ನವದೆಹಲಿ(ಜು.09): ಕೊರೋನಾ ವೈರಸ್ ಗಾಳಿಯಲ್ಲೂ ಹರಡುತ್ತೆ ಅನ್ನೋ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿತ್ತು. ಹಲವರು ಉಸಿರಾಡಲು ಭಯಪಡುವ ಪರಿಸ್ಥಿತಿ ಎದುರಾಗಿತ್ತು. ಈ ಆತಂಕದ ಬೆನ್ನಲ್ಲೇ ಭಾರತೀಯ ತಜ್ಞವೈದ್ಯರು ಸಿಹಿ ಸುದ್ದಿ ನೀಡಿದ್ದಾರೆ. 

ಗಾಳಿಯಲ್ಲಿ ಕೊರೋನಾ ವೈರಸ್ ಹರಡುತ್ತೆ ಅನ್ನೋದರ ಕುರಿತು 200 ತಜ್ಞ ಸಂಶೋಧಕರು ಅಧ್ಯಯನ ನಡೆಸಿ ಇದೀಗ ಜನರಿಗೆ ಸಲಹೆ ನೀಡಿದ್ದಾರೆ. ಗಾಳಿಯಲ್ಲಿ ಕೊರೋನಾ ವೈರಸ್ ಹೆಚ್ಚು ಹೊತ್ತು ಬದುಕುವುದಿಲ್ಲ. ಇಷ್ಟೇ ಅಲ್ಲ ಗಾಳಿಯಾಡದ ಕಚೇರಿ, ಎಸಿ ಚಾಲಿತ ಕಚೇರಿ ಗಾಳಿಯಲ್ಲಿ ಕೊರೋನಾ ಜೀವಿಸುವ ಸಾಧ್ಯತೆ ಇದೆ. ಆದರೆ ಹೆಚ್ಚು ಕಾಲ ಇರುವುದಿಲ್ಲ ಎಂದಿದ್ದಾರೆ. 

ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!.

ಆದರೆ ಎಲ್ಲಾ ಪ್ರದೇಶದಲ್ಲಿ, ಕಚೇರಿಯಲ್ಲಿ, ಎಸಿ ಗಾಳಿಯಲ್ಲಿ ಕೊರೋನಾ ಇರುವುದಿಲ್ಲ. ಇದು ಅಪರೂಪ. ಈ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಪ್ರಮುಖ ಆದ್ಯತೆ ನೀಡುವುದು ಸೇರಿದಂತೆ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ತಜ್ಞರು ಹೇಳಿದ್ದಾರೆ.