Asianet Suvarna News Asianet Suvarna News

ಕಪ್ಪು ಬಟ್ಟೆ, ಮಾಸ್ಕ್ ಧರಿಸಿದವರಿಗೆ ಮೋದಿ ಕಾರ್ಯಕ್ರಮಕ್ಕೆ ನೋ ಎಂಟ್ರಿ!

* ತಮ್ಮ ಸಂಸದೀಯ ಕ್ಷೇತ್ರಕ್ಕೆ ಮೋದಿ ಭೇಟಿ

* ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಪ್ರಧಾನಿ

* ಮೋದಿ ಕಾರ್ಯಕ್ರಮಕ್ಕೆ ಕಪ್ಪು ಬಣ್ಣ ಬ್ಯಾನ್

People Wearing Black Dress and Mask are not allowed to attend Modi Programme at Varanasi pod
Author
Bangalore, First Published Jul 15, 2021, 2:35 PM IST

ವಾರಾಣಸಿ(ಜು.15): ವಾರಾಣಸಿಗೆ ತಲುಪಿದ ಪ್ರಧಾನಿ ಮೋದಿ ಅವರು ಅನೇಕ ಯೋಜನೆಗಳನ್ನು ಉದ್ಘಾಟಿಸಿ, ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಿದ್ದಾರೆ. ಹೀಗಿರುವಾಗ ಆಡಳಿತಾಧಿಕಾರಿಗಳು ಪ್ರಧಾನ ಮಂತ್ರಿಯ ಭದ್ರತೆ ವಿಚಾರವಾಗಿ ಭಾರೀ ಎಚ್ಚರವಹಿಸಿದ್ದಾರೆ. ಪ್ರಧಾನಮಂತ್ರಿ ಭೇಟಿ ನೀಡುವ ಸ್ಥಳದಲ್ಲಿ ಕಪ್ಪು ಬಣ್ಣದ ಬಟ್ಟೆ, ಯಾವುದೇ ವಸ್ತುಗಳಿಗೆ ಅವಕಾಶ ಇಲ್ಲ. ಕಪ್ಪು ಬಟ್ಟೆಯಷ್ಟೇ ಅಲ್ಲ, ಕಪ್ಪು ಮಾಸ್ಕ್ ಧರಿಸಿದವರಿಗೂ ಪ್ರವೆಶ ನಿರಾಕರಿಸಲಾಗಿದೆ. ಆರ್‌ಎಸ್‌ಎಸ್ ಸ್ವಯಂಸೇವಕರ ಬ್ಲ್ಯಾಕ್ ಕ್ಯಾಪ್‌ಗಳನ್ನೂ ಈ ಸಂದರ್ಭದಲ್ಲಿ ತೆಗೆಸಲಾಗಿದೆ. 

ಸಂಕಷ್ಟದ ಸಮಯದಲ್ಲೂ ಧೃತಿಗೆಡದ ಕಾಶಿಗೆ ಭೇಷ್ ಎಂದ ಮೋದಿ!

ಮೋದಿ ಮಾತು ಆಲಿಸಬೇಕೆಂದರೂ ಬಿಡಲಿಲ್ಲ

ಪ್ರಧಾನಿ ಮೋದಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಐಟಿ ಕ್ರೀಡಾ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಈ ವೇಳೆ ಯಾರಿಗೂ ಅವರ ಭಾಷಣವನ್ನು ಖಂಡಿಸಲು ಆಗಲಿಲ್ಲ. ಮೈದಾನದ ಪ್ರವೇಶ ದ್ವಾರದ ಬಳಿ ಕಪ್ಪು ಪ್ಯಾಂಟ್, ಶರ್ಟ್ ಅಥವಾ ಟೀ ಶರ್ಟ್ ಧರಿಸಿದವರನ್ನು ತಡೆ ಹಿಡಿಯಲಾಗಿದೆ. ಅಷ್ಟೇ ಅಲ್ಲದೇ, ಕಪ್ಪು ಮಾಸ್ಕ್‌ ಧರಿಸಿದವರಿಗೂ ಒಳ ಹೋಗಲು ಅನುಮತಿ ನೀಡಿಲ್ಲ. ಈ ವೇಳೆ ಅನೇಕ ಮಂದಿ ಭದ್ರತಾ ಅಧಿಕಾರಿಗಳ ಬಳಿ ತಮ್ಮನ್ನು ಒಳ ಹೋಗಲು ಬಿಡುವಂತೆ ಮನವಿ ಮಾಡಿದ್ದಾರೆ. ಹೀಗಿದ್ದರೂ ಸಾಧ್ಯವಾಗಿಲ್ಲ. ನೀವು ಕಪ್ಪು ಬಣ್ಣವನ್ನು ಧರಿಸಿದ್ದೀರಿ, ಆದ್ದರಿಂದ ನಿಮಗೆ ಹೋಗಲು ಅನುಮತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮೋದಿ ಪಾದ ಮುಟ್ಟಿ ನಮಸ್ಕರಿಸಲು ಬಂದ ಮಹಿಳೆ: ಹಿಂದೆ ಸರಿದ ಪಿಎಂ, ಬಳಿಕ ಮಾಡಿದ್ದು ಹೀಗೆ!

ಕೆಲವರು ಸುಮ್ಮನಾದ್ರೆ ಇನ್ನು ಕೆಲವರು ತಪ್ಪೆಂದು ವಾದಿಸಿದ್ರು

ಪಿಎಂ ಮೋದಿಯವರ ಈ ಕಾರ್ಯಕ್ರಮದಲ್ಲಿ, ಕೆಲ ಆರ್‌ಎಸ್‌ಎಸ್ ಕಾರ್ಯಕರ್ತರು ತಮ್ಮ ಸಮವಸ್ತ್ರದ ಜೊತೆ ಕಪ್ಪು ಟೋಪಿ ಧರಿಸಿ ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನೂ ತಡೆದಿದ್ದು, ಕಪ್ಪು ಟೋಪಿ ತೆಗೆದಿರಿಸಿದ ಬಳಿಕವೇ ಒಳ ಹೋಗಲು ಅನುಮತಿ ನೀಡಿದ್ದಾರೆ. ಈ ವೇಳೆ ಅನೇಕ ಮಂದಿ ಅಧಿಕಾರಿಗಳ ಈ ನಡೆಯನ್ನು ಖಂಡಿಸಿದ್ದಾರೆ. ಕಪ್ಪು ಬಟ್ಟೆ ಧರಿಸಿದವರಿಗೆ ಒಳ ಬಿಡುವುದಿಲ್ಲ ಎಂದು ಮೊದಲೇ ತಿಳಿಸಬೇಕಿತ್ತು ಎಂದು ಕಿಡಿ ಕಾರಿದ್ದಾರೆ. 

Follow Us:
Download App:
  • android
  • ios