ಲಖ​ನೌ(ಮಾ.06): ಲಕ್ಕಿ ಡ್ರಾ ಮೂಲಕ ಯುವ​ತಿ​ಯೊ​ಬ್ಬಳು ನಾಲ್ವರು ಯುವ​ಕರ ಪೈಕಿ ಒಬ್ಬ​ರನ್ನು ತನ್ನ ವರ​ನಾಗಿ ಆಯ್ಕೆ ಮಾಡಿ​ಕೊಂಡಿ​ರುವ ವಿಚಿ​ತ್ರ​ಕಾರಿ ಘಟನೆ ಉತ್ತರ ಪ್ರದೇ​ಶದ ಅಂಬೇ​ಡ್ಕರ್‌ನಗರ ಎಂಬ ಗ್ರಾಮ​ದಲ್ಲಿ ನಡೆ​ದಿದೆ.

ಈ ಘಟನೆ ನಡೆ​ಯುವ ಐದು ದಿನ​ಗ​ಳಿಗೂ ಮುನ್ನ ಯುವ​ತಿಯು ನಾಲ್ವರು ಯುವ​ಕ​ರೊಂದಿಗೆ ಮನೆ ಬಿಟ್ಟು ಓಡಿ ಹೋಗಿ​ದ್ದಳು. ಆ ಬಳಿಕ ನಾಲ್ವರು ಯುವ​ಕರ ಪೈಕಿ ಓರ್ವನ ಸಂಬಂಧಿ​ಕರ ಮನೆ​ಯಲ್ಲಿ ಆಶ್ರಯ ಪಡೆ​ದಿ​ದ್ದಳು. ಈ ಸಂಬಂಧ ವಿಚಾರ ತಿಳಿದ ಯುವತಿಯ ಪೋಷ​ಕರು ದೂರು ನೀಡಲು ಮುಂದಾ​ಗಿದ್ದು, ಈ ವೇಳೆ ಮಧ್ಯ​ಸ್ಥಿಕೆ ವಹಿ​ಸಿದ ಪಂಚಾ​ಯ್ತಿಯು ಈ ನಾಲ್ವರು ಯುವ​ಕರ ಪೈಕಿ ಒಬ್ಬರು ಯುವ​ತಿ​ಯನ್ನು ಮದ್ವೆ​ಯಾ​ಗಲು ಸೂಚಿ​ಸಿ​ದ್ದಾರೆ.

ಆದರೆ ಯಾರೊ​ಬ್ಬರೂ ಮದ್ವೆಗೆ ಮುಂದೆ ಬರದ ಹಾಗೂ ಯುವ​ತಿ​ಯು ಸಹ ಯಾರನ್ನೂ ಸಹ ಆಯ್ಕೆ ಮಾಡಲಿಲ್ಲ. ಹೀಗಾಗಿ 4 ಚೀಟಿ​ಗ​ಳಲ್ಲಿ ಹೆಸರು ಬರೆಸಿ ಒಂದನ್ನು ಎತ್ತಿಸಿ ವರ​ನನ್ನು ಆಯ್ಕೆ ಮಾಡ​ಲಾ​ಗಿದೆ.