ಪಾಟ್ನಾ(ನ.19): ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಆಘಾತಕಾರಿ ವಿಚಾರವೊಂದು ವರದಿಯಾಗಿದೆ. ಇಲ್ಲಿ ಚಿಕಿತ್ಸೆಗೆಂದು ಬಂದ ವ್ಯಕ್ತಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವುದು ಬಯಲಿಗೆ ಬಂದಿದೆ. ಆದರೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಈ ವಿಚಾರವಾಗಿ ರೋಗಿಯ ಕುಟುಂಬಸ್ಥರು ಜಗಳ ತೆಗೆದಿದ್ದಾರೆ. ಈ ವಿಚಾರ ತಾರಕಕ್ಕೇರಿದಾಗ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ 27 ವರ್ಷದ ಯುವ ನಟಿ

ಪಾಟ್ನಾದ ಕಂಕಡಭಾಗ್ 11ನೇ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ದಿನದ ಹಿಂದೆ ಬೆಗುಸುರಾಯ್‌ನ ಯುವಕನೊಬ್ಬ ಹೊಟ್ಟೆ ನೋವೆಂದು ಇಲ್ಲಿ ಚಿಕಿತ್ಸೆಗೆ ಆಗಮಿಸಿದ್ದ. ತಪಾಸಣೆ ನಡೆಸಿದ್ದ ವೈದ್ಯರು ಕಿಡ್ನಿ ಸ್ಟೋನ್ ಇದೆ, ಆಪರೇಷನ್ ನಡೆಸಿ ತೆಗೆಯಬೇಕೆಂದಿದ್ದರು. ಆದರೆ ಆಪರೇಷನ್ ಬಳಿಕ ಕುಟುಂಬ ಸದಸ್ಯರಿಗೆ ಇಲ್ಲಿನ ವೈದ್ಯರು ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ ಎಂದು ತಿಳಿದಿದೆ. 

ಈ ವಿಚಾರ ತಿಳಿಯುತ್ತಿದ್ದಂತೆಯೇ ದೊಡ್ಡ ಜಗಳವೇ ನಡೆದಿದೆ. ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಸಿಬ್ಬಂದಿ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕುಟುಂಬ ಸದಸ್ಯರನ್ನು ಶಾಂತಗೊಳಿಸಿದ್ದಾರೆ.