ಮೆಟ್ರೋ ರೈಲಿನ ಮಹಿಳಾ ಕೋಚ್‌ನಲ್ಲಿ ಮಹಿಳೆಯರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಎಲ್ಲರೂ ಹಾವು ಹಾವು ಎಂದು ಕೂಗಿಕೊಂಡು ಸೀಟ್ ಮೇಲೆ ಹತ್ತಿದರೆ, ಕೂಗಾಟ ಚೀರಾಟದಿಂದ ರೈಲು ತುರ್ತು ನಿಲುಗಡೆ ಮಾಡಿದ ಘಟನೆ ನಡೆದಿದೆ. 

ದೆಹಲಿ(ಜೂ.20) ಮಹಿಳೆಯರ ಸುಗಮ ಸಂಚಾರ, ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಮೆಟ್ರೋ ರೈಲಿನಲ್ಲಿ ಮಹಿಳಾ ಕೋಚ್ ಪರಿಚಯಿಸಲಾಗಿದೆ. ಆದರೆ ಈ ಸುರಕ್ಷಿತ ಕೋಚ್‌ನಲ್ಲಿ ಮಹಿಳೆಯರು ಆತಂಕಗೊಂಡ ಘಟನೆ ನಡದಿದೆ. ಕಾರಣ ಹಾವು. ದೆಹಲಿ ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕಕ್ಕಾಬಿಕ್ಕಿಯಾಗಿದ್ದಾರೆ. ಹಾವು, ಹಾವು ಎಂದು ಕೂಗಿಕೊಂಡಿದ್ದಾರೆ. ಚೀರಾಟ, ಹಾರಾಟ ಜೋರಾಗಿದೆ. ಎಲ್ಲಾ ಪ್ರಯಾಣಿಕರು ಸೀಟು ಮೇಲೆ ಹತ್ತಲು ಪ್ರಯತ್ನಿಸಿದ್ದಾರೆ. ಕಿಕ್ಕಿರಿದ ಪ್ರಯಾಣಿಕರ ಕಾರಣದಿಂದ ಎಲ್ಲರಿಗೂ ಸಾಧ್ಯವಾಗಿಲ್ಲ. ಮಹಿಳಾ ಪ್ರಯಾಣಿಕರ ಚೀರಾಟದಿಂದ ಮೆಟ್ರೋ ರೈಲನ್ನು ಮುಂದಿನ ನಿಲುಗಡೆಯಲ್ಲಿ ತುರ್ತು ನಿಲುಗಡೆ ಮಾಡಿ ಎಲ್ಲಾ ಪ್ರಯಾಣಿಕರನ್ನು ಇಳಿಸಿದ ಘಟನೆ ನಡೆದಿದೆ.

ಲೇಡಿಸ್ ಕೋಚ್‌ನಲ್ಲಿ ಹಾವು

ದೆಹಲಿ ಮೆಟ್ರೋ ಎಂದಿನಂತೆ ಸೇವೆ ನೀಡುತ್ತಿತ್ತು. ಮೆಟ್ರೋದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಈ ಪೈಕಿ ಲೇಡಿಸ್ ಕೋಚ್‌ನಲ್ಲಿ ಆತಂಕದ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರು ಹಾವು ಹಾವು ಎಂದು ಕೂಗಿಕೊಂಡು ಮೆಟ್ರೋ ಸೀಟಿನ ಮೇಲೆ ಹತ್ತಿದ್ದಾರೆ. ಮೊದಲೇ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಮಹಿಳೆಯರು ಕೂಗಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ.

View post on Instagram

ವಿಡಿಯೋದಲ್ಲಿ ಹಾವು ಕಾಣಿಸಿಕೊಂಡ ಕುರಿತ ಯಾವುದೇ ದೃಶ್ಯವಿಲ್ಲ. ಆದರೆ ಮಹಿಳಾ ಪ್ರಯಾಣಿಕರು ಆತಂಕಗೊಂಡ ದೃಶ್ಯವಿದೆ. ಚೀರಾಡುತ್ತಾ ಮೆಟ್ರೋ ರೈಲಿನ ಸೀಟಿನ ಮೇಲೆ ಹತ್ತಿದ ದೃಶ್ಯವಿದೆ. ಪ್ರಯಾಣಿಕರು ಚೀರಾಟದ ಕಾರಣ ಮೆಟ್ರೋ ರೈಲನ್ನು ಮುಂದಿನ ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಲಾಗಿದೆ. ಸಿಬ್ಬಂದಿಗಳು ಆಗಮಿಸಿ ಪ್ರಯಾಣಿಕರನ್ನು ಇಳಿಸಿದ್ದಾರೆ. ಬಳಿಕ ಮೆಟ್ರೋ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಹಾವು ಪತ್ತೆಯಾಗಿಲ್ಲ. ಬಳಿಕ ಮೆಟ್ರೋ ಸಂಚಾರ ಪುನರ್ ಆರಂಭಗೊಂಡಿದೆ.

ಕಳ್ಳ ಹಾವು ಎಂದು ಜನರ ಪ್ರತಿಕ್ರಿಯೆ

ಮೆಟ್ರೋ ಲೇಡಿಸ್ ಕೋಚ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಮಹಿಳಾ ಪ್ರಯಾಣಿಕರು ಕೂಗಿದ್ದಾರೆ. ಯಾರೋ ಹಾವು ಹಾವು ಎಂದು ಕೂಗಿದ್ದಾರೆ. ಯಾರೂ ಕೂಡ ಹಾವನ್ನು ನೋಡಿಲ್ಲ. ಅದು ಕೂಡ ಮಹಿಳಾ ಕೋಚ್‌ನಲ್ಲೇ ಹಾವು ಓಡಾಡಿದೆ. ಇದಕ್ಕೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕಳ್ಳ ಹಾವು ಮಹಿಳಾ ಕೋಚ್‌ಗೆ ತೆರಳಿದೆ, ರಂಪಾಟ ನಡೆಸಿದೆ ಎಂದರೆ ಕಳ್ಳ ಹಾವಾಗಿರಬಹುದು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ಯಾರಿಗೂ ಕಂಡಿಲ್ಲ ಅದರೂ ಮಹಿಳೆಯರೂ ಹಾವು ಹಾವು ಎಂದು ಕೂಗಿದ್ದಾರೆ. ನಿಜಕ್ಕೂ ಹಾವು ಕಾಣಿಸಿಕೊಂಡಿತ್ತಾ ಅನ್ನೋದಕ್ಕೆ ಸ್ಪಷ್ಟತೆ ಇಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

View post on Instagram