* ಮನೆಯಲ್ಲಿ ಜಗಳ ಸಿಟ್ಟು ಮಾಡಿಕೊಂಡ ಬಾಲಕ* ಮನೆ ಬಿಟ್ಟಾತ ಗಡಿ ದಾಟಿ ಬಂದ* ಪಾಕಿಸ್ತಾನದ ಬಾಲಕನೀಗ ಭಾರತದಲ್ಲಿ

ಭುಜ್(ಆ.04): ಅಪ್ಪ ಅಮ್ಮ ತಮ್ಮ ಮಾತು ಕೇಳದಾಗ ಮಕ್ಕಳು ಕೋಪ ಪಟ್ಟುಕೊಳ್ಳುವುದು ಸಹಜ, ಅನೇಕ ಬಾರಿ ಮಕ್ಕಳು ಇದೇ ವಿಚಾರವಾಗಿ ಮನೆಯಿಂದ ಓಡಿ ಹೋದ ಪ್ರಕರಂಣಗಳೂ ವರದಿಯಾಗಿವೆ. ಆದರೀಗ ಬಲು ಅಪರೂಪದ ಹಾಗೂ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಒಬ್ಬ ಬಾಲಕನೊಬ್ಬ ಮನೆಯಲ್ಲಿ ಜಗಳವಾಡಿ ಮನೆಯಿಂದ ಓಡಿ ಹೋಗುವ ನಿರ್ಧಾರವನ್ನು ಅದೆಷ್ಟು ಗಂಭಿರವಾಗಿ ಪರಿಗಣಿಸಿದ್ದಾನೆಂದರೆ, ಆತ ಪಾಕಿಸ್ತಾನ ಬಿಟ್ಟು ಗಡಿ ದಾಟಿ ಭಾರತಕ್ಕೆ ಬಂದಿದ್ದಾನೆ.

ಖಜಾನೆ ಖಾಲಿ ಖಾಲಿ, ಪಾಕ್ ಪ್ರಧಾನಿ ಅಧಿಕೃತ ನಿವಾಸವನ್ನೇ ಬಾಡಿಗೆಗೆ ನೀಡಿದ ಇಮ್ರಾನ್ ಖಾನ್!

ಹೌದು ಪಾಕಿಸ್ತಾನ ಬಿಟ್ಟು ಬಂದ 15 ವರ್ಷದ ಬಾಲಕ ಗುಜರಾತ್‌ನ ಕಚ್‌ ಜಿಲ್ಲೆ ಬಳಿಯ ಕವ್ಡಾದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್‌ ಪಡೆಯ ಯೋಧರ ಕೈಯ್ಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಹುಡುಗ ಪಾಕಿಸ್ತಾನದ ಥಾರ್ಪರ್ಕರ್ ಜಿಲ್ಲೆಯ ಸಿಂಧ್ ಪ್ರಾಂತ್ಯದ ಸಾಹಿಚೋಕ್ ಪ್ರದೇಶದವನಾಗಿದ್ದು ಪ್ರಾಥಮಿಕ ವಿಚಾರಣೆಯಲ್ಲಿ ಹುಡುಗ ಮನೆ ಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ.

ಇನ್ನು ಕವ್ಡಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಲಕನ ಮೆಡಿಕಲ್ ಚೆಕ್‌ಅಪ್‌ ಮಾಡಿಸಿ, ಬಳಿಕ ಸ್ಥಳೀಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ. ಹುಡುಗ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿ ನಾನು ಬಿಟ್ಟು ಬಂದಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. 

ಲಾಡೆನ್‌ ರೀತಿ ಹತ್ಯೆ ತಪ್ಪಿಸಲು ಉಗ್ರ ಅಜರ್‌ಗೆ ಪಾಕ್‌ ರಕ್ಷಣೆ!

ಇನ್ನು ಗಡಿ ಭಾಗದಲ್ಲಿ ಮಕ್ಕಳು ಸಿಗುವುದು ಅಪರೂಪವೇನಲ್ಲ. ಜುಲೈ ತಿಂಗಳಲ್ಲಿ ಸಹ 12 ವರ್ಷದ ಬಾಲಕನನ್ನು ದಕ್ಷಿಣ ಬಾಂಗ್ಲಾ ಗಡಿಯ ಬಳಿ ಬಿಎಸ್ಎಫ್ ಯೋಧರು ಬಂಧಿಸಿದ್ದರು.