Asianet Suvarna News Asianet Suvarna News

ನವಿಲೇ ಪಂಚರಂಗಿ ನವಿಲೇ... ಕ್ಯಾಮರಾದಲ್ಲಿ ಸೆರೆಯಾಯ್ತು ನವಿಲಿನ ಮನೋಹರ ನೃತ್ಯ

ನವಿಲಿನ ಸುಂದರವಾದ ನೃತ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಸೆಳೆಯುತ್ತಿದೆ. 

Peacock Unfurls Its Feathers rare scene captured in camera akb
Author
Bangalore, First Published Jul 14, 2022, 5:07 PM IST

ಭಾರತದ ರಾಷ್ಟ್ರ ಪಕ್ಷಿ ಎನಿಸಿರುವ ನವಿಲುಗಳು ಪಕ್ಷಿಗಳಲ್ಲಲ್ಲೇ ಅತ್ಯಂತ ಸುಂದರವಾದುವುಗಳು. ಅವು ಗರಿ ಬಿಚ್ಚಿದರಂತೂ ಅವುಗಳನ್ನು ನೋಡಲೆರಡು ಕಣ್ಣು ಸಾಲದು. ಹೀಗಾಗಿಯೇ ನವಿಲುಗಳನ್ನು ಬಣ್ಣಿಸಿ ಹಲವು ಹಾಡುಗಳು ಮೂಡಿ ಬಂದಿವೆ. ಸುಂದರ ಹೆಣ್ಣಿನ ವಯ್ಯಾರವನ್ನು ನವಿಲಿನ ನೃತ್ಯಕ್ಕೆ ಕವಿ ಹೋಲಿಸುತ್ತಾನೆ. ಕೃಷ್ಣ ಪರಮಾತ್ಮನ ಶಿರದಲ್ಲಿ ಜಾಗ ಪಡೆದಿದೆ ನವಿಲಿನ ಗರಿ. ಹೀಗೆ ಪೌರಾಣಿಕವಾಗಿಯೂ ಹಿನ್ನೆಲೆಯನ್ನು ಹೊಂದಿರುವ ನವಿಲಿನ ಸುಂದರವಾದ ನೃತ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಸೆಳೆಯುತ್ತಿದೆ. 

ಬಿಟ್ಟಿಂಗ್ ಬಿಡನ್‌ ಎಂಬ ಟ್ವಿಟರ್‌ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಲವು ಬಣ್ಣ ಬಣ್ಣದ ಗರಿಗಳನ್ನು ಹೊಂದಿರುವ ನವಿಲು ಗರಿ ಬಿಚ್ಚಿ ಕುಣಿಯುವುದನ್ನು ನೋಡುವುದೇ ಒಂದು ಚೆಂದ. 7 ಸೆಕೆಂಡುಗಳ ಈ ವಿಡಿಯೋವನ್ನು  13.7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅಲ್ಲದೇ 62,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನಾನು ನಿದ್ದೆಯಿಂದ ಎದ್ದು ಕೂದಲನ್ನು ಹೀಗೆ ಅಲುಗಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ರಾಷ್ಟ್ರ ರಾಜಧಾನಿಗೆ ಬಂದ ರಾಷ್ಟ್ರಪಕ್ಷಿ
ರಾಷ್ಟ್ರ ಪಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಅದಾಗ್ಯೂ ಕೆಲ ದಿನಗಳ ಹಿಂದೆ ಸುಂದರವಾದ ಗಂಡು ನವಿಲೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡು ನೋಡುಗರಿಗೆ ಅಚ್ಚರಿ ಮೂಡಿಸಿತ್ತು. ಕಟ್ಟಡಗಳ ಮಧ್ಯೆ ಈ ರಾಷ್ಟ್ರ ಪಕ್ಷಿ ಮನೆಯ ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಹಾರುತ್ತಿತ್ತು. ನಗರದಲ್ಲಿ ಅಪರೂಪವಾಗಿ ಕಾಣ ಸಿಕ್ಕ ನವಿಲನ್ನು ನೋಡಿ ಜನ ಅಚ್ಚರಿಗೊಂಡಿದ್ದರು.

 

ಹಲವು ಬಣ್ಣಗಳ ಸುಂದರವಾದ ಗರಿಗಳನ್ನು ಗೆದರಿ ನವಿಲು (peacock) ಒಂದೆಡೆಯಿಂದ ಮತ್ತೊಂದೆಡೆಗೆ ಹಾರಿ ಬಾಲ್ಕನಿಗೆ ಬಂದು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. safarnamabynidhi ಎಂಬ ಇನ್ಸ್ಟಾ ಖಾತೆಯಿಂದ ವಿಡಿಯೋ ಪೋಸ್ಟ್ ಆಗಿತ್ತು. ವಿಡಿಯೋದ ಹಿನ್ನೆಲೆಯಲ್ಲಿ ಅಮಿತಾಬ್‌ ಬಚ್ಚನ್ (Amitabh Bachchan) ನಟನೆಯ ಸಿಲ್‌ಸಿಲಾ (Silsila) ಸಿನಿಮಾದ ಲತಾ ಮಂಗೇಶ್ಕರ್ (Lata Mangeshkar) ಹಾಗೂ ಕಿಶೋರ್ ಕುಮಾರ್ (Kishore Kumar) ಅವರು ಹಾಡಿರುವ ದೆಖಾ ಏಕ್ ಕಾಬ್‌ (Dekha Ek Khwab) ಹಾಡು ಕೇಳಿ ಬರುತ್ತಿದೆ. ಟ್ರಾವೆಲ್ ಬ್ಲಾಗರ್ ಒಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಎಂತಹ ಅಪರೂಪದ ಕ್ಷಣ ದೆಹಲಿಯಂತಹ ನಗರದಲ್ಲಿ ನವಿಲು, ಈ ನವಿಲನ್ನು ನಾನು ಸುಮಾರು ಒಂದು ದಶಕದಿಂದ ನೋಡುತ್ತಿದ್ದೇನೆ. ಅವುಗಳು ತುಂಬಾ ಸೊಗಸಾಗಿವೆ ಎಂದು ಬರೆದಿದ್ದಾರೆ.

ನಾನು ಕಳೆದ 10 ವರ್ಷ ಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಇಲ್ಲಿಗೆ ಬರುವ ಈ ನವಿಲು ಆಕ್ಟೋಬರ್ ವರೆಗೆ ಇಲ್ಲಿಯೇ ನೆಲೆಸಿರುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಹೇಳಿದಂತೆ ಈ ನವಿಲು ದೆಹಲಿಯ ವಿಕಾಶ್‌ಪುರಿ ಪ್ರದೇಶದಲ್ಲಿ (Vikaspuri area)ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಇನ್ಸ್ಟಾದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

Follow Us:
Download App:
  • android
  • ios