ಮಗ ಬದುಕುಳಿಯುತ್ತಿದ್ದಂತೆ ತಿರುಪತಿಗೆ ಬಂದು ಮುಡಿ ನೀಡಿದ ಪವನ್ ಕಲ್ಯಾಣ್ ಪತ್ನಿ
ಸಿಂಗಾಪುರದಲ್ಲಿ ನಡೆದ ಘೋರ ಬೆಂಕಿ ಅವಘಡದಿಂದ ಪಾರಾಗಿ ಮಗ ಬದುಕುಳಿಯುತ್ತಿದ್ದಂತೆ ತಿರುಪತಿಗೆ ಬಂದ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಅಲ್ಲಿ ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ.

ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ. ಸಿಂಗಾಪುರದಿಂದ ಭಾರತಕ್ಕೆ ಬಂದ ತಕ್ಷಣ, ಭಾನುವಾರ ಸಂಜೆ ಅವರು ತಿರುಮಲ ತಲುಪಿದರು. ಅನ್ನಾ ಲೆಜಿನೋವಾ ತಿರುಮಲ ಬೆಟ್ಟದ ಮೇಲಿರುವ ಗಾಯತ್ರಿ ಸದನದಲ್ಲಿ ರಾತ್ರಿ ತಂಗಲಿದ್ದಾರೆ. ಸಿಂಗಾಪುರದಿಂದ ಭಾರತಕ್ಕೆ ಬಂದ ತಕ್ಷಣ, ಭಾನುವಾರ ಸಂಜೆ ಅವರು ತಿರುಮಲ ತಲುಪಿದರು. ನಂತರ ಮುಡಿ ನೀಡಿದ ಅನ್ನಾ ಲೆಜಿನೋವಾ ತಿರುಮಲ ಬೆಟ್ಟದ ಮೇಲಿರುವ ಗಾಯತ್ರಿ ಸದನದಲ್ಲಿ ರಾತ್ರಿ ತಂಗಿದ್ದಾರೆ.
ಹರಕೆಯ ಭಾಗವಾಗಿ ಅನ್ನಾ ಲೆಜಿನೋವಾ ಶ್ರೀನಿವಾಸನಿಗೆ ತಲೆಕೂದಲು ಅರ್ಪಿಸಿದರು. ಸಿಂಗಾಪುರದಲ್ಲಿ ಅವರ ಚಿಕ್ಕ ಮಗ ಮಾರ್ಕ್ ಶಂಕರ್ ಓದುತ್ತಿರುವ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಗಾಯಗೊಂಡರೂ, ಪ್ರಾಣಾಪಾಯದಿಂದ ಪಾರಾಗಿದ್ದರಿಂದ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನವನ್ನು ಕುಟುಂಬದೊಂದಿಗೆ ಪಡೆಯಲು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಿರ್ಧರಿಸಿದರು. ಅದರಂತೆ ತಿರುಪತಿಗೆ ಬಂದ ಅನ್ನಾ ಮಗನ ರಕ್ಷಿಸಿದ್ದಕ್ಕಾಗಿ ತಿಮ್ಮಪ್ಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅನ್ನಾ ಲೆಜಿನೋವಾ ಜನ್ಮತಃ ರಷ್ಯನ್ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಆಗಿರುವುದರಿಂದ ತಿರುಮಲದಲ್ಲಿರುವ ಗಾಯತ್ರಿ ಸದನದಲ್ಲಿ ಟಿಟಿಡಿ ಉದ್ಯೋಗಿಗಳ ಸಮ್ಮುಖದಲ್ಲಿ ಡಿಕ್ಲರೇಷನ್ ಪತ್ರಗಳ ಮೇಲೆ ಸಹಿ ಹಾಕುವ ಮೂಲಕ ದೇವಾಲಯದ ನಿಯಮಗಳನ್ನು ಪಾಲಿಸಿದರು. ವೆಂಕಟೇಶ್ವರ ದೇವರಲ್ಲಿ ನಂಬಿಕೆ ಇಡುತ್ತೇನೆ ಮತ್ತು ಹಿಂದೂ ಆಚರಣೆಗಳಲ್ಲಿ ಭಾಗವಹಿಸಲು ಒಪ್ಪಿಕೊಂಡೆ ಎಂದು ಈ ಫಾರ್ಮ್‌ನಲ್ಲಿ ಬರೆದಿರುತ್ತದೆ ಎಂಬ ಮಾಹಿತಿ ಇದೆ.
ನಂತರ ಸಾಮಾನ್ಯ ಭಕ್ತರಂತೆ ಕಲ್ಯಾಣಕಟ್ಟೆಗೆ ಹೋಗಿ ಅನ್ನಾ ಲೆಜಿನೋವಾ ತಲೆಕೂದಲು ಅರ್ಪಿಸಿದರು. ಪವನ್ ಕಲ್ಯಾಣ್ ಅವರ ಪತ್ನಿ ಬಂದಿದ್ದಾರೆಂದು ತಿಳಿದು ಅವರನ್ನು ನೋಡಲು ಭಕ್ತರು ಮುಗಿಬಿದ್ದರು.
ಮೊದಲು ವರಾಹಸ್ವಾಮಿಯನ್ನು ದರ್ಶನ ಮಾಡಿದ ಪವನ್ ಕಲ್ಯಾಣ್ ಅವರ ಪತ್ನಿ, ಸೋಮವಾರ ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ತಿರುಮಲೇಶನ ದರ್ಶನ ಪಡೆಯಲಿದ್ದಾರೆ.
ಏಪ್ರಿಲ್ 8 ರಂದು ಮಾರ್ಕ್ ಭಾಗವಹಿಸಿದ್ದ ಬೇಸಿಗೆ ಶಿಬಿರದಲ್ಲಿ ಬೆಂಕಿ ಅವಘಡ ನಡೆದಿತ್ತು. ಬೆಂಕಿ ಅನಾಹುತದಲ್ಲಿ ಮಾರ್ಕ್‌ನ ಕೈ ಮತ್ತು ಕಾಲುಗಳಲ್ಲಿ ಸುಟ್ಟ ಗಾಯಗಳಾಗಿದ್ದು, ಹೊಗೆಯನ್ನು ಉಸಿರಾಡಿದ್ದರಿಂದ ಅಸ್ವಸ್ಥನಾಗಿದ್ದ. ಇದಾದ ನಂತರ ತಾಯಿ ಅನ್ನಾ ತನಗೆದುರಾದ ಈ ಭಯಾನಕ ಅಗ್ನಿಪರೀಕ್ಷೆ ಮತ್ತು ಮಗನ ಅದ್ಭುತ ಚೇತರಿಕೆಯ ನಂತರ, ಕೂದಲನ್ನು ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಕೃತಜ್ಞತೆಯ ಸಂಕೇತವಾಗಿ ಅರ್ಪಿಸಿದ್ದಾರೆ.
ಈ ನಡುವೆ ಪವನ್ ಕಲ್ಯಾಣ್ ಕೂಡ ತಮ್ಮ ಮಗ ಪ್ರಸ್ತುತ ಸ್ಥಿರನಾಗಿದ್ದಾನೆ ಮತ್ತು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಿಂಗಾಪುರದಲ್ಲಿ ನನ್ನ ಮಗ ಮಾರ್ಕ್ ಶಂಕರ್ ಅವರ ಬೇಸಿಗೆ ಶಿಬಿರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಂಕಿ ಅವಘಡದ ನಂತರ, ಪ್ರಪಂಚದೆಲ್ಲೆಡೆಯ ಪ್ರಾರ್ಥನೆಗಳು, ಕಾಳಜಿ ಮತ್ತು ಬೆಂಬಲದಿಂದ ನಾನು ಭಾವುಕನಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಬೆಂಬಲಕ್ಕೆ ನಿಂತಿದ್ದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಜನ ಸೇನಾ ಪಕ್ಷದ ನಾಯಕರು, ಜನ ಸೈನಿಕರು, ಹಿತೈಷಿಗಳು, ಚಲನಚಿತ್ರ ಭ್ರಾತೃತ್ವದ ಸದಸ್ಯರು, ಸ್ನೇಹಿತರು ಮತ್ತು ಪ್ರಪಂಚದೆಲ್ಲೆಡೆಯ ಬೆಂಬಲಿಗರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಾರ್ಕ್ ಶಂಕರ್ ಈಗ ಸ್ಥಿರವಾಗಿದ್ದು ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ನಿಮ್ಮ ಹೃತ್ಪೂರ್ವಕ ಸಂದೇಶಗಳು ನಿಜವಾಗಿಯೂ ನಮಗೆ ಬಲವನ್ನು ನೀಡಿವೆ ಎಂದು ಟ್ವಿಟ್ ಮಾಡಿದ್ದರು.