ವಯಸ್ಸಾದಾಗ ಜನ ಸಾಯ್ಲೇಬೇಕು: ಕೊರೋನಾ ಸಾವಿನ ಬಗ್ಗೆ ಸಚಿವರ ಬಾಯಲ್ಲಿ ಇದೆಂಥಾ ಮಾತು..!
ವಯಸ್ಸಾದವರು ಸಾಯ್ಲೇಬೇಕು | ಕೊರೋನಾ ಸಾವಿನ ಬಗ್ಗೆ ಸಚಿವರು ಹೀಗನ್ನೋದಾ ?
ಭೋಪಾಲ್(ಎ.16): ಕೊರೋನಾದಿಂದಾಗುವ ಸಾವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ವಯಸ್ಸಾದಾಗ ಜನರು ಸಾಯಲೇಬೇಕು ಎಂದು ಸಚಿವರೊಬ್ಬರು ಕೊಟ್ಟಿರೋ ಹೇಳಿಕೆ ವಿವಾದ ಸೃಷ್ಟಿಸಿದೆ. ಜವಾಬ್ದಾರಿಯುತ್ ಸ್ಥಾನದಲ್ಲಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದು ಮಧ್ಯಪ್ರದೇಶದ ಸಚಿವ ಪ್ರೇಮ್ ಸಿಂಗ್ ಪಟೇಲ್.
ಪ್ರತಿದಿನ ಬಹಳಷ್ಟು ಜನ ಸಾಯುತ್ತಿದ್ದಾರೆ ಎಂದು ನೀವು ಹೇಳುತ್ತೀರಿ, ವಯಸ್ಸಾದವರು ಸಾಯಲೇಬೇಕಲ್ಲ ಎಂದು ಹೇಳಿದ್ದಾರೆ ಸಚಿವ ಪಟೇಲ್. ಕೊರೋನಾ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ ಸಚಿವ.
ಕುಂಭಮೇಳದಲ್ಲಿ ಕೊರೋನಾಗೆ ಮೊದಲ ಬಲಿ : 1,700ಕ್ಕೂ ಹೆಚ್ಚು ಕೇಸ್
ಕೊರೋನಾ ಸಾವು ಸಂಭವಿಸುತ್ತಿದೆ ಎಂದು ನಾನು ಒಪ್ಪುತ್ತೇನೆ. ಆದರೆ ಈ ಸಾವುಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಾನಷ್ಟೇ ಅಲ್ಲ, ದೇಶದ ಎಲ್ಲರೂ ಕೊರೋನಾದ ರಕ್ಷಣೆಗಾಗಿ ಸಹಕಾರದ ಬಗ್ಗೆ ಮಾತನಾಡುತ್ತಿದ್ದೇವೆ.
ನಾವು ಜನರ ಸಹಕಾರವನ್ನು ಬಯಸುತ್ತೇವೆ. ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಕೈ ತೊಳೆಯುವುದು, ಸಾಮಾಜಿಕ ದೂರವನ್ನು ಅನುಸರಿಸಿ ಮತ್ತು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಎಂದಿದ್ದಾರೆ.