ಅಪಘಾತದಲ್ಲಿ ಪೋಷಕರು ಬಿದ್ದರೂ ಬೈಕ್‌ನಲ್ಲೇ ಅರ್ಧ ಕಿ.ಮಿ ಸಾಗಿದ ಪುಟ್ಟ ಕಂದ, ಮುಂದೇನಾಯ್ತು?
ಪಟ್ಟ ಮಗುವಿನೊಂದಿಗೆ ದಂಪತಿ ಬೈಕ್ ಮೂಲಕ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಪೋಷಕರಿಬ್ಬರು ರಸ್ತೆ ಮೇಲೆ ಬಿದ್ದಿದ್ದಾರೆ. ಆದರೆ ಬೈಕ್ ಟ್ಯಾಂಕ್ ಮೇಲೆ ಕುಳಿತಿದ್ದ ಪುಟ್ಟ ಕಂದ ಹಾಗೂ ಬೈಕ್ ಬರೋಬ್ಬರಿ 500 ಮೀಟರ್‌ಗೂ ಹೆಚ್ಚು ದೂರ ಅದೇ ವೇಗದಲ್ಲಿ ಸಾಗಿದೆ. ಹೆದ್ದಾರಿಯಲ್ಲಿ ನಡೆದ ಈ ಅಪಘಾತದಲ್ಲಿ ಮಗು ಹಾಗೂ ಪೋಷಕರಿಗೆ ಏನಾಯ್ತು?
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಹೆದ್ದಾರಿಯಲ್ಲಿ ರಸ್ತೆಯಲ್ಲಿ ನಡೆದ ಅಪಘಾತದ ಈ ವಿಡಿಯೋ ಒಂದು ಕ್ಷಣ ಝಲ್ ಎನಿಸುವಂತಿದೆ. ಪುಟ್ಟ ಕಂದನ ಬೈಕ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ದಂಪತಿ ಹೆದ್ದಾರಿಯಲ್ಲಿ ಸಾಗಿದ್ದಾರೆ. ಆದರೆ ರಾಂಗ್ ಸೈಡ್‌ನಿಂದ ದ್ವಿಚಕ್ರ ವಾಹನ ಸವಾರನೊಬ್ಬ ಆಗಮಿಸಿದ್ದಾನೆ. ಇದರ ಪರಿಣಾಮ ಈ ದಂಪತಿಯ ಬೈಕ್ ಎದುರಿನಿಂದ ಬಂದ್ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಪತಿ ಹಾಗೂ ಪತ್ನಿ ಇಬ್ಬರು ರಸ್ತೆ ಮೇಲೆ ಬಿದ್ದಿದ್ದಾರೆ. ಆದರೆ ಬೈಕ್ ಹಾಗೂ ಟ್ಯಾಂಕ್ ಮೇಲೆ ಕುಳಿತಿದ್ದ ಪುಟ್ಟ ಮಗು ಅದೇ ವೇಗದಲ್ಲಿ ಮುಂದೆ ಸಾಗಿದೆ. 500 ಮೀಟರ್‌ಗೂ ಹೆಚ್ಚು ದೂರ ಸಾಗಿದ ಬೈಕ್ ರಸ್ತೆಯ ವಿಭಜಕ್ಕೆ ಡಿಕ್ಕಿಯಾಗಿ ಮಗು ಹುಲ್ಲು ಹಾಗೂ ಹೂವಿನ ಹೊದಿಕೆ ಮೇಲೆ ಬಿದ್ದು ಪವಾಡ ಸದೃಶ್ಯವಾಗಿ ಪಾರಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಈ ವಿಡಿಯೋ ಎಲ್ಲಿ ನಡೆದಿರುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇಷ್ಟೇ ಅಲ್ಲ ಈ ವಿಡಿಯೋ ಅಸಲಿಯೋ ನಕಲಿಯೋ ಅನ್ನೋ ಕುರಿತೂ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ವಿಡಿಯೋ ಮಾತ್ರ ಒಂದು ಕ್ಷಣ ಬೆಚ್ಚಿ ಬೀಳಿವಂತೆ ಮಾಡುತ್ತಿದೆ. ಹೆದ್ದಾರಿ ರಸ್ತೆಯಲ್ಲಿ ಎಲ್ಲಾ ವಾಹನಗಳು ವೇಗವಾಗಿ ಸಾಗುತ್ತಿದೆ. ಲಾರಿ, ಕಾರು, ಬೈಕ್ ಸೇರಿದಂತೆ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿದೆ.
ಆಟವಾಡುತ್ತಿದ್ದ ಬಾಲಕಿ ಹೊತ್ತೊಯ್ಯಲು ಮುಂದಾದ ಗಿಡುಗ, ಜುಮ್ಮೆನಿಸುವ ಘಟನೆ ಸೆರೆ!
ಇದೇ ರಸ್ತೆಯಲ್ಲಿ ಬೈಕ್ ಮೇಲೆ ದಂಪತಿ ಮಗುವನ್ನು ಕೂರಿಸಿಕೊಂಡು ಸಾಗಿದ್ದಾರೆ. ವೇಗವಾಗಿ ಸಾಗುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ದ್ವಿಚಕ್ರವಾಹನವೊಂದು ಬಂದಿದೆ. ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಪತಿ ಹಾಗೂ ಪತ್ನಿ ಇಬ್ಬರು ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾರೆ. ಆದರೆ ಬೈಕ್ ಬಿದ್ದಿಲ್ಲ. ಇತ್ತ ಬೈಕ್ ಟ್ಯಾಂಕ್ ಮೇಲೆ ಕುಳಿತಿದ್ದ ಪುಟ್ಟ ಮಗುವನ್ನು ಹೊತ್ತು ಬೈಕ್ ಅದೇ ವೇಗದಲ್ಲಿ ಸಾಗಿದೆ.
ಸರಿಸುಮಾರು 500 ಮೀಟರ್‌ಗೂ ದೂರ ಮಗು ಹಾಗೂ ಬೈಕ್ ಸಾಗಿದೆ. ಎಡಭಾಗದಲ್ಲಿದ್ದ ಬೈಕ್ ಸಾಗುತ್ತಲೇ ಬಲ ಭಾಗಕ್ಕೆ ಬಂದಿದೆ. ಒನ್ ವೇ ಕಾರಣ ಬಲಭಾಗದ ಅಗಲವಾದ ವಿಭಜಕದಲ್ಲಿ ಹುಲ್ಲು, ಹೂವಿನ ಗಿಡಗಳನ್ನು ನೆಡಲಾಗಿದೆ. ವೇಗವಾಗಿ ಸಾಗಿ ಬಂದ ಬೈಕ್ ವಿಭಜಕ್ಕೆ ಡಿಕ್ಕಿಯಾಗಿದೆ. ಇದರಿಂದ ಮಗು ಹುಲ್ಲು ಹಾಗೂ ಹೂವಿನ ಗಿಡಗಳ ಬಳಿ ಬಿದ್ದಿದೆ. ಅದೃಷ್ಠವಶಾತ್ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಕೆಲ ತರಚಿದ ಗಾಯ ಹೊರತುಪಡಿಸಿದರೆ ಮಗು ಆರೋಗ್ಯವಾಗಿದೆ. ತಕ್ಷವೇ ವಾಹನ ಸವಾರರು ನಿಲ್ಲಿಸಿ ಮಗುವನ್ನು ಎತ್ತಿಕೊಂಡಿದ್ದಾರೆ. ಆದರೆ ನೆಲಕ್ಕೆ ಬಿದ್ದ ಪೋಷಕರ ಪರಿಸ್ಥಿತಿ ಏನಾಗಿದೆ ಅನ್ನೋ ಮಾಹಿತಿ ಈ ವಿಡಿಯೋದಲ್ಲಿಲ್ಲ.
ಮಾರುಕಟ್ಟೆಗೆ ಬಂದಿದೆ ಸಿಮೆಂಟ್‌ನಿಂದ ತಯಾರಿಸಿದ ಬೆಳ್ಳುಳ್ಳಿ, ವಿಡಿಯೋ ಬೆನ್ನಲ್ಲೇ ಹೆಚ್ಚಿದ ಆತಂಕ!