Asianet Suvarna News Asianet Suvarna News

Viral News: 3 ಕಣ್ಣಿನ ಕರುವಿನ ಜನನ, ಶಿವನ ಅವತಾರವೆಂದು ಪೂಜೆ, ಪಶುವೈದ್ಯರು ಬಿಚ್ಚಿಟ್ಟ ಅಸಲಿಯತ್ತು

* ಛತ್ತೀಸ್‌ಗಢದಲ್ಲಿ ವಿಚಿತ್ರ ಕರುವಿನ ಜನನ

* ಮೂರು ಕಣ್ಣಿನ ಕರು ಕಂಡು ಪೂಜೆ ಮಾಡಲಾರಂಭಿಸಿದ ಜನ

* ಪರೀಕ್ಷೆ ಮಾಡಿದ ಪಶುವೈದ್ಯರು ಮಾತ್ರ ಹೇಳಿದ್ದೇ ಬೇರೆ

 

People flock to worship 3 eyed calf in Chhattisgarh Rajnandgaon say it is incarnation of Lord Shiva pod
Author
Bangalore, First Published Jan 17, 2022, 2:25 PM IST

ರಾಯ್ಪುರ(ಜ.17): ಛತ್ತೀಸ್‌ಗಢದ ರಾಜನಂದಗಾಂವ್ (Chhattisgarh's Rajnandgaon) ಜಿಲ್ಲೆಯಲ್ಲಿ ರೈತನೊಬ್ಬನ ಮನೆಯಲ್ಲಿ ಮೂರು ಕಣ್ಣಿನ ಕರು (3-eyed calf ) ಜನಿಸಿದೆ. ಇದನ್ನು ನೋಡಲು ದೂರದೂರುಗಳಿಂದ ಜನ ಬರುತ್ತಿದ್ದಾರೆ. ದೇವರ ಪವಾಡವೆಂದು ಪರಿಗಣಿಸಿರುವ ಜನರು ಕರುವಿನ ಪೂಜೆ ಮಾಡಲಾರಂಭಿಸಿದ್ದಾರೆ. ಮೂರು ಕಣ್ಣಿರುವುದರಿಂದ ಇದು ಶಿವನ (Lord Shiva) ಅವತಾರವೆಂದು ಹೇಳುತ್ತಿರುವ ಜನ ಹೂವು ಹಣ್ಣುಗಳನ್ನೂ ಅರ್ಪಿಸುತ್ತಿದ್ದಾರೆ. ರಾಜನಂದಗಾಂವ್ ಜಿಲ್ಲೆಯ ಗಂಡೈ ಎಂಬಲ್ಲಿನ ರೈತನ ಮನೆಯಲ್ಲಿ ಈ ಕರು ಜನಿಸಿದೆ ಎಂಬುವುದು ಉಲ್ಲೇಖನೀಯ. 

ರೈತನಿಗೂ ಆಶ್ಚರ್ಯ

ಲಭ್ಯವಾದ ಮಾಹಿತಿ ಅನ್ವಯ ಗಂಡಾಯಿಯ ಗ್ರಾಮ ಪಂಚಾಯಿತಿ ಬುಂದೇಲಿ ನಿವಾಸಿ ಹೇಮಂತ್ ಚಂದೇಲ್ (Neeraj Chandel) ಎಂಬುವವರ ಮನೆಯಲ್ಲಿ ಮಕರ ಸಂಕ್ರಾಂತಿ ದಿನದಂದು ಕರು ಜನಿಸಿತ್ತು. ಕರುವನ್ನು ನೋಡಿ ರೈತನೂ ಆಶ್ಚರ್ಯಚಕಿತನಾಗಿದ್ದಾನೆ.  ಈ ಪುಟ್ಟ ಕರುವಿಗೆ ಮೂರು ಕಣ್ಣಿರುವುದೇ ಇದಕ್ಕೆ ಕಾರಣವಾಗಿದೆ. ಕರುವಿನ ಹಣೆಯ ಮಧ್ಯದಲ್ಲಿ ಕಣ್ಣಿನ ಆಕಾರವು ಗೋಚರಿಸುತ್ತದೆ, ಇದು ಭಾರೀ ಕುತೂಹಲ ಕೆರಳಿಸಿದೆ. ಮೂರು ಕಣ್ಣಿನ ಕರು ಹುಟ್ಟಿದ ಸುದ್ದಿ ಕ್ರಮೇಣ ಜಿಲ್ಲೆಯಾದ್ಯಂತ ಹರಡಿದೆ. ಜನರು ಇದನ್ನು ಪವಾಡ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ ಮತ್ತು ಮೂರು ಕಣ್ಣುಗಳ ಈ ಕರುವನ್ನು ನೋಡಲು ದೂರದೂರುಗಳಿಂದ ಜನರು ಆಗಮಿಸಲು ಪ್ರಾರಂಭಿಸಿದ್ದಾರೆ. ರೈತನ ಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ.

ಕರುವಿನಲ್ಲಿ ಇನ್ನೂ ಹಲವು ವಿಶೇಷತೆಗಳು

ರೈತನ ಮನೆಯಲ್ಲಿ ಹುಟ್ಟಿದ ಕರುವಿಗೆ ಮೂರು ಕಣ್ಣುಗಳಲ್ಲದೆ ಇನ್ನೂ ಹಲವು ವೈಶಿಷ್ಟ್ಯಗಳಿವೆ. ಇದು ಜನತೆಗೆ ಅಚ್ಚರಿಯ ವಿಷಯವಾಗಿದೆ. ವಾಸ್ತವವಾಗಿ, ಕರುವಿನ ಮೂಗಿನಲ್ಲಿ ನಾಲ್ಕು ರಂಧ್ರಗಳಿವೆ. ಅವನ ಬಾಲವು ಕೇಶ ವಿನ್ಯಾಸದಂತೆ ಕಾಣುತ್ತಿತ್ತು. ಜನರು ಈ ಕರುವನ್ನು ಭಗವಾನ್ ಭೋಲೆನಾಥನ ರೂಪವೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅಲ್ಲದೇ, ರೈತ ಹೇಮಂತ್ ಚಂದೇಲ್ ಕೂಡ ಇದನ್ನು ದೇವಿಯ ಆಶೀರ್ವಾದ ಎಂದು ಪೂಜಿಸುತ್ತಿದ್ದಾರೆ. ಜನರು ಧಾರ್ಮಿಕ ನಂಬಿಕೆಯೊಂದಿಗೆ ಕರುವನ್ನು ಕಾಣಲಾರಮಭಿಸಿದ್ದಾರೆ. ಅದೇ ವೇಳೆಗೆ ಪಶು ಆಸ್ಪತ್ರೆಯವರಿಗೆ ಇಡೀ ಘಟನೆಯ ಬಗ್ಗೆ ಮಾಹಿತಿ ಸಿಕ್ಕಾಗ ಅವರೂ ಕರುವನ್ನು ನೋಡಿದ್ದಾರೆ. ಭ್ರೂಣವು ಬೆಳವಣಿಗೆಯಾಗದ ಕಾರಣ ಈ ರೀತಿಯ ಕರು ಹುಟ್ಟಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ಹೀಗಾಗಿ ಜನರು ಇದನ್ನು ಪವಾಡ ಎಂದು ಪರಿಗಣಿಸುತ್ತಿದ್ದರೂ, ಇದೊಂದು ಪವಾಡವಲ್ಲ ಎಂದಿದ್ದಾರೆ.

Follow Us:
Download App:
  • android
  • ios