳಿಕೆ ವ್ಯಕ್ತವಾಗುತ್ತಿದೆ. ಇದೇ ರೀತಿ, ರಾಹುಲ್ ಗಾಂಧಿಯವರ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಇಂದು ಗಾಂಧಿ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ನಡೆಸಿ ವಿವಾದಕ್ಕೆ ಕಾರಣರಾಗಿದ್ದಾರೆ.

"ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ" ಎಂದು ಸಂಜಯ್ ಜೈಸ್ವಾಲ್ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಅಲ್ಲದೆ, ಈ ಮಾತನ್ನು 2,000 ವರ್ಷಗಳ ಹಿಂದೆ ಚಾಣಕ್ಯ ಹೇಳಿದ್ದು, ಅದು ನನಗೆ ಇಂದು ನೆನಪಿಗೆ ಬಂತು ಎಂದೂ ಅವರು ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

ಇನ್ನು, ಮಧ್ಯ ಪ್ರದೇಶದ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಹ ಕೆಲ ದಿನಗಳ ಮುನ್ನ ಇದೇ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಗಾಂಧಿ ಅವರನ್ನು ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು ಮತ್ತು ಅವರನ್ನು ಭಾರತದಿಂದ ಹೊರಹಾಕಬೇಕು ಎಂದೂ ಅವರು ಹೇಳಿದ್ದರು. ರಾಹುಲ್ ಗಾಂಧಿ ಭಾರತದವರಲ್ಲ ಎಂಬುದನ್ನು ಅವರು ಒಪ್ಪುತ್ತಾರೆ ಎಂದೂ ಅವರು ಹೇಳಿದ್ದಾರೆ. "ನೀವು ಭಾರತದವರಲ್ಲ ಎಂದು ನಮಗೆ ತಿಳಿದಿದೆ. ವಿದೇಶಿ ಮಹಿಳೆಯಿಂದ ಹುಟ್ಟಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದ್ದರು ಮತ್ತು ರಾಹುಲ್ ಗಾಂಧಿ ಅದನ್ನು ಸರಿ ಎಂದು ಸಾಬೀತುಪಡಿಸಿದ್ದಾರೆ" ಎಂದು ಅವರು ಮಾರ್ಚ್ 11 ರಂದು ಹೇಳಿದ್ದರು.

ಅಲ್ಲದೆ, ರಾಹುಲ್ ಗಾಂಧಿ ಅವರು ವಿದೇಶದಲ್ಲಿ ದೇಶವನ್ನು ಅವಮಾನಿಸಿದ್ದಾರೆ ಎಂದೂ ಸಂಜಯ್‌ ಜೈಸ್ವಾಲ್‌ ಹೇಳಿದ್ದಾರೆ. ಲಂಡನ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದ ಸಂಜಯ್‌ ಜೈಸ್ವಾಲ್‌, ನಮ್ಮ ಪ್ರಜಾಪ್ರಭುತ್ವ, ನ್ಯಾಯಾಲಯಗಳು ಮತ್ತು ಪತ್ರಕರ್ತರು ತಪ್ಪು ಎಂದು ನೀವು ಹೇಳಿದರೆ ನೀವು ಭಾರತವನ್ನು ನಂಬುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು
 
ಅಲ್ಲದೆ, ಅವರು ಮಾಜಿ ವಯನಾಡ್ ಸಂಸದ ರಾಹುಲ್‌ ಗಾಂಧಿಯನ್ನು "ಸಾಮಾನ್ಯ ಅಪರಾಧಿ" ಎಂದೂ ಕರೆದಿದ್ದಾರೆ. "ಅವರು ಪ್ರಧಾನಿ ಮೋದಿಯವರೊಂದಿಗೆ ಅಸಮಾಧಾನಗೊಂಡಿದ್ದಾರೆ. ಏಕೆಂದರೆ ಅವರು ತಮ್ಮನ್ನು ರಾಜಕುಮಾರ ಎಂದು ಪರಿಗಣಿಸಿದ್ದಾರೆ ಮತ್ತು ಕಳೆದ ಎರಡು ಅವಧಿಗಳಿಂದ ಪ್ರಧಾನಿ ಬಹುಮತದ ಸರ್ಕಾರವನ್ನು ರಚಿಸುತ್ತಿದ್ದಾರೆ" ಎಂದೂ ಸಂಜಯ್‌ ಜೈಸ್ವಾಲ್ ಹೇಳಿದ್ದಾರೆ.
.
ಮೋದಿ ಸರ್‌ನೇಮ್‌ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಉಂದುವರಿಸಿರುವ ಬಿಜೆಪಿ ಇಂದು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು. ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಕಳ್ಳರು ಎಂದು ಕರೆಯುವ ಮೂಲಕ ರಾಹುಲ್‌ ಗಾಂಧಿ ಅವಮಾನಿಸಿದ್ದಾರೆ. ಈ ಹಿನ್ನೆಲೆ ರಾಹುಲ್‌ ಗಾಂಧಿ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸಂಸದ ಸಂಜಯ್‌ ಜೈಸ್ವಾಲ್ ಅಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಹಾರ್ವರ್ಡ್‌, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ

ರಾಹುಲ್‌ ಗಾಂಧಿ ಹಿಂದುಳಿದ ಸಮುದಾಯಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದೂ ಅವರು ಆರೋಪಿಸಿದರು. ಮತ್ತು ಅವರು ಹೋದಲ್ಲೆಲ್ಲಾ ಒಬಿಸಿಗಳ ಕೋಪವನ್ನು ಎದುರಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ನ್ಯಾಯಾಲಯ ಅವರಿಗೆ ಅವಕಾಶ ನೀಡಿತ್ತು, ಅವರು ಕ್ಷಮೆ ಕೇಳಬಹುದಿತ್ತು. ಅವರ ಹೇಳಿಕೆಯು ನೀರವ್ ಮೋದಿ ಮತ್ತು ಲಲಿತ್ ಮೋದಿಯನ್ನು ಮಾತ್ರ ಉಲ್ಲೇಖಿಸಿದೆ ಎಂದು ಅವರು ನ್ಯಾಯಾಲಯದಲ್ಲಿ ಹೇಳಬಹುದಿತ್ತು. ಆದರೆ ಅವರು ಉದ್ದೇಶಪೂರ್ವಕವಾಗಿ ಹಾಗೆ ಮಾಡಲಿಲ್ಲ. ಇದನ್ನು ದೇಶವು ಗಮನಿಸುತ್ತಿದೆ ಎಂದೂ ಬಿಜೆಪಿ ಸಂಸದ ಸಂಜಯ್‌ ಜೈಸ್ವಾಲ್ ಹೇಳಿದ್ದಾರೆ.

Follow Us:
Download App:
  • android
  • ios