ಜನರ ಸಮಸ್ಯೆ ಆಲಿಸಲು ಕುಗ್ರಾಮಕ್ಕೆ ತೆರಳಿದ ಡಿಸಿಎಂ ಪವನ್ ಕಲ್ಯಾಣ್ ಹಲವು ಮಹಿಳೆಯರು ಬರಿಗಾಲಲ್ಲೇ ಓಡಾಡುತ್ತಿರುವುದನ್ನು ನೋಡಿದ್ದಾರೆ. ಇದರ ಪರಿಣಾಮ ಇಡೀ ಗ್ರಾಮದ ಜನತೆಗೆ ಪವನ್ ಕಲ್ಯಾಣ್ ಹೊಸ ಚಪ್ಪಲಿ ಕೊಡಿಸಿದ ವಿಶೇಷ ಘಟನೆ ನಡೆದಿದೆ.
ಆಂಧ್ರ ಪ್ರದೇಶ(ಏ.19) ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಅರಾಕು ಹಾಗೂ ದುಂಬ್ರಿಗುಡ ಪ್ರದೇಶಗಳಿಗೆ 2 ದಿನದ ಪ್ರವಾಸ ಮಾಡಿದ್ದಾರೆ. ಕುಗ್ರಾಮಗಳಿಗೆ ಭೇಟಿ ನೀಡಿ ಅವರ ಜನರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಈ ಭೇಟಿ ವೇಳೆ ಪವನ್ ಕಲ್ಯಾಣ್ ಪೆಡಪಾಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹಲವು ಹಿರಿಯರು ಸೇರಿದಂತೆ ಗ್ರಾಮದ ಬಹುತೇಕರು ಬರಿಗಾಲಲ್ಲೇ ಓಡಾಡುತ್ತಿರುವುದನ್ನು ಪವನ್ ಕಲ್ಯಾಣ್ ಗಮನಿಸಿದ್ದಾರೆ. ಪಂಗಿ ಮಿತ್ತು ಅನ್ನೋ ಅಜ್ಜಿ ಕೂಡ ಬರಿಗಾಲ್ಲೇ ನಡೆದಾಡುತ್ತಿರುವುದ ನೋಡಿದ ಪವನ್ ಕಲ್ಯಾಣ್ ಮರುಗಿದ್ದಾರೆ. ತಕ್ಷಣವೇ ಸಿಬ್ಬಂದಿ ಕರೆ ಇಡೀ ಗ್ರಾಮಕ್ಕೆ ಹೊಸ ಚಪ್ಪಲಿ ಕೊಡಿಸಲು ಸೂಚಿಸಿದ್ದಾರೆ.
ಈ ಗ್ರಾಮದಲ್ಲಿ ಎಷ್ಟು ಮಂದಿ ಇದ್ದಾರೆ?
ಪೆಡಪಾಡು ಗ್ರಾಮ ಅತ್ಯಂತ ಕುಗ್ರಾಮವಾಗಿದೆ. ಇಲ್ಲಿ ಹೆಚ್ಚಿನ ಮನಗಳಿಲ್ಲ. ಆದರೆ ಜನರು ಬದುಕು ದುಸ್ತರವಾಗಿದೆ. ಈ ಗ್ರಾಮದ ಬಹುತೇಕರು ಚಪ್ಪಲಿ ಹಾಕದೇ ಓಡಾಡುತ್ತಾರೆ. ಕಾರಣ ಇಲ್ಲಿನ ಗ್ರಾಮಸ್ಥರಿಗೆ ಚಪ್ಪಲಿ ಖರೀದಿ ಕೂಡ ದುಬಾರಿಯಾಗಿದೆ. ಹೀಗಾಗಿ ಹಲವರು ಚಪ್ಪಲಿ ಧರಿಸದೇ ತಿರುಗಾಡುತ್ತಾರೆ. ಗ್ರಾಮದ ಭೇಟಿ ವೇಳೆ ಗಮನಿಸಿದ ಪವನ್ ಕಲ್ಯಾಣ್, ಗ್ರಾಮಸ್ಥರ ಪರಿಸ್ಥಿತಿ ನೋಡಿ ಮರುಗಿದ್ದಾರೆ. ಬಳಿಕ ಸಿಬ್ಬಂದಿಯನ್ನು ಕರೆಸಿ ಈ ಗ್ರಾಮದಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಪ್ರಶ್ನಿಸಿದ್ದರೆ. ಗ್ರಾಮ ಪಂಚಾಯಿತ್ ಆಧಿಕಾರಿಗಳು, ಜಿಲ್ಲಾಧಿಕಾರಿಗಳು ತಕ್ಷಣವೇ ಈ ಕುರಿತು ಮಾಹಿತಿ ನೀಡಿದ್ದಾರೆ.
ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪವನ್ ಪುತ್ರ: ಮೃತ್ಯು ಗೆದ್ದ ಮಾರ್ಕ್ ಶಂಕರ್!
ಗ್ರಾಮದಲ್ಲಿರುವ 350 ಮಂದಿಗೆ ಹೊಸ ಚಪ್ಪಲಿ
ಅಧಿಕಾರಿಗಳು ಈ ಗ್ರಾಮದಲ್ಲಿ ಸರಿಸುಮಾರು 350 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಕರೆದು, ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರಿಗೂ ಚಪ್ಪಲಿ ಕೊಡಿಸಲು ಸೂಚಿಸಿದ್ದಾರೆ. ಪ್ರತಿ ಮನೆ ಮನೆಗೆ ತೆರಳಿ ಚಪ್ಪಲಿ ನೀಡಬೇಕು ಎಂದು ಸೂಚಿಸಿದ್ದಾರೆ. ಇದರಂತೆ ಈ ಗ್ರಾಮದ ನಿವಾಸಿಗಳಿಗೆ ಚಪ್ಪಲಿ ನೀಡಲಾಗುತ್ತಿದೆ.
ಪವನ್ ಕಲ್ಯಾನ್ ಸ್ಥಳದಲ್ಲೇ ಘೋಷಿಸಿದ ನಿರ್ಧಾರದಿಂದ ಗ್ರಾಮಸ್ಥರು ಖುಷ್
ಪವನ್ ಕಲ್ಯಾಣ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನೋಡಿ ತಕ್ಷಣ ಚಪ್ಪಲಿ ಕೊಡಿಸುವುದಾಗಿ ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಈ ನಿರ್ಧಾರಕ್ಕೆ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಪವನ್ ಕಲ್ಯಾಣ್ ಸರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಗ್ರಾಮಕ್ಕೆ ಯಾವ ಪ್ರಮುಖ ನಾಯಕರು ಭೇಟಿ ನೀಡುತ್ತಿರಲಿಲ್ಲ. ನಮ್ಮ ಸಮಸ್ಯೆಗಳನ್ನು ಸರ್ಕಾರದ ಪ್ರತಿನಿಧಿಗಳು ಕೇಳುತ್ತಿರಲಿಲ್ಲ. ಆಧರೆ ಪವನ್ ಸರ್ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ನಮ್ಮ ಕೆಲ ವೈಯುಕ್ತಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ನಾವು ಹೇಳದೆ ಮನಗಂಡಿದ್ದಾರೆ. ಎಲ್ಲರಿಗೂ ಹೊಸ ಚಪ್ಪಲಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಸಂತಸ ಹಂಚಿಕೊಂಡಿದ್ದಾರೆ.
ನಮ್ಮ ಗ್ರಾಮಕ್ಕೆ ಸ್ವತಃ ಉಪ ಮುಖ್ಯಮಂತ್ರಿಗಳೇ ಆಗಮಿಸಿದ್ದಾರೆ. ಸಮಸ್ಯೆ ಆಲಿಸಿ ಪರಿಹಾರಕ್ಕೆ ಸ್ಥಳದಲ್ಲೇ ಸೂಚಿಸಿದ್ದಾರೆ. ಚಪ್ಪಲಿ ಕೊಡಿಸಿದ್ದಾರೆ. ಇತರ ಮೂಲಭೂತ ಸೌಕರ್ಯದ ಭರವಸೆ ನೀಡಿದ್ದಾರೆ. ನಮ್ಮ ಗ್ರಾಮದ ಪ್ರತಿಯೊಬ್ಬರು ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದಾರೆ.
ವಕ್ಫ್ ಬಿಲ್ ಬೆಂಬಲಿಸಿದ ಜನಸೇನಾ ಪಾರ್ಟಿ
ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಕೇಂದ್ರ ಸರ್ಕಾರ ತಂದಿರುವ ವಕ್ಫ್ ಬಿಲ್‌ಗೆ ಸಂಪೂರ್ಣ ಬೆಂಬಲ ನೀಡಿದೆ. ಈ ಕುರಿತು ಪ್ರಕರ ಮಾತುಗಳಲ್ಲಿ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದರು.
ಮಗ ಬದುಕುಳಿಯುತ್ತಿದ್ದಂತೆ ತಿರುಪತಿಗೆ ಬಂದು ಮುಡಿ ನೀಡಿದ ಪವನ್ ಕಲ್ಯಾಣ್ ಪತ್ನಿ
