Asianet Suvarna News Asianet Suvarna News

ಹೊಸ 3 ಟಯರ್‌ ಎಕಾನಮಿ ಕೋಚ್‌ ದರ ಶೇ.8ರಷ್ಟು ಅಗ್ಗ!

* ನೂತನ ಹವಾನಿಯಂತ್ರಿತ ರೈಲು ಪ್ರಯಾಣವು ಅತೀ ಕಡಿಮೆ ದರದಲ್ಲಿ

* ಹೊಸ 3 ಟಯರ್‌ ಎಕಾನಮಿ ಕೋಚ್‌ ದರ ಶೇ.8ರಷ್ಟು ಅಗ್ಗ

Pay 8pc less for new AC 3 tier economy tickets pod
Author
Bangalore, First Published Aug 29, 2021, 4:04 PM IST

ನವದೆಹಲಿ(ಆ.29): ನೂತನ ಹವಾನಿಯಂತ್ರಿತ 3-ಟಯರ್‌ ಎಕಾನಮಿ ಕೋಚ್‌ಗಳ ಪ್ರಯಾಣದ ದರವು ಹಾಲಿ ಇರುವ 3-ಟಯರ್‌ ಎಸಿ ಕೋಚ್‌ಗಳ ದರಕ್ಕಿಂತ ಶೇ.8ರಷ್ಟುಅಗ್ಗ ಇರಲಿದೆ. ತನ್ಮೂಲಕ ನೂತನ ಹವಾನಿಯಂತ್ರಿತ ರೈಲು ಪ್ರಯಾಣವು ಅತೀ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ರೈಲ್ವೆ ಹೇಳಿದೆ.

ದರ ನಿಗದಿಯಾದ ಹಿನ್ನೆಲೆಯಲ್ಲಿ ಈ ವಿಶೇಷ ಕೋಚ್‌ಗಳನ್ನು ಹಾಲಿ ಇರುವ ಮೇಲ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸೇರಿಸಲಾಗುತ್ತದೆ. ಈ ರೈಲು ಪ್ರಯಾಣಕ್ಕೆ 300 ಕಿ.ಮೀಗೆ ಕನಿಷ್ಠ ದರ 440 ರು. ಆಗಿದ್ದು, 4951ರಿಂದ 5000 ಕಿ.ಮೀಗೆ ಮೂಲ ದರವು 3065 ರು. ಆಗಿರಲಿದೆ.

ಸಾಮಾನ್ಯ 3 ಎಸಿ ಕೋಚ್‌ಗಳಲ್ಲಿ 72 ಸೀಟುಗಳು ಇದ್ದರೆ, 3 ಎಸಿ ಎಕಾನಮಿ ಬೋಗಿಗಳಲ್ಲಿ 83 ಸೀಟುಗಳು ಇರು​ತ್ತ​ವೆ.

ಮುಂದಿನ ದಿನ ದಿನಗಳಲ್ಲಿ ಸ್ಲೀಪರ್‌ ಕ್ಲಾಸ್‌ಗಳ ಬದಲಾಗಿ ಪೂರ್ತಿಯಾಗಿ ಇದೇ ಕೋಚ್‌ಗಳನ್ನು ಮುಂದುವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

++​+

ಎಸಿ ಕೋಚ್‌ಗಳ ದರಕ್ಕೆ ಹೋಲಿಸಿದರೆ ಈ ವಿಶೇಷ ಕೋಚ್‌ಗಳ ದರವು ಕಡಿಮೆಯೇ ಇದೆ. ಆದರೆ ಸ್ಲೀಪರ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸೆಳೆಯುವುದೇ ಈ ವಿಶೇಷ ಕೋಚ್‌ಗಳ ಪ್ರಮುಖ ಗುರಿಯಾಗಿದೆ. ಹೀಗಾಗಿ ಸಾಮಾನ್ಯ ಎಸಿ ಕೋಚ್‌ಗಳ ಪ್ರಯಾಣಿಕರಿಗೆ ಇದು ಅಗ್ಗ ಎನಿಸಿದರೂ, ಸಾಮಾನ್ಯ ಸ್ಲೀಪರ್‌ ಕ್ಲಾಸ್‌ನ ಪ್ರಯಾಣಿಕರಿಗೆ ಈ ದರ ದುಬಾರಿಯೇ ಎನಿಸಬಹುದು.

3-ಟಯರ್‌ ಎಕಾನಮಿ ಬೋಗಿಗಳ ವಿಶೇಷ ರೈಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌-ಜೈಪುರ ಮಾರ್ಗದಲ್ಲಿ ಸೆ.6ರಿಂದಲೇ ನಿಯೋಜನೆಯಾಗಲಿದ್ದು, ಶನಿವಾರದಿಂದಲೇ ಟಿಕೆಟ್‌ ಕಾಯ್ದಿರಿಸುವಿಕೆಯೂ ಆರಂಭವಾಗಿದೆ. ಇದೇ ಹಣಕಾಸು ವರ್ಷದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸುಮಾರು 806 ಹೊಸ ಕೋಚ್‌ಗಳನ್ನು ಸೇವೆಗೆ ನಿಯೋಜಿಸುವುದು ರೈಲ್ವೆ ಇಲಾಖೆ ಗುರಿ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲಿನ ವಿಶೇಷತೆಗಳು

* ಸಾಮಾನ್ಯ 3 ಎಸಿ ಕೋಚ್‌ಗಳಲ್ಲಿ 72 ಸೀಟುಗಳು

* ಆದರೆ 3 ಎಸಿ ಎಕಾನಮಿ ಬೋಗಿಗಳಲ್ಲಿ 83 ಸೀಟುಗಳು

* ಸಾಮಾನ್ಯ ಎಸಿ ಕೋಚ್‌ಗಳಲ್ಲಿ 2 ಸೀಟುಗಳಿಗೆ ಅವಕಾಶ

* ಅದನ್ನು 3 ಎಸಿ ಕೋಚ್‌ಗಳಲ್ಲಿ 3ಕ್ಕೆ ಏರಿಸಿದ ರೈಲ್ವೆ ಇಲಾಖೆ

* ಪ್ರಸ್ತುತ ಹಣಕಾಸು ವರ್ಷದಲ್ಲಿ 806 ಹೊಸ ಕೋಚ್‌ಗಳು ಸೇವೆಗೆ

Follow Us:
Download App:
  • android
  • ios